ಮುಂಡರಗಿ: ಅ.26: ತಾಲೂಕು ವ್ಯಾಪ್ತಿಯ ಡಂಬಳ ಗ್ರಾಮದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ (ಡಿ.ಪಿ.ಇ.ಪಿ) ಶಾಲೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಇದೇ ಸಮಯಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಪ್ಪ ಕಂಬಳಿ, ಶಾಲೆಯ ವಿವಿಧ ವಿಷಯಗಳ ಶಿಕ್ಷಕರಾದ ವೀಣಾ ಅಥಣಿ, ರೆಹನಾ ಬೇಗಂ ಅಕ್ಕಿ, ಪ್ರೇಮಾ ಲಮಾಣಿ, ಶಾಂತಾ ಲಮಾಣಿ, ಚೈತ್ರಾ ವಾಲ್ಮೀಕಿ, ಮತ್ತು ಅತಿಥಿ ಶಿಕ್ಷಕರಾದ ಸಾವಿತ್ರಿ ಮಾಳೆಕೊಪ್ಪ, ಪ್ರಿಯಾಂಕಾ ಮೇಗೂರ,ಬೋಧಕೇತರ ಸಿಬ್ಬಂದಿ ವರ್ಗದವರು, ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
