Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಒಬ್ಬರೇ ಸದಸ್ಯರಿಗೆ ಎರಡು ರೀತಿಯಲ್ಲಿ ದೃಢೀಕರಣ ನೀಡಿದ ಆರೋಪದಲ್ಲಿ ಪಿಡಿಒ ರೇಣುಕಾ ಸಸ್ಪೆಂಡ್  

ಸತ್ಯ ದರ್ಶನ

ವಿಜಯಪುರ: ಗ್ರಾ.ಪಂ. ಸದಸ್ಯೆಯೊಬ್ಬರಿಗೆ ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆಯಲ್ಲಿ ಮತದಾನ ಮಾಡಲು ಅಗತ್ಯವಿಲ್ಲದಿದ್ದರೂ ಸಹಾಯಕರ ಅಗತ್ಯವಿದೆ ಎಂದು ದೃಢೀಕರಣ ನೀಡಿದ ಆರೋಪದಲ್ಲಿ ಪಿಡಿಒ ರೇಣುಕಾ ಸೋಲಾಪುರ ಅವರನ್ನು ಅಮಾನತು ಮಾಡಲಾಗಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ಗ್ರಾ.ಪಂ. ಪಿಡಿಒ ರೇಣುಕಾ ಸೋಲಾಪುರ ಇವರನ್ನು ಚುನಾವಣೆ ಕರ್ತವ್ಯ ಲೋಪದ ಆರೋಪದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಸುನಿಲ ಕುಮಾರ ಅಮಾನತು ಮಾಡಿದ ಆದೇಶ ಹೊರಡಿಸಿದ್ದಾರೆ

ಬಾಬಾನಗರ ಗ್ರಾ.ಪಂ. ಸದಸ್ಯೆ ಮುತ್ತವ್ವ ಶ್ರೀಶೈಲ ಗೌಡನವರ ಅವರಿಗೆ ಡಿ.7 ರಂದು ನೀಡಿದ ದೃಢೀಕರಣ ಪ್ರಮಾಣ ಪತ್ರದಲ್ಲಿ ಹೆಬ್ಬೆಟ್ಟು ಸಹಿ ಇದೆ ಎಂದು, ಇದಕ್ಕೂ ಮೊದಲ ಡಿ.6 ರಂದು ನೀಡಿದ ದೃಢೀಕರಣ ಪ್ರಮಾಣ ಪತ್ರದಲ್ಲಿ ಎಂಎಸ್‍ಜಿ ಎಂದೂ ದೃಢೀಕರಿಸಲಾಗಿದೆ. ಒಬ್ಬರೇ ಸದಸ್ಯರಿಗೆ ಎರಡು ರೀತಿಯಲ್ಲಿ ದೃಢೀಕರಣ ನೀಡಿದ ಆರೋಪದಲ್ಲಿ ಪಿಡಿಒ ರೇಣುಕಾ ಅವರನ್ನು ಅಮಾನತು ಮಾಡಲಾಗಿದೆ.

Related posts

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪದಗ್ರಹಣ ……

satyadarshana

ಪೊಲೀಸ ಹುತಾತ್ಮರ ದಿನಾಚರಣೆ ನೊಂದವರ ಧ್ವನಿಯಾಗಿ ಪೊಲೀಸ ಇಲಾಖೆಯ ಸೇವೆ ಅಪಾರ

satyadarshana

ಚರ್ಚೆ: ಅಖಂಡ ಕರ್ನಾಟಕದ ಅನಿವಾರ್ಯ, ಉತ್ತರ ಕರ್ನಾಟಕ ಪ್ರತ್ಯೇಕತೆ ಕೂಗು

cradmin

Leave a Comment