Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿಲೈಫ್ ಸ್ಟೈಲ್

ರೈತರ ಆಹೋರಾತ್ರಿ ಧರಣಿಗೆ ಫಲ ಎಚ್ಚೆತ್ತ ಅಧಿಕಾರಿಗಳು: ಆಗಸ್ಟ್ 1ರಿಂದ ಕುಡಿಯುವ ನೀರು ಬಿಡುಗಡೆಗೆ ಶಾಸಕ ಶಿವರಾಜ್ ತಂಗಡಿ ಭರವಸೆ

 

ಮುನಿರಾಬಾದ್: ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ನೇತೃತ್ವದಲ್ಲಿ ರೈತರಿಗೆ ಕುಡಿಯುವ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮುನಿರಾಬಾದ್ ನೀರಾವರಿ ಇಲಾಖೆ ಕೇಂದ್ರ ವಲಯ ಆಡಳಿತ ಕಚೇರಿ ಎದುರು ನಡೆದ ಆಹೋರಾತ್ರಿ ಧರಣಿ ಹಾಗೂ ಉಪವಾಸ ಸತ್ಯಾಗ್ರಹಕ್ಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ನೀರು ಬಿಡಲು ಮುಂದಾಗಿದ್ದಾರೆ. ಇದು ರೈತರ ಹೋರಾಟಕ್ಕೆ ಫಲ ದೊರೆತಿದ್ದು, ಆಗಸ್ಟ್ 1ರಿಂದ ನೀರು ಬಿಡುಗಡೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಸಂಘದ ರಾಜ್ಯಾಧ್ಯಕ್ಷ ಎಸ್.ಎ. ಖಾದ್ರಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 500ಕ್ಕೂ ಹೆಚ್ಚು ರೈತರು ಭಾಗವಹಿಸಿ, ನದಿ ಹಾಗೂ ಹೊಳೆಗಳ ಮೂಲಕ ರೈತರಿಗೆ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯ ವೇಳೆ ರೈತರು ಕಚೇರಿಗೆ ತೆರಳಿದಾಗ ಅಧಿಕಾರಿಗಳು ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಎಸ್.ಎ. ಖಾದ್ರಿ ಆರೋಪಿಸಿದ್ದಾರೆ.

ರೈತರ ಬೇಡಿಕೆ ಈಡೇರುವವರೆಗೆ ಆಹೋರಾತ್ರಿ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ರಾಜ್ಯಾಧ್ಯಕ್ಷ ಎಸ್ಸೆ ಖಾದ್ರಿ ಅವರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲ ಮಹಿಳಾ ರೈತರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾದರೂ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ರೈತ ಸಂಘಟನೆಯ ರಾಜ್ಯಾಧ್ಯಕ್ಷ ಮುನಿರಾಬಾದ್ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋರಾಟದ ಸಂದರ್ಭದಲ್ಲಿ ಕಿಷ್ಕಿಂದ ವಾಹಿನಿಯ ಮುಖ್ಯಸ್ಥರು ದೂರವಾಣಿ ಮೂಲಕ ಸಂಪರ್ಕಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವರು ಶಿವರಾಜ್ ತಂಗಡಗಿ ಅವರ ಸೂಚನೆಯಂತೆ ಆಗಸ್ಟ್ 1ರಿಂದ ಕುಡಿಯುವ ನೀರು ಬಿಡುಗಡೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ತಿಳಿಸಿರುವುದಾಗಿ ಹೇಳಿದರು.

ಈ ಈ ಸಂದರ್ಭದಲ್ಲಿ ಕಿಷ್ಕಿಂಧ ವಾಹಿನಿಯ ಮುಖ್ಯಸ್ಥ ಸಯ್ಯದ್ ಅಲಿ ಅವರು ಕಾಡಾ ಅಧ್ಯಕ್ಷ ಹುಸೇನ್ ಸಾಬ್ ಧೋಟಿಹಾಳ ಅವರಿಗೂ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಚರ್ಚೆಯ ಬಳಿಕ ಆಗಸ್ಟ್ 1ರಿಂದ ಕುಡಿಯುವ ನೀರು ಬಿಡುಗಡೆ ಮಾಡುವುದಾಗಿ ಕಾಡಾ ಅಧ್ಯಕ್ಷರು ಭರವಸೆ ನೀಡಿದರು ಎಂದು ತಿಳಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಎಂ. ಪ್ರಕಾಶ್ ತಿಮ್ಲಾಪುರ್, ರಾಜ್ಯಾಧ್ಯಕ್ಷ ಎಸ್.ಎ. ಖಾದ್ರಿ, ರೈತ ಮುಖಂಡ ಅಂಬರೀಶ್ (ರಾಯಚೂರು), ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಎಂ. ರತ್ನಮ್ಮ, ಕೊಪ್ಪಳ ಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ಫ್ರೂಟ್, ರೈತ ಯುವ ಮುಖಂಡ ಗ್ಯಾಸ್ ರಫಿ, ಕನ್ನಡಪರ ಸಂಘಟನೆಯ ರಾಜ್ಯಾಧ್ಯಕ್ಷ ಶಫಿ ಬಿಸ್ತಿ, ವಿಜಯನಗರ ಜಿಲ್ಲಾ ಅಧ್ಯಕ್ಷ ಕೊಟಾಲ್ ವೀರೇಶ್, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಬಿ. ಗಂಗಾಧರ್, ವಿಜಯನಗರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಪ್ರಕಾಶ್, ಹೊಸಪೇಟೆ ತಾಲ್ಲೂಕು ಅಧ್ಯಕ್ಷೆ ಲಕ್ಷ್ಮಿ ಬುಕ್ ಸಾಗರ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು, ಮಹಿಳೆಯರು ಹಾಗೂ ರೈತ ಸಂಘದ ಮುಖಂಡರು ಭಾಗವಹಿಸಿದ್ದರು.

Related posts

ಹೆಚ್ ಪಿ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ “ವಿಶ್ವ ಪರಿಸರ ದಿನಾಚರಣೆ

satyadarshana

ಹುಲ್ಲೂರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಪೂರ್ಣ ಕುಂಭ, ಡೊಳ್ಳು ಕುಣಿತದೊಂದಿಗೆ ಅದ್ಧೂರಿ ಸ್ವಾಗತ ಗೊ ಪೂಜೆ, ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ

satyadarshana

ಕುಡಗುಂಟಿ ಗ್ರಾಮದ ಪ್ರತಿಭಾವಂತ ಇಂಜಿನೀಯರಿಂಗ್ ವಿದ್ಯಾರ್ಥಿನಿಗೆ ಲ್ಯಾಪ್ ಟಾಪ್ ವಿತರಣೆ

satyadarshana