Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಯುನೆಸ್ಕೋದ ಉನ್ನತ ಮಟ್ಟದ ಉಸ್ತುವಾರಿ ತಂಡದಿAದ ವಿಶ್ವ ಪಾರಂಪರಿಕ ಸ್ಮಾರಕಗಳ ಪರಿಶೀಲನೆ

ಕೊಪ್ಪಳ: ಅಕ್ಟೋಬರ್ 26: ಯುನೆಸ್ಕೋದ ಉನ್ನತ ಮಟ್ಟದ ಉಸ್ತುವಾರಿ ತಂಡವು ಅಕ್ಟೋಬರ್ 25ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಿ ಜಿಲ್ಲೆಯ ವಿಶ್ವ ಪಾರಂಪರಿಕ ತಾಣಗಳ ವೀಕ್ಷಣೆ ನಡೆಸಿತು.

ಕೊಪ್ಪಳ ಜಿಲ್ಲೆಯ ಐತಿಹಾಸಿಕ ಆನೆಗೊಂದಿ (ಅಂಜನಾದ್ರಿ) ಹಾಗೂ ವಿಜಯನಗರ ಜಿಲ್ಲೆಯ ಹಂಪಿ ಸೇರಿದಂತೆ ಸುತ್ತಲಿನ ವಿವಿಧ ಹಂಪಿಯ ಸ್ಮಾರಕಗಳ ಸಂರಕ್ಷಣೆ ಮತ್ತು ಮಾಸ್ಟರ್ ಪ್ಲಾನ್ ಅನುಷ್ಠಾನದ ಬಗ್ಗೆ ಪರಿಶೀಲಿಸುವ ಹಿನ್ನೆಲೆಯಲ್ಲಿ ಯುನೆಸ್ಕೋದ ಉನ್ನತ ಮಟ್ಟದ ಉಸ್ತುವಾರಿ ತಂಡವು ಕೊಪ್ಪಳ ಜಿಲ್ಲೆಯ ಆನೆಗೊಂದಿ ಮತ್ತು ಅಂಜನಾದ್ರಿ ಬೆಟ್ಟದ ಸುತ್ತಲಿನ ಹಳೆಯ ಪರಂಪರೆ ಹಾಗೂ ಬಫರ್ ಜೋನ್ ಪ್ರದೇಶಗಳ ವಸ್ತುಸ್ಥಿತಿಯನ್ನು ವೀಕ್ಷಿಸಿತು.

ಕೊಪ್ಪಳ ಮತ್ತು ವಿಜಯನಗರ ಜಿಲ್ಲಾಡಳಿತ, ಭಾರತೀಯ ಪುರಾತತ್ವ ಇಲಾಖೆ ಹಾಗೂ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಈ ವೇಳೆ ಹಾಜರಿದ್ದು ಯುನೆಸ್ಕೋ ತಂಡಕ್ಕೆ ಮಹತ್ವದ ಮಾಹಿತಿ ನೀಡಿದರು. ಇದೆ ಸಂದರ್ಭದಲ್ಲಿ ಯುನೆಸ್ಕೋದ ಉನ್ನತ ಮಟ್ಟದ ಉಸ್ತುವಾರಿ ತಂಡವು ಸಭೆ ನಡೆಸಿ ಸ್ಮಾರಕಗಳ ಸಂರಕ್ಷಣಾ ಕ್ರಮಗಳ ಬಗ್ಗೆ ಚರ್ಚಿಸಿತು.

ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ, ವಿಜಯನಗರ ಜಿಲ್ಲಾಧಿಕಾರಿಗಳಾದ ಕವಿತಾ ಎಸ್ ಮನ್ನಿಕೇರಿ, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಸೇರಿದಂತೆ ಇತರರು ಇದ್ದರು.

Related posts

ಕೂಲಿ ಕಾರ್ಮಿಕರ ಮೇಲೆ ಗ್ರಾ.ಪಂ. ಅಧ್ಯಕ್ಷೆ‌ಯ ಪತಿಯಿಂದ ದಬ್ಬಾಳಿಕೆ.ರಕ್ಷಣೆ ನೀಡುವಂತೆ ಪಂಚಾಯತ್ ಇಓ ಮನವಿ

satyadarshana

ನಗರದಾದ್ಯಂತ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ

satyadarshana

ಬೆಂಗಳೂರಲ್ಲಿ ವಿದ್ಯುತ್‌ ಶಾಕ್‌, ಬಿರುಗಾಳಿಗೂ ವಿದ್ಯಾರ್ಥಿ ಸೇರಿ 3 ಜನ ಸಾವು: 7 ಮಂದಿಯನ್ನು ಬಲಿಪಡೆದ ಬೌರಿಂಗ್ ಆಸ್ಪತ್ರೆ ಕಂಪೌಂಡ್ ಬಳಿ ನಿಜಕ್ಕೂ ನಡೆದಿದ್ದೇನು?

satyadarshana

Leave a Comment