ನರಗುಂದ ತಾಲೂಕಿನ ಗುರ್ಲಕಟ್ಟಿ ಗ್ರಾಮದ ಹತ್ತಿರ ಲೋಕೋಪಯೋಗಿ ಇಲಾಖೆ ಅಡಿಯಲ್ಲಿಸೇತುವೆ ನಿರ್ಮಾಣಕ್ಕೆ ಶಾಸಕ ಸಿ.ಸಿ.ಪಾಟೀಲ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಸಿ.ಸಿ.ಪಾಟೀಲ ಮಾತನಾಡಿ, ಈ ಸೇತುವೆ ನಿರ್ಮಾಣ ಬಹುದಿನಗಳ ಬೇಡಿಕೆಯಾಗಿತ್ತು. ಅದನ್ನು ₹1.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ರೋಣ ತಾಲೂಕಿನ ಯಾ.ಸ. ಹಡಗಲಿ ಹತ್ತಿರವೂ ಇಂದು ₹1.50 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಭೂಮಿಪೂಜೆ ಆಗಿದೆ. ಕೌಜಗೇರಿ ಗ್ರಾಮದಲ್ಲಿ ₹60 ಲಕ್ಷದಲ್ಲಿ ಸಿಸಿ ರಸ್ತೆಗೆ ಭೂಮಿಪೂಜೆ ನೆರವೇರಿಸಲಾಯಿತು. ಸೆ.21 ರಿಂದ ರಾಜ್ಯ ಅಧಿವೇಶನ ನಡೆಯಲಿದೆ. ಕ್ಷೇತ್ರದ ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ.
ಗುರ್ಲಕಟ್ಟಿ ಗ್ರಾಮದ ರೈತರ ಹೊಲಗಳಿಗೆ ದಾರಿ ಇಲ್ಲ. ಬಂಡೆಮ್ಮ ಮಠದ ರಸ್ತೆಯಿಂದ ಕೋನರಡ್ಡಿ ಅವರ ಹೊಲದ ಎಸ್‌ಆರ್ ರಸ್ತೆಯನ್ನು ಮಾಡಿಕೊಟ್ಟರೆ ವ್ಯವಸಾಯ ಮಾಡಲಿಕ್ಕೆ ಅನುಕೂಲ ಆಗಲಿದೆ ಎಂದು ಹೇಳಿದರು. ಗ್ರಾಮಸ್ಥರಿಗೆ ಮನವಿ ಮಾಡಿದರು. ಬೇಡಿಕೆ ಸಲ್ಲಿಸುವ ಭರವಸೆಯನ್ನು ಶಾಸಕರು ಮಾಡಿ. ಬಸನಗೌಡ ಪಾಟೀಲ, ಶಿವನಗೌಡ ಪಾಟೀಲ, ಸಂಗನಗೌಡ ಬಾಳನಗೌಡ್ರ, ಈರನಗೌಡ ನಾಯಕನೂರ, ಶಂಭುಲಿಂಗಯ್ಯ ಹಿರೇಮಠ, ಸಂದೀಪ ಹುಡೇದಮನಿ, ಅಖಂಡಪ್ಪ ಬಡಿಗೇರ, ಗುರನಗೌಡ ಪಾಟೀಲ, ಲೋಕೋಪಯೋಗಿ ಇಲಾಖೆ ಮಹೇಶ ಗಡೇದ, ಎಂ.ಎಸ್. ಹಂಗರಕಿ ಇಬ್ಬರು.
