Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಟ್ರೆಂಡ್ಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಮಹಾತ್ಮಾಗಾಂಧಿ ಹಾಕಿ ಕ್ರೀಡಾಂಗಣದ ಉದ್ಘಾಟನೆ ನೇರವೇರಿಸಿದ ಸಚಿವ ಡಾ.ಹೆಚ್.ಸಿ. ಮಹಾದೇವಪ್ಪ

ಗದಗ. ಸೆಪ್ಟೆಂಬರ್ 4 : ಗದಗ-ಬೆಟಗೇರಿಯ ಗಾಂಧಿ ನಗರದ ಮಹಾತ್ಮಾಗಾಂಧಿ ಹಾಕಿ ಕ್ರೀಡಾಂಗಣ ಉದ್ಘಾಟನೆ ಯನ್ನು ರವಿವಾರ ಸಂಜೆ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್.ಸಿ. ಮಹಾದೇವಪ್ಪ ಅವರು ಉದ್ಘಾಟಿಸಿದರು.

ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಎಸ್ಸಿಪಿ ಟಿಎಸಪಿ ಅನುದಾನದಲ್ಲಿ ಬೇರೆಡೆ ಎಲ್ಲೂ ಹಾಕಿ ಟರ್ಫ್ ನಿರ್ಮಾಣ ಆಗಿಲ್ಲ. ಸಚಿವ ಮಹದೇವಪ್ಪ ಅವರು ಅನುದಾನ ಒದಗಿಸಿಕೊಟ್ಟಿದ್ದಾರೆ ಅವರಿಗೆ ಕೃತಜ್ಞತೆ ಎಂದರು.ಕಲ್ಲು, ಮಣ್ಣಿನಲ್ಲಿ ಆಡುತ್ತಿದ್ದ ಯುವಕರು ಇಂದು ಟರ್ಫ್ ಗ್ರೌಂಡನಲ್ಲಿ ಆಡುವ ಸುಯೋಗ ಒದಗಿ ಬಂದಿದೆ. ಗದಗ ಯುವಕರು ರಾಷ್ಟ್ರೀಯ ಅಂತರಾಷ್ಟ್ರೀಯ ಹಾಕಿ ತಂಡವನ್ನು ಪ್ರತಿನಿಧಿಸಿದ್ದಾರೆ ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ನಾಗೇಂದ್ರ ವಿಶೇಷ ಆಹ್ವಾನಿತರಾಗಿ ಆಗಮಿಸಿ, ಅಂತರಾಷ್ಟ್ರೀಯ ಹಾಕಿ ಕ್ರೀಡಾಪಟುಗಳಾದ ರಾಜು ಬಗಾಡೆ, ಹರೀಶ ಮುಟಗಾರ, ಹಿರಿಯ ಹಾಕಿ ಕ್ರೀಡಾಪಟುಗಳಾದ ಹನುಮಂತಪ್ಪ ವೀರಾಪೂರ, ಗಂಗಣ್ಣ ಕೋಟಿ, ರಘುನಾಥಸಾ ಶಿದ್ಲಿಂಗ್, ಯಲ್ಲಪ್ಪ ಗಡಾದ, ಯಲ್ಲಪ್ಪ ಕೊರವರ, ವಿ.ಎಸ್. ಮಣಿ, ಕಾರ್ಲಟನ್ ಗೋಮ್ಸ್ ಅವರನ್ನು ಸನ್ಮಾನಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಘನ ಉಪಸ್ಥಿತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರ್ಕಾರಿ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ , ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರೋಣ ಶಾಸಕ ಜಿ.ಎಸ್.ಪಾಟೀಲ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಉಷಾ ದಾಸರ, ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಸುನಂದಾ ಬಾಕಳೆ, ಮಾಜಿ ಶಾಸಕ ಡಿ.ಆರ್.ಪಾಟೀಲ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶರಣು ಗೋಗೇರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ವಿ.ಎಸ್.ಪಾಟೀಲ ಉಪಸ್ಥಿತಿ ವಹಿಸಿದ್ದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Related posts

ಎಲ್ಲ ಮುಗಿದ ಮೇಲೆ ಎಚ್ಚೆತ್ತುಕೊಂಡರೆ ಪ್ರಯೋಜನವಾಗದು: ಪತ್ರಕರ್ತ ಗೌರೀಶ

satyadarshana

ಗಜೇಂದ್ರಗಡದ ಕಟ್ಟಿಬಸವೇಶ್ವರ ಯುವಕ ಸಂಘದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

satyadarshana

ಕರ್ನಾಟಕ ರಾಜ್ಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ಕೊಡಮಾಡುವ 20.22ನೇ ಸಾಲಿನ ಬಿ ಕೆ ಮಾದಿ ಪತ್ರಕರ್ತರತ್ನ ಪ್ರಶಸ್ತಿಗೆ ಆಯ್ಕೆ

satyadarshana

Leave a Comment