ಲಕ್ಕುಂಡಿ: ಗುರು ಮರಸಿದ್ಧ ಪ್ರಭುದೇವರ ಮಹಾಮನೆ ಮಹಾಮಠ ಲಕ್ಕುಂಡಿ ಆಶ್ರಯದಲ್ಲಿ ಹೊತ್ಸಲ ಹುಣ್ಣಿಮೆಯ ದಿವಸ 26 12 2023 ರಂದು ಮಹಾಕ್ರಾಂತಿಕಾರಿ ಶ್ರೀ ಮರಳು ಸಿದ್ದೇಶ್ವರರ ಹಾಗೂ ಅನುಭವ ಮಂಟಪದ ಹಿರಿಯ ಮಹೇಶ್ವರರಾದ ಮಾದರ ಚೆನ್ನಯ್ಯ ನವರ ಜಯಂತೊತ್ಸವನ್ನ ಆಚರಿಸಲಾಗಿತ್ತು .
ಶ್ರೀಮಠದ ಶ್ರೀಗಳಾದ ಶ್ರೀ ಶಿವಮುನಿ ಸ್ವಾಮೀಜಿ ಹಾಗೂ ಹುಚ್ಚಯ್ಯ ಸ್ವಾಮಿಗಳು ನೆತೃತ್ವದಲ್ಲಿ ಲಕ್ಕುಂಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕೆಂಚಪ್ಪ ಎಸ್ ಪೂಜಾರ್ ಇವರು ಜ್ಯೋತಿಯನ್ನ ಬೆಳಗಿಸಿದರು . ಸಮಾಜದ ಹಿರಿಯರಾದ ಬರಮಪ್ಪ ಮುಳ್ಳಾಳ, ನಿಂಗಪ್ಪ ದೊಡ್ಮನಿ ಹಾಗು ಮಠದ ಭಕ್ತರು ಭಾಗವಹಿಸಿದ್ದರು.
