Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕಲಾ ಪ್ರದರ್ಶನ ಉದ್ಘಾಟನೆ

ಗದಗ  ಅಕ್ಟೋಬರ್ 29: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಗೌರವ ಪ್ರಶಸ್ತಿ, ವರ್ಣಶ್ರೀ ಪ್ರಶಸ್ತಿ, ಪುಸ್ತಕ ಬಹುಮಾನ ಹಾಗೂ ವಾರ್ಷಿಕ ಕಲಾ ಬಹುಮಾನ ಕಲಾ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮವನ್ನು ಅಕ್ಟೋಬರ್ 30 ಶುಕ್ರವಾರ ದಂದು ಬೆಳಗ್ಗೆ 11 ಗಂಟೆಗೆ ಸಂಸ್ಕೃತಿ ಕನ್ವೆನ್ನನ್ಸ್ ಬೈ-ಟಿ.ಆರ್.ಐ. ವೆಂಚರ್ಸ್ ರಿಂಗ್ ರೋಡ್ ಜಂಕ್ಷನ್, ಮುಂಡರಗಿ ರಸ್ತೆ, ಗದಗದಲ್ಲಿ ಹಮ್ಮಿಕೊಳ್ಳಲಾಗಿದೆ.

ಹಿರಿಯ ಕಲಾವಿದರು ಅಶೋಕ್ ಟಿ. ಅಕ್ಕಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.

ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಪ.ಸ. ಕುಮಾರ್ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದರು ಆರ್.ಡಿ. ಕಡ್ಲಿಕೊಪ್ಪ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಡಾ. ಬಸವರಾಜ ಬಳ್ಳಾರಿ ಆಗಮಿಸುವರು.

ಕಲಾ ಪ್ರದರ್ಶನ ಅಕ್ಟೋಬರ್ 30ರಿಂದ ನವೆಂಬರ್ 1 ರವರೆಗೆ ಬೆಳಗ್ಗೆ 10-00 ರಿಂದ ಸಂಜೆ 6.00 ಗಂಟೆ ವರೆಗೆ ಸಾರ್ವಜನಿಕರಿಗಾಗಿ ನಡೆಯಲಿದೆ.

ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಬಹುಮಾನಿತರಿಗೆ ಚಹಾ ಕೂಟ ಸಂಜೆ 4:00ಗಂಟೆಗೆ ಸಂಸ್ಕೃತಿ ಕನ್ವೆನ್ನನ್ಸ್ ಬೈ-ಟಿ.ಆರ್.ಐ. ವೆಂಚರ್ಸ್, ರಿಂಗ್ ರೋಡ್ ಜಂಕ್ಷನ್, ಮುಂಡರಗಿ ರಸ್ತೆ, ಗದಗ ನಡೆಯುವುದು.

ಜಿಲ್ಲೆಯ ಮೆಹಬೂಬ್ ಕಿಲ್ಲೇದಾರ್ ಮತ್ತು ತಂಡದವರಿಂದ ಗಾಯನ ಕಾರ್ಯಕ್ರಮ ಜರುಗುವುದು.

ಉದ್ಘಾಟನೆ, ಪ್ರಶಸ್ತಿ ಪ್ರದಾನ ಸಮಾರಂಭ

ಅಕ್ಟೋಬರ್ 30 ರಂದು ಶುಕ್ರವಾರ ಸಂಜೆ 5-00 ಗಂಟೆಗೆ ಸಂಸ್ಕೃತಿ ಕನ್ವೆನ್ನನ್ಸ್ ಬೈ-ಟಿ.ಆರ್.ಐ. ವೆಂಚರ್ಸ್ ರಿಂಗ್ ರೋಡ್ ಜಂಕ್ಷನ್, ಮುಂಡರಗಿ ರಸ್ತೆ, ಗದಗದಲ್ಲಿ ಶ್ರೀ ಮನ್ನಿರಂಜನ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಡಂಬಳ-ಗದಗ ಇವರು ದಿವ್ಯ ಸಾನಿಧ್ಯ ವಹಿಸುವರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಚಿವ ಶಿವರಾಜ ಎಸ್. ತಂಗಡಗಿ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಅಧ್ಯಕ್ಷರು ಪ.ಸ. ಕುಮಾರ್ ಅವರು ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಕು| ಮಂಜುಶ್ರೀ ಎನ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಿರ್ದೇಶಕರು ಡಾ. ಕೆ.ಎಂ. ವಸುಂಧರಾ, ಪರಿಚಯ ಪುಸ್ತಕ ಬಿಡುಗಡೆ ಸಾಹಿತಿಗಳು ಡಾ. ಚಂದ್ರಶೇಖರ ವಸ್ತ್ರದ ಆಗಮಿಸುವರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರು ಚಂದ್ರಕಾಂತ ಸರೋದೆ ಪ್ರಾಸ್ತವಿಕ ನುಡಿ ಆಡುವರು.

ಕರ್ನಾಟಕ ಲಲಿತಕಲಾ ಅಕಾಡೆಮಿಯ ರಿಜಿಸ್ಟರ್ ಎನ್. ನಮ್ರತ ಸರವರಿಗೂ ಆದರದ ಸ್ವಾಗತ ಕೊರಿದ್ದಾರೆ.

Related posts

ನಿಮ್ಮ ಗ್ರಾಮದಲ್ಲಿ ಸಮಸ್ಯೆಯೇ? 8277506000 ಡೈಲ್ ಮಾಡಿ : ಸಿಇಓ ಭರತ್ ಎಸ್

satyadarshana

ಬೆಳೆ ನಷ್ಟದಿಂದ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ..

satyadarshana

ಒಬ್ಬರೇ ಸದಸ್ಯರಿಗೆ ಎರಡು ರೀತಿಯಲ್ಲಿ ದೃಢೀಕರಣ ನೀಡಿದ ಆರೋಪದಲ್ಲಿ ಪಿಡಿಒ ರೇಣುಕಾ ಸಸ್ಪೆಂಡ್  

satyadarshana

Leave a Comment