Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಗದಗದಲ್ಲಿ ಸಾಗರೋಪಾದಿ ಮಾದಿಗ ಮಹಾಸಭಾ ಬೃಹತ್ ಪ್ರತಿಭಟನೆ ಬೃಹತ್ ಮಾನವ ಸರಪಳಿ ರಸ್ತೆ ತಡೆ DC ಕಚೇರಿ ಅಂಗಳದಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದ ಹೋರಾಟಗಾರರು.

ಗದಗ ದಲ್ಲಿ ಸಾಗರೋಪಾದಿ ಮಾದಿಗ ಮಹಾಸಭಾ ಬೃಹತ್ ಪ್ರತಿಭಟನೆ ಬೃಹತ್ ಮಾನವ ಸರಪಳಿ ರಸ್ತೆ ತಡೆ DC ಕಚೇರಿ ಅಂಗಳದಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದ ಹೋರಾಟಗಾರರು.

ಗದಗದಲ್ಲಿ ಸಾಗರೋಪಾದಿ ಮಾದಿಗ ಮಹಾಸಭಾ ಬೃಹತ್ ಪ್ರತಿಭಟನೆ ಬೃಹತ್ ಮಾನವ ಸರಪಳಿ ರಸ್ತೆ ತಡೆ DC ಕಚೇರಿ ಅಂಗಳದಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದ ಹೋರಾಟಗಾರರು.

ರಾಯಚೂರು ಭೂಮಾನಂದ ಹತ್ಯೆ, ರೋಣದ ಅರಹುಣಸಿ ಅತ್ಯಾಚಾರ ಸೇರಿದಂತೆ ಸರಣಿ ದೌರ್ಜನ್ಯ ಖಂಡಿಸಿ ಕಹಳೆ.ಕೊಲೆಗಡುಕರ ಗಡಿಪಾರು ಹಾಗೂ ಗಲ್ಲು ಶಿಕ್ಷೆಗೆ ಆಗ್ರಹಿಸಿ ಗದಗ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಕೆ.ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬ ಸ್ಥಳದಲ್ಲೇ ಜಿಲ್ಲಾಧಿಕಾರಿಗಳು ಹಾಗೂ ಆಡಳಿತ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡ ಮುಖಂಡರು.ಸಮುದಾಯದ ಪೂಜ್ಯ ಸ್ವಾಮೀಜಿಗಳು ಜಿಲ್ಲಾ ಹಾಗೂ ವಿವಿಧ ತಾಲೂಕುಗಳ ಪ್ರಮುಖ ನಾಯಕರ ಸಮ್ಮುಖದಲ್ಲಿ ಬೃಹತ್ ರ‍್ಯಾಲಿ.

ಗದಗ:ಆ 11.
ರಾಯಚೂರು ಜಿಲ್ಲೆಯ ದೇವದುರ್ಗದ ಬಿಎಸ್‌ಪಿ ಕಾರ್ಯಕರ್ತ ಭೂಮಾನಂದ ಹದ್ದಿನಹಾಳ ಅವರ ಬರ್ಬರ ಹತ್ಯೆ, ಗದಗ ಜಿಲ್ಲೆಯ ರೋಣ ತಾಲೂಕು ಅರಹುಣಸಿಯಲ್ಲಿ ಬುದ್ಧಿಮಾಂದ್ಯ ಯುವತಿಯ ಮೇಲಿನ ಅಮಾನವೀಯ ಅತ್ಯಾಚಾರ ಹಾಗೂ ದಾವಣಗೆರೆ ಜಿಲ್ಲೆಯ ಬೆಳಗೆರೆಯಲ್ಲಿ ದೇವಸ್ಥಾನ ಪ್ರವೇಶಿಸಿದ ಯುವಕರ ಮೇಲಿನ ಭೀಕರ ಹಲ್ಲೆ ಸೇರಿದಂತೆ ರಾಜ್ಯಾದ್ಯಂತ ದಲಿತ ಹಾಗೂ ಮಾದಿಗ ಸಮುದಾಯದ ಮೇಲಿನ ಸರಣಿ ದೌರ್ಜನ್ಯಗಳನ್ನು ಖಂಡಿಸಿ ಮಾದಿಗ ಮಹಾಸಭಾ ಗದಗ ಜಿಲ್ಲೆ ಘಟಕದ ಆಶ್ರಯದಲ್ಲಿ ಸೋಮವಾರ ಗದಗ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ರಸ್ತೆ ತಡೆ ಹಾಗೂ ಆಕ್ರೋಶದ ಮಾನವ ಸರಪಳಿ ಪ್ರತಿಭಟನೆ ಜರುಗಿತು.

ನಗರದ ಮುಳುಗುಂದ ನಾಕಾದಲ್ಲಿ ಸಮಾವೇಶಗೊಂಡ ಸಾವಿರಾರು ಪ್ರತಿಭಟನಾಕಾರರು ನೀಲಿ ಬಾವುಟಗಳನ್ನು ಹಿಡಿದು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ರ‍್ಯಾಲಿ ನಡೆಸಿದರು. ನಗರದ ಪ್ರಮುಖ ವೃತ್ತಗಳಲ್ಲಿ ಸಾಲು ಗಟ್ಟಿ ನಿಂತು ಬೃಹತ್ ಮಾನವ ಸರಪಳಿ ನಿರ್ಮಿಸಿದ್ದರಿಂದ ಸುಗಮ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿತು. ಅಯ್ಯಯ್ಯೋ ಅನ್ಯಾಯ ಮಾನ್ಯ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಧಿಕ್ಕಾರ ಎನ್ನುವ ಘೋಷಣೆಗಳು ಗದಗ ನಗರದಾದ್ಯಂತ ಮೊಳಗಿದವು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದರೂ ದಲಿತರ ಮೇಲಿನ ಶೋಷಣೆ ಹಲ್ಲೆ ಅತ್ಯಾಚಾರ ಮತ್ತು ಸಾಮಾಜಿಕ ಬಹಿಷ್ಕಾರಗಳು ಇಂದಿಗೂ ನಿಂತಿಲ್ಲ. 21ನೇ ಶತಮಾನದಲ್ಲೂ ನಮ್ಮನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣಲಾಗುತ್ತಿದೆ. ಕೊಲೆಗಡುಕರನ್ನು ತಕ್ಷಣ ಬಂಧಿಸಿ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಹಾಗೂ ರಾಜ್ಯದಿಂದ ಗಡಿಪಾರು ಮಾಡಬೇಕು. ಇಲ್ಲವಾದರೆ ರಾಜ್ಯದ 31 ಜಿಲ್ಲೆಗಳಲ್ಲೂ ಮಾದಿಗ ಮಹಾಸಭಾ ವತಿಯಿಂದ ಹಂತ ಹಂತವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹುಡುಚಪ್ಪ ಹಳ್ಳಿಕೇರಿ (ಜಿಲ್ಲಾಧ್ಯಕ್ಷರು, ಮಾದಿಗ ಮಹಾಸಭಾ ಗದಗ)

ಕರ್ನಾಟಕದಲ್ಲಿ ಸುಮಾರು 87 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯವನ್ನು ಇಂದು ನಿರ್ದಯವಾಗಿ ತುಳಿಯಲಾಗುತ್ತಿದೆ. ಕೊಲೆ-ಅತ್ಯಾಚಾರ ಪ್ರಕರಣಗಳನ್ನು ನೋಡಿದರೆ ಸರ್ಕಾರವೇ ಅಪರಾಧಿಗಳಿಗೆ ಹಾಗೂ ಪಾಳೇಗಾರರಿಗೆ ಪುಷ್ಟಿ ನೀಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಮಾದಿಗ ಸಮುದಾಯ ಧ್ವನಿ ಎತ್ತಿದರೆ ಅವರನ್ನು ಟಾರ್ಗೆಟ್ ಮಾಡಿ ಬಲಿ ಪಡೆಯಲಾಗುತ್ತಿದೆ. ಸರ್ಕಾರ ತಕ್ಷಣ ಸೂಕ್ತ ಕ್ರಮ ಜರುಗಿಸದಿದ್ದರೆ ಇಡೀ ರಾಜ್ಯ ಸ್ತಬ್ಧಗೊಳ್ಳಲಿದೆ ಎಂದರು.

ಸತೀಶ್ ಪಾಸಿ (ಸಮುದಾಯದ ಹಿರಿಯ ಮುಖಂಡರು)

ನಮ್ಮ ಮತ ಪಡೆದು ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ದಲಿತರ ಜೀವದ ಬೆಲೆ ಗೊತ್ತಿಲ್ಲವೇ? ನಮ್ಮ ಹೆಣ್ಣುಮಕ್ಕಳಿಗೆ ಬುದ್ಧಿಮಾಂದ್ಯ ಯುವತಿಯರಿಗೆ ಕನಿಷ್ಠ ರಕ್ಷಣೆ ನೀಡಲಾಗದ ಈ ಸರ್ಕಾರ ಎಷ್ಟರಮಟ್ಟಿಗೆ ಹೀನಾಯವಾಗಿದೆ? ನಮ್ಮ ಸಹನೆಯನ್ನು ದುರ್ಬಲತೆ ಎಂದು ತಿಳಿಯಬೇಡಿ ಮಾದಿಗ ಯುವಕರು ಬೀದಿಗಿಳಿದು ದಂಗೆ ಎದ್ದರೆ ಸರ್ಕಾರಕ್ಕೆ ನಿಲ್ಲಲು ನೆಲೆ ಸಿಗುವುದಿಲ್ಲ. ಕೊಲೆಗಡುಕರ ಆಸ್ತಿ ಮುಟ್ಟುಗೋಲು ಹಾಕಿ, ಗಲ್ಲು ಶಿಕ್ಷೆ ವಿಧಿಸಲೇಬೇಕು” ಎಂದು ಗುಡುಗಿದರು.
ಪ್ರೇಮಾ ಕಲಕೇರಿ (ಹಾವೇರಿ ಜಿಲ್ಲೆಯ ಹಿರಿಯ ಹೋರಾಟಗಾರ್ತಿ)

DC ಕಚೇರಿ ಆಂಗಳದಲ್ಲಿ ನಾಯಕರ ಧ್ವನಿ ಹಾಗೂ ಅಧಿಕಾರಿಗಳ ತರಾಟೆ
ಪ್ರತಿಭಟನೆ ಜಿಲ್ಲಾಧಿಕಾರಿಗಳ ಕಚೇರಿ ಆವರಣ ತಲುಪಿದಾಗ ಆಕಾಶವಾಣಿ ಕಲಾವಿದ ಧಾರವಾಡ ಸೋಮಯ್ಯ ದೊಡ್ಡಮನಿ ಮಾತನಾಡಿ ನಾವು ಬರೀ ಮಾತಿಗೆ ಸೀಮಿತವಾಗಬಾರದು. ಹಳ್ಳಿಗಳಲ್ಲಿ ಪ್ರತಿಯೊಬ್ಬ ಮಾದಿಗ ಯುವಕನೂ ಸಂಘಟಿತನಾಗಿ ಅಟ್ರಾಸಿಟಿ ಕಾಯ್ದೆಯನ್ನು ಸರಿಯಾಗಿ ಬಳಸಿಕೊಂಡು ಹೋರಾಡಬೇಕು” ಎಂದು ಕರೆ ನೀಡಿದರು.

ಮುಖಂಡ ಮಂಜುನಾಥ್ ಬುರಡಿ ಮಾತನಾಡಿ ಸ್ವಾತಂತ್ರ್ಯ ಸಿಕ್ಕು ದಶಕಗಳೇ ಕಳೆದರೂ ದಲಿತರಿಗೆ ರಕ್ಷಣೆ ಇಲ್ಲವಾಗಿದೆ. ನಮಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಸರ್ಕಾರ ತಕ್ಷಣವೇ ಗನ್ ಲೈಸೆನ್ಸ್ ನೀಡಬೇಕು ಎಂದು ಆಗ್ರಹಿಸಿದರು.

ನರಗುಂದ ತಾಲೂಕು ಮುಖಂಡರುಮಾತನಾಡಿ ಸಮಾಜದ ಹೆಸರಿನಲ್ಲಿ ಅಧಿಕಾರ ಅನುಭವಿಸುತ್ತಿರುವ ಸಚಿವರು ಮತ್ತು ಶಾಸಕರು ಸಮಾಜಕ್ಕೆ ನ್ಯಾಯ ಒದಗಿಸದಿದ್ದರೆ ತಕ್ಷಣ ರಾಜೀನಾಮೆ ನೀಡಲಿ ಎಂದು ಆಕ್ರೋಶ ಹೊರಹಾಕಿದರು.

ಇದೇ ವೇಳೆ ಗದಗ ಮುಖಂಡ ಮಾರ್ತಾಂಡಪ್ಪ ಹಾದಿಮನಿ ಹಾಗೂ ಗಜೇಂದ್ರಗಡ ಮುಖಂಡ ಮಾರುತಿ ಹಾದಿಮನಿ ಮಾತನಾಡಿ ಮಾದಿಗ ಸಮುದಾಯಕ್ಕೆ ರಕ್ಷಣೆ ನೀಡದಿದ್ದರೆ ಯುವಕರು ಬೀದಿಗಿಳಿಯಲಿದ್ದಾರೆ. ಇನ್ಮುಂದೆ ಸಮುದಾಯದ ಮೇಲೆ ಯಾವುದೇ ಅನ್ಯಾಯವಾದರೂ ಜಿಲ್ಲಾಡಳಿತ ಹಾಗೂ ಗೃಹ ಸಚಿವರೆ ನೇರ ಹೊಣೆ ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಗದಗ ಜಿಲ್ಲಾಧಿಕಾರಿಗಳು ಆಗಮಿಸುತ್ತಿದ್ದಂತೆಯೇ ಸಮುದಾಯದ ಪೂಜ್ಯ ಸ್ವಾಮೀಜಿಗಳು ಹಾಗೂ ನಾಯಕರ ನೇತೃತ್ವದಲ್ಲಿ ಮಾನ್ಯ ರಾಜ್ಯಪಾಲರಿಗೆ ಉದ್ದೇಶಿಸಿದ ಸುದೀರ್ಘ ಮನವಿ ಪತ್ರವನ್ನು ಹಸ್ತಾಂತರಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ವರದಿ ಪಡೆದು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದಾಗ ತೀವ್ರ ಅಸಮಾಧಾನಗೊಂಡ ಮುಖಂಡರು, ರೋಣದ ಅರಹುಣಸಿ ಘಟನೆಯಾಗಿ ಇಷ್ಟು ದಿನಗಳಾದರೂ ತಹಶೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಂತ್ರಸ್ತ ಕುಟುಂಬಕ್ಕೆ ಭೇಟಿ ನೀಡಿ ನೆರವು ನೀಡದಿರುವುದು ಏಕೆ? ವರದಿ ನೆಪದಲ್ಲಿ ಕಾಲಹರಣ ಮಾಡುತ್ತಿರುವುದು ಏಕೆ? ಎಂದು ಜಿಲ್ಲಾಧಿಕಾರಿಗಳ ಎದುರಲ್ಲೇ ಆಡಳಿತ ವ್ಯವಸ್ಥೆಯ ಮಂದಗತಿಯ ಧೋರಣೆಯನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡರು.

ಹತ್ಯೆಗೊಳಗಾದ ಭೂಮಾನಂದ ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ 10 ಎಕರೆ ಜಮೀನು ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಒದಗಿಸಬೇಕು.ಭೂಮಾನಂದ ಕೊಲೆಗಾರರನ್ನು ಹಾಗೂ ರೋಣದ ಅರಹುಣಸಿ ಅತ್ಯಾಚಾರಿಗಳನ್ನು ತಕ್ಷಣವೇ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಮತ್ತು ರಾಜ್ಯದಿಂದ ಗಡಿಪಾರು ಮಾಡಬೇಕು. ದೌರ್ಜನ್ಯಕ್ಕೊಳಗಾದ ಎಲ್ಲಾ ಕುಟುಂಬಗಳಿಗೆ ಸರ್ಕಾರ ತಕ್ಷಣವೇ ಸೂಕ್ತ ಕಾನೂನು ರಕ್ಷಣೆ ಹಾಗೂ ಸಾಂತ್ವನ ಒದಗಿಸಬೇಕು.ಪ್ರಮುಖ ಬೇಡಿಕೆಯನ್ನು ವ್ಯಕ್ತಪಡೆಸಿದರು

ಈ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಸಮುದಾಯದ ಪೂಜ್ಯ ಸ್ವಾಮೀಜಿಗಳು ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಹುಡುಚಪ್ಪ ಹಳ್ಳಿಕೇರಿ, ನಾಯಕರಾದ ಸತೀಶ್ ಪಾಸಿ, ಪ್ರೇಮಾ ಕಲಕೇರಿ. ಸೋಮಯ್ಯ ದೊಡ್ಡಮನಿ, ಮಂಜುನಾಥ್ ಬುರಡಿ, ಮಾರ್ತಾಂಡಪ್ಪ ಹಾದಿಮನಿ, ಮಾರುತಿ ಹಾದಿಮನಿ ಸೇರಿದಂತೆ ಗದಗ, ರೋಣ, ನರಗುಂದ, ಗಜೇಂದ್ರಗಡ ಹಾಗೂ ವಿವಿಧ ತಾಲೂಕುಗಳ ನೂರಾರು ಮುಖಂಡರು, ಯುವಕರು ಮತ್ತು ತಾಯಿಮಕ್ಕಳು ಸಾಗರೋಪಾದಿಯಲ್ಲಿ ಭಾಗವಹಿಸಿದ್ದರು.

Related posts

ಭಾರತದ ಸರ್ವೋಚ್ಛ ನ್ಯಾಯಾಲಯದಿಂದ ‘ಸಮಾಧಾನ ಸಮಾರೋಹ-2026’ ಪ್ರಥಮ ಬಾರಿಗೆ ವಿಶೇಷ ಲೋಕ್ ಅದಾಲತ್ ಆಯೋಜನೆ

satyadarshana

ಮರೆಯಲಾಗದ ಮಾಣಿಕ್ಯ ಡಾ.ಬಾಬಾ ಸಾಹೇಬ್ ಅಂಬೇಡ್ಕರವರು…

satyadarshana

ಅರ್ಜಿ ಆಹ್ವಾನ

satyadarshana

Leave a Comment