Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ನಾಪತ್ತೆಯಾಗಿದ್ದ ಫರ್ವೇಜ್ ಸಿಕ್ಕಿದ್ದೇ ರೋಚಕ!

ಗದಗ, (ಅಕ್ಟೋಬರ್ 24 : ಕೆಆರ್​ಐಡಿಎಲ್​ನಲ್ಲಿ ಅನುದಾನ ಕೊರತೆ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಒತ್ತಡಕ್ಕೆ ಬೇಸತ್ತು ನಿಗೂಢವಾಗಿ ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ಎಇಇ ಪರ್ವೀಜ್ ಧಾರವಾಡ ಕೊನೆಗೂ ಪತ್ತೆಯಾಗಿದ್ದಾರೆ. ಬರೋಬ್ಬರಿ 40 ದಿನಗಳ ಬಳಿಕ ಮಹಾರಾಷ್ಟ್ರದ ಮುಂಬೈನಲ್ಲಿ ಪರ್ವಿಜ್ ಧಾರವಾಡ ಅವರನ್ನು ಗದಗ ಪೊಲೀಸರು ಪತ್ತೆ ಮಾಡಿದ್ದು, ನಾಳೆ (ಅಕ್ಟೋಬರ್ 24 ಪರ್ವಿಜ್​ನನ್ನು ಗದಗಕ್ಕೆ ಕರೆತರಲಿದ್ದಾರೆ. ಇದರೊಂದಿಗೆ ಕೆಆರ್‌ಐಡಿಎಲ್ ಎಇಇ ಪರ್ವೀಜ್ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು, ಇನ್ನೊಂದೆಡೆ ಕುಟುಂಬಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಕೆಆರ್​ಐಡಿಎಲ್​ನಲ್ಲಿ ಅನುದಾನ ಕೊರತೆ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಒತ್ತಡಕ್ಕೆ ಬೇಸತ್ತು ಎಇಇ ಪರ್ವಿಜ್ ಅವರು ಸೆಪ್ಟೆಂಬರ್ 13ರಂದು ನಾಪತ್ತೆಯಾಗಿದ್ದರು. ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದು, ಈ ಸಂಬಂಧ ಗದಗ ಪೊಲೀಸರು ವಿಶೇಷ ತಂಡ ರಚನೆ ಮಾಡಿಕೊಂಡು ಇಂಜಿನಿಯರ್ ಪರ್ವೀಜ್ ಪತ್ತೆಗೆ ಕಾರ್ಯಚರಣೆ ನಡೆಸಿದಾಗ ಆರಂಭದಲ್ಲಿ ಎಇಇ ಪರ್ವೀಜ್ ಅವರ ಕೊನೆಯ ಮೊಬೈಲ್ ನೆಟ್‌ವರ್ಕ್ ಲೋಕೇಷನ್ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಯಾಗಿತ್ತು.

ಆದರೆ, ತಮ್ಮ ಜಾಡು ಪತ್ತೆಯಾಗಬಾರದು ಎಂಬ ಉದ್ದೇಶದಿಂದ ಅವರು ವಿಜಯವಾಡದಿಂದಲೇ ತಮ್ಮ ಮೊಬೈಲ್ ಫೋನ್ ಸಂಪೂರ್ಣ ಆಫ್ ಮಾಡಿಕೊಂಡಿದ್ದರು. ಬಳಿಕ ಮಧ್ಯಪ್ರದೇಶದ ಭೋಪಾಲ್ ರೈಲ್ವೇ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪ್ರತ್ಯಕ್ಷವಾಗಿದ್ದರು. ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಪರ್ವೀಜ್ ಸುಳಿವು ಇರಲಿಲ್ಲ. ಆದರೂ ಬಿಡದ ಗದಗ ಪೊಲೀಸರು ನಿರಂತರ ಕಾರ್ಯಚರಣೆ ಮುಂದುವರೆಸಿದ್ದು, ಅಂತಿಮವಾಗಿ ಮುಂಬೈನಲ್ಲಿ ಪತ್ತೆ ಹಚ್ಚಿದ್ದಾರೆ.

ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪರ್ವೀಜ್

ಸೆಪ್ಟೆಂಬರ್ 13ರಂದು ಕಚೇರಿಯ ಡೆಸ್ಕ್ ಮೇಲೆ ಡೆತ್ ನೋಟ್ ಮಾದರಿಯ ಪತ್ರವೊಂದನ್ನು ಬರೆದಿಟ್ಟು, ಮರುದಿನ (ಸೆಪ್ಟೆಂಬರ್ 13) ಬೆಂಗಳೂರಿನ ಸಭೆಗೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಪರ್ವೀಜ್ ನಾಪತ್ತೆಯಾಗಿದ್ದರು. ಸಂಪರ್ಕ ಸಿಗದ ಕಾರಣ ಸೆಪ್ಟೆಂಬರ್ 16 ರಂದು ಅವರ ಕುಟುಂಬಸ್ಥರು ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪರ್ವೇಜ್ ಬರೆದ ನೋಟ್ ನಲ್ಲಿ ಸರ್ಕಾರದ ಅನುದಾನದ ಕೊರತೆ ಮತ್ತು ಕಾಮಗಾರಿಗಳ ಬಾಕಿ ಹಣ ಬಿಡುಗಡೆಯಾಗದ ಕಾರಣ, ಉಪ-ಗುತ್ತಿಗೆದಾರರು ಮನೆ ಹಾಗೂ ಕಚೇರಿಗೆ ಬಂದು ತಮಗೆ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.ಇವರ ಪತ್ತೆಗಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಹೆಚ್.ಎನ್ ಅವರ ನೇತೃತ್ವದಲ್ಲಿ 5 ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಒಟ್ಟಿನಲ್ಲಿ 40 ದಿನಗಳ ಬಳಿಕ ಪರ್ವೀಜ್ ಸೇಫ್ ಆಗಿ ಪತ್ತೆಯಾಗಿದ್ದು, ಕುಟುಂಬಸ್ಥರ ಆತಂಕ ದೂರ ಮಾಡಿದೆ

 

Related posts

ಗದಗ – ಉಪತಶೀಲ್ದಾರ್ ಅಣ್ಣಿಗೇರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ.

satyadarshana

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಒದಗಿಸಲು ಕ್ರಮ ವಹಿಸಿ : ನಲಿನ್ ಅತುಲ್

satyadarshana

ರೈತ ಸೊಸೈಟಿ ಮೂಲಕ ರಸಗೊಬ್ಬರ ವಿತರಣೆಗೆ ಆದ್ಯತೆ ನೀಡಿ- ಸಚಿವ ಶಿವರಾಜ ತಂಗಡಗಿ

satyadarshana

Leave a Comment