Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಜಿಮ್ಸ್‍ದಲ್ಲಿ 07 ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ.

ಗದಗ ( ಸತ್ಯದರ್ಶನ ) ನವೆಂಬರ್ 23: ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ 07 ತಿಂಗಳ ಮಗುವಿಗೆ ಯಶಸ್ವಿಯಾಗಿ ಉದರ ಶಸ್ತ್ರ ಚಿಕಿತ್ಸೆ ನೇರವೇರಿಸಲಾಗಿದೆ.

07 ತಿಂಗಳ ಹಸುಗೂಸು ವಿಪರಿತ ವಾಂತಿ, ರಕ್ತ ಮಿಶ್ರಿತ ಭೇದಿಯಿಂದ ಅರೇ ಪ್ರಜ್ಞಾವಸ್ಥೆಯಲ್ಲಿ ಜಿಮ್ಸ್ ಆಸ್ಪತ್ರೆಗೆ ನವೆಂಬರ್ 21 ರಂದು ದಾಖಲಾಗಿತ್ತು. ಸ್ಕ್ಯಾನ್‍ನಲ್ಲಿ ಇಂಟಸ್ಸ್‍ಸೆಷ್ಸನ್ ( Intussusception) ಕರುಳಿನ ತೊಂದರೆ ಇರುವುದು ಗೊತ್ತಾಗಿರುತ್ತದೆ, ತುರ್ತು ಚಿಕಿತ್ಸೆ ನಡೆಸದೇ ಇದ್ದರೆ ಕರುಳಿನ ಗ್ಯಾಂಗ್ರೀನ್ ಆಗುವ ಸಂಭವವಿತ್ತು. ಮಗುವಿನ ಪ್ರಥಮ ಚಿಕಿತ್ಸೆಯ ನಂತರ ಮಗುವಿಗೆ ಉದರ ಶಸ್ತ್ರ ಚಿಕಿತ್ಸೆಯನ್ನು ಡಾ. ವಿನಯಕುಮಾರ ತೇರದಾಳ (ಚಿಕ್ಕ ಮಕ್ಕಳ ಶಸ್ತ್ರ ಚಿಕಿತ್ಸಕರು) ಡಾ. ಜ್ಯೋತಿ ಕರೆಗೌಡರ್ (ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು) ಡಾ. ಜಮೀರ್, ಅರವಳಿಕೆ ತಜ್ಞರಾದ ಡಾ. ವಿನಾಯಕ, ಡಾ. ಪ್ರೀಯಾ, ಅವರ ತಂಡ ಯಶಸ್ವಿಯಾಗಿ ನೆರವೇರಿಸಿತು. ಪ್ರಸ್ತುತ ಮಗು ಚೇತರಿಕೆ ಕಂಡು ಆರೋಗ್ಯವಾಗಿದೆ ಹಾಗೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ಸಿದ್ದತೆ ನಡೆಸಲಾಗಿದೆ.

ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೇರವೇರಿಸಿದ ವೈದ್ಯಕೀಯ ತಂಡವನ್ನು ನಿರ್ದೇಶಕರಾದ ಡಾ. ಬಸವರಾಜ ಬೊಮ್ಮನಹಳ್ಳಿ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ. ರೇಖಾ ಸೋನಾವನೆ ಅವರು ಅಭಿನಂದಿಸಿದ್ದಾರೆ. ಅಲ್ಲದೇ ಬ್ರಾಂಕಿಯಲ್ ಸಿಸ್ಷ್, ಅನ್‍ಡಿಸೆಂಡೆಡ್ ಟೆಸಿಸ್ಟ್, ಇಂತಹ ಚಿಕ್ಕ ಮಕ್ಕಳ ಶಸ್ತ್ರಚಿಕಿತ್ಸೆ ಗಳನ್ನು ಜಿಮ್ಸ್ ಆಸ್ಪತ್ರೆಯಲ್ಲಿ ನುರಿತ ಚಿಕ್ಕ ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ಞರು ಯಶಸ್ವಿಯಾಗಿ ಮಾಡಿರುತ್ತಾರೆ. ಗದಗ ನಗರದ ಜಿಮ್ಸ್ ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ನುರಿತ ವೈದ್ಯಕೀಯ ತಂಡವನ್ನು ಹೊಂದಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.  

 

 

Related posts

ಕೆರೆ ತುಂಬುವ ಯೋಜನೆಗೂ ಹಾಲಪ್ಪ ಆಚಾರ್ ಗೂ ಸಂಬಂಧ ಇಲ್ಲ: ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ 

satyadarshana

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಪ್ರತಿವರ್ಷ ಗೊರವಯ್ಯ ನುಡಿಯುವ ಕಾರಣಿಕವನ್ನು ವರ್ಷದ ಭವಿಷ್ಯವಾಣಿ..

satyadarshana

ಮತಾಂತರ ನಿಷೇಧ ಕಾಯ್ದೆಯನ್ನು ಬಲವಾಗಿ ಖಂಡಿಸಲು ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ.ಸಿದ್ದರಾಮಯ್ಯ  

satyadarshana

Leave a Comment