ಕೊಪ್ಪಳ :ಅಕ್ಟೋಬರ್ 13 : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿ, ಗಂಗಾವತಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಹಿರೇಬೆಣಕಲ್‌ನ ಎಮ್.ಎಮ್.ಡಿ.ಆರ್.ಎಸ್. ಇವರ ಸಂಯುಕ್ತಾಶ್ರಯದಲ್ಲಿ 2026-27ನೇ ಸಾಲಿನ 14 ವರ್ಷದೊಳಗಿನ ವಯೋಮಿತಿಯ ಮಕ್ಕಳ ರಾಜ್ಯ ಮಟ್ಟದ ಚದುರಂಗ (ಚೆಸ್) ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಉದ್ಘಾಟನಾ ಸಮಾರಂಭವು ಅಕ್ಟೋಬರ್ 15ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಗಂಗಾವತಿ ತಾಲೂಕಿನ ಹಿ ಹಿರೇಬೆಣಕಲ್‌ನ ಎಮ್.ಎಮ್.ಡಿ.ಆರ್.ಎಸ್. ಆವರಣದಲ್ಲಿ ನಡೆಯಲಿದೆ.
ರಾಜ್ಯ ಮಟ್ಟದ ಚದುರಂಗ (ಚೆಸ್) ಪಂದ್ಯಾವಳಿಗಳ ನಿಮಿತ್ತ ವೇದಿಕೆ ಕಾರ್ಯಕ್ರಮ, ಧ್ವಜಾರೋಹಣ, ಕ್ರೀಡಾಜ್ಯೋತಿ ಬೆಳಗಿಸುವುದು, ಪ್ರತಿಜ್ಞಾವಿಧಿ ಬೋಧನೆ, ಉದ್ಘಾಟನೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಹಿರೇಬೆಣಕಲ್ ಎಮ್.ಎಮ್.ಡಿ.ಆರ್.ಎಸ್. ಪ್ರಾಚಾರ್ಯರಾದ ರಾಜೇಶ್ವರಿ, ಮತ್ತು ರಾಮಲಿಂಗಪ್ಪ ಹಾಗೂ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್.ಬಿ. ನಟೇಶ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
