Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ನಗರದಾದ್ಯಂತ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ

ಫುಟ್ ಬಾತ್ ರಸ್ತೆ ಒತ್ತುವರಿ ಮಾಡಿಕೊಂಡಿರುವುದನ್ನು ತೆರುಗೊಳಿಸುವ ನೆಪದಲ್ಲಿ  

ನಗರದಾದ್ಯಂತ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ

ಗಂಗಾವತಿ: ನಗರದಲ್ಲಿನ ಅಂಗಡಿ ಮಾಲಿಕರು ಫುಟ್ ಪಾತ್ ರಸ್ತೆ ಒತ್ತುವರಿ ಮಾಡಿಕೊಂಡಿರುವುದನ್ನು

ತರವುಗೊಳಿಸುವ ನೆಪದಲ್ಲಿ ನಗರದಾದ್ಯಂತ ನಮ್ಮ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದ ಬೀದಿ ಬದಿಯ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿರುವುದು ಅತ್ಯಂತ ಅಮಾನವೀಯ ಘಟನೆಯಾಗಿದೆ.

ಕೂಡಲೇ ಬೀದಿ ಬದಿಯ ವ್ಯಾಪಾರಿಗಳ ಜೀವನ ಸಂರಕ್ಷಣೆಯ ಕಾಯ್ದೆ 2014 ರನ್ವಯ ನಗರದ ಬೀದಿ ಬದಿಯ ವ್ಯಾಪಾರಿಗಳು ಅವರ ವ್ಯಾಪ್ತಿಯೊಳಗೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕು. ನಗರದಾದ್ಯಂತ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆಸಲಾಗುತ್ತಿದೆ ಸರಿಯಾದ ರಸ್ತೆ ಅಗಲೀಕರಣ ಮಾಡದೆ ಅವಶ್ಯ ಇಲ್ಲದ ಕಡೆಗಳಲ್ಲೆಲ್ಲ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ನಗರದ ಮುಖ್ಯ ರಸ್ತೆಗಳಲ್ಲಿ ಅಂದರೆ ಕೊಪ್ಪಳ, ರಾಯಚೂರು, ಮುದಗಲ್ ರಸ್ತೆಗಳ ಮೇಲೆ ಚರಂಡಿ ನೀರು ಹರಿಯುತ್ತಿದೆ. ಸಂಪೂರ್ಣ ಹದಗೆಟ್ಟು ಹೋಗಿದೆ.

ಜೊತೆಗೆ ನಗರದ ಬಹುತೇಕ ಕಡೆಗಳಲ್ಲಿ ಸರಿಯಾದ ಚಂಡಿ ವ್ಯವಸ್ಥೆ ಇಲ್ಲದೆ ಇಡೀ ನಗರವು ಕೊಳಚೆಯಿಂದ ಕೂಡಿದೆ. ಗಂಗಾವತಿ ನಗರವು ಅಮೃತ ಸೀಟಿ ಯೋಜನೆಗೆ ಆಯ್ಕೆಯಾಗಿದೆ. ಅಮೃತ ಸಿಟಿ ಯೋಜನೆಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಆದರೆ ನಗರದ ಯಾವುದೇ ವಾರ್ಡ್‌ಗಳಲ್ಲಿಯೂ ಸ್ವಚ್ಛತೆ ಇಲ್ಲ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳು ಇಲ್ಲ.

ಸರ್ಕಾರದಿಂದ ನಗರಸಭೆ ಅಭಿವೃದ್ಧಿಗೆ ಮಂಜೂರಾದ ಹಣವನ್ನು ನಗರಸಭೆ ಸಂಪೂರ್ಣವಾಗಿ ಮುಚ್ಚಿ ಹಾಕುತ್ತಿದೆ. ಭೂಗಳ್ಳರಿಂದ ಹಣ ಪಡೆದು ಅವರ ಹೆಸರಿಗೆ ಪಾರ್ಮ್ ನಂ: 3 ನೀಡಲಾಗುತ್ತಿದೆ.

ನಗರದ 31 ವಾರ್ಡ್ ನಲ್ಲಿ ಸರಿಯಾದ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಇಲ್ಲದರಿಂದ ಅವರ ಮನೆಗಳ ಸುತ್ತಲೂ ನೀರು ನಿಂತು ಇಡೀ ಏರಿಯಾ ಕೆಸರಿನ ಗದ್ದೆಯಂತಾಗಿದೆ ಅದರಲ್ಲಿ ಹಾವು,ಚೇಳುಗಳು ಕೂಡ ಇವೆ ಅಲ್ಲಿ ಸುಮಾರು ಜನರಿಗೆ ಹಾವು ಕಡಿದ ಜೀವನ್ಮರಣದ ಮಧ್ಯ ಹೋರಾಡುತ್ತಿದ್ದಾರೆ.

ನಗರಸಭೆಯಲ್ಲಿ ಸ್ವಚ್ಛತಾ ಕೆಲಸ ಮಾಡುವ ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ಸರಿಯಾದ ವೇತನವಾಗಲಿ, ಅವರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳಾಗಲಿ ನೀಡುತ್ತಿಲ್ಲ. ನಗರಸಭೆಯ ಅಧಿಕಾರಿಗಳು ಈ ಬೇಜವಾಬ್ದಾರಿತನದ ಆಡಳಿತಕ್ಕೆ ನಗರದ ಜ

Related posts

ಜಿಲ್ಲಾ‌ ಮಟ್ಟದ ಫಲಾನುಭವಿಗಳ‌ ಸಮ್ಮೇಳನ : ಸಿದ್ಧತೆಗಳ ಪರೀಶಿಲನೆ

satyadarshana

ಜಿ ಎಸ್ ಪಾಟೀಲ್ ಸಚಿವ ಸ್ಥಾನ ನೀಡಲು ಒತ್ತಾಯ.

satyadarshana

ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿಯ ಹರಿವಿನ ಗ್ರಾಮಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ

satyadarshana

Leave a Comment