Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

“ಬಿಟ್‍ಕಾಯಿನ್ ದಂಧೆಯಲ್ಲಿ” ಯಾರೆ ಇದ್ದರೂ ಶಿಕ್ಷೆ ಖಚಿತ :ನಿಷ್ಪಕ್ಷಪಾತವಾಗಿ.ತನಿಖೆ ನಡೆಸಿ ಕಾನೂನಿನ ಪ್ರಕಾರವೇ ಕ್ರಮ ಕೈಗೊಳ್ಳುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು,ನ.14- ಬಿಟ್ ಕಾಯಿನ್ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಯಾರನ್ನೂ ಬಿಡುವುದಿಲ್ಲ. ಸರ್ಕಾರ ಅಂಥವರನ್ನು ಬಲಿ ಹಾಕೇ ಹಾಕುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದರು.ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕಾನೂನಿನ ಪ್ರಕಾರವೇ ಕ್ರಮ ಕೈಗೊಳ್ಳುತ್ತೇವೆ. ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೆ ಬಂಧನಕ್ಕೊಳಪಡಿಸುತ್ತೇವೆ ಎಂದು ಎಚ್ಚರಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಬಳಿ ದಾಖಲೆಗಳಿದ್ದರೆ ಇಡಿ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗೆ ನೀಡಲು ಹಿಂದೇಟು ಹಾಕುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಯಾರೇ ಇದ್ದರೂ ಅವರನ್ನು ಬಿಡುವುದಿಲ್ಲ. ಇಬ್ಬರು ಇದ್ದಾರೆ, ಮೂವರು ಇದ್ದಾರೆ ಎಂದು ಹೇಳುವುದು ಬೇಡ.

ಪ್ರಕರಣದಲ್ಲಿ ಭಾಗಿಯಾದವರ ಹೆಸರು ಗೊತ್ತಿದ್ದರೆ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ಇಬ್ಬರು ಇದ್ದಾರೆ ಎಂದರೆ ಯಾರು? ಅವರ ಹೆಸರನ್ನು ಹೇಳಲು ನಿಮಗೇಕೆ ಅಂಜಿಕೆ? ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ತನಿಖೆ ನಡೆಯುತ್ತಿದೆ. ಆರೋಪಿಯನ್ನೇ ಬಿಟ್ಟವರಿಂದ ನಾವು ಬುದ್ದಿ ಕಲಿಯಬೇಕಿಲ್ಲ ಎಂದು ಕಾಂಗ್ರೆಸ್‍ಗೆ ತಿರುಗೇಟು ಕೊಟ್ಟರು

ನಮ್ಮ ಸರ್ಕಾರದ ಮೇಲೆ ಕಾಂಗ್ರೆಸ್ ನಾಯಕರು ಯಾವ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. ನೀವು ಅಕಾರದಲ್ಲಿದ್ದಾಗ ಆರೋಪಿಯನ್ನೇ ಬಿಟ್ಟಿದ್ದೀರಿ ಎಂಬುದನ್ನು ಮರೆಯಬಾರದು ಎಂದು ವಾಗ್ದಾಳಿ ನಡೆಸಿದರು.

ಆರೋಪಿಯ ಹಿನ್ನೆಲೆ ಬಗ್ಗೆ ಕಾಂಗ್ರೆಸ್ ನಾಯಕರು ಏಕೆ ತನಿಖೆ ನಡೆಸಲಿಲ್ಲ. 2018ರಲ್ಲೇ ಕಾಂಗ್ರೆಸ್ ಶ್ರೀಕಿಯನ್ನು ವಿಚಾರಣೆ ಮಾಡಿದ್ದರೆ ಎಲ್ಲವೂ ಬಹಿರಂಗವಾಗುತ್ತಿತ್ತು. ವಿಚಾರಣೆಯನ್ನೇ ನಡೆಸದೆ ನಮಗೆ ಬುದ್ದಿ ಹೇಳಲು ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ನಮ್ಮ ಸರ್ಕಾರ ಅಕಾರಕ್ಕೆ ಬಂದ ಮೇಲೆ ಡ್ರಗ್ ಕೇಸ್‍ನಲ್ಲಿ ಆತನನ್ನು ಬಂಸಿ ವಿಚಾರಣೆಗೊಳಪಡಿಸಿ ಮಾಹಿತಿಯನ್ನು ಕಲೆ ಹಾಕಲಾಗಿದೆ. ಈ ಪ್ರಕರಣ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿತ್ತು ಎಂದು ಆರೋಪಿಸಿದರು.

ನೀವು ಎಲ್ಲವನ್ನು ಮುಕ್ತವಾಗಿ ಬಿಟ್ಟು ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣರಾಗಿದ್ದೀರಿ. ನಾವು ಆತನನ್ನು ಹಿಡಿದು ವಿಚಾರಣೆಗೊಳಪಡಿಸಿ ಬಹಿರಂಗಪಡಿಸಿದರೆ ನಮ್ಮನ್ನೇ ಪ್ರಶ್ನೆ ಮಾಡುತ್ತೀರಾ ಎಂದರು.ಕಾಂಗ್ರೆಸ್ ನಾಯಕರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಇಲ್ಲವೇ ಇಡಿಗಾದರೂ ಕೊಡಲಿ, ಕಡೆಪಕ್ಷ ನಮಗಾದರೂ ಕೊಡಲಿ ದಾಖಲೆಗಳನ್ನು ಕೊಟ್ಟರೆ ತನಿಖೆಗೆ ಸಹಕಾರವಾಗುತ್ತದೆ ಎಂದು ಹೇಳಿದರು.

ತಿರುಗೇಟು: ಕಾಂಗ್ರೆಸ್ ಉಸ್ತುವಾರಿ ರಣಜೀತ್ ಸಿಂಗ್ ಸುರ್ಜೆವಾಲ ಅವರ ಬಳಿ ಯಾವ ದಾಖಲೆಗಳಿವೆ? ಇದ್ದರೆ ಅವುಗಳನ್ನು ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ನಾಯಕರು ಸೇರಿದಂತೆ ಯಾರ ಬಳಿಯಾದರೂ ಈ ಪ್ರಕರಣ ಕುರಿತಾಗಿ ದಾಖಲೆಗಳಿದ್ದರೆ ನೀವು ತನಿಖಾ ಸಂಸ್ಥೆಗೆ ವಹಿಸಿ, ಸುಳ್ಳು ಆರೋಪಗಳನ್ನು ಮಾಡುವ ಮೊದಲು ಸತ್ಯಾಂಶವನ್ನು ಬಯಲು ಮಾಡಿ ಎಂದು ಸವಾಲು ಎಸೆದರು.

ಈ ಪ್ರಕರಣ ನಡೆದಿರುವುದು 2016ರಲ್ಲಿ ಎಂದು ಸ್ವತಃ ಸುರ್ಜೆವಾಲ ಹೇಳಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿ ಅಂದು ಯಾವ ಪಕ್ಷದ ಸರ್ಕಾರ ಆಡಳಿತದಲ್ಲಿತ್ತು? ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ? ತನಿಖೆ ನಡೆಸುವಂತೆ ನೀವು ಏಕೆ ಹೇಳಲಿಲ್ಲ ಎಂದು ಸಿಎಂ ತರಾಟೆಗೆ ತೆಗೆದುಕೊಂಡರು.

ಟ್ವಿಟರ್ ಹ್ಯಾಂಡಲ್ ಆಧಾರದ ಮೇಲೆ ನೀವು ಪ್ರಶ್ನೆ ಮಾಡುವುದು ಸರಿಯಲ್ಲ. ಪುರಾವೆಗಳನ್ನು ಇಟ್ಟುಕೊಂಡು ಮಾತನಾಡಬೇಕು. ಕಾಂಗ್ರೆಸ್ ಪಕ್ಷದಿಂದಾಗಲಿ ಅಥವಾ ಬೇರೆಯವರಿಂದ ನಾವು ಪಾಠಗಳನ್ನು ಕಲಿಯಬೇಕಾದ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಕರಣದ ಪ್ರಮುಖ ಆರೋಪಿಯನ್ನೇ ಬಂಸದೇ ಬಿಟ್ಟು ಕಳುಹಿಸಿದ್ದು ಇದೇ ಕಾಂಗ್ರೆಸ್ ಪಕ್ಷದವರು. ಈಗ ನೂರು ಬಾರಿ ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಜನರು ಇದನ್ನು ನಂಬಲು ಮೂರ್ಖರಲ್ಲ ಎಂದರು.

2018ರಿಂದ ಪ್ರಕರಣ ನಡೆದಿದೆ ಎಂದು ಹೇಳುವವರು ನಿಮ್ಮ ಸರ್ಕಾರ ಇದ್ದಾಗ ಕ್ರಮ ತೆಗೆದುಕೊಳ್ಳಲಿಲ್ಲ. ನೀವೇ ಆರೋಪಿಯನ್ನು ಬಂಸಿ ಬಿಟ್ಟೀರಿ. ಅಂದೇ ಕ್ರಮ ಕೈಗೊಳ್ಳಲು ನಿಮ್ಮಿಂದ ಏಕೆ ಸಾಧ್ಯವಾಗಲಿಲ್ಲ? ಅಕಾರದಲ್ಲಿದ್ದಾಗ ಅವನನ್ನು ಬಿಟ್ಟು ಈಗ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದೀರಿ.

ಅಷ್ಟು ಕೋಟಿ ಹಗರಣವಾಗಿದೆ, ಇಷ್ಟು ಕೋಟಿ ಬಿಟ್ ಕಾಯಿನ್ ಇದೆ ಎಂದು ಆರೋಪ ಮಾಡುತ್ತೀದ್ದೀರಿ. ಒಂದು ಟ್ವೀಟ್ ಆಧಾರದ ಮೇಲೆ ತನಿಖೆ ನಡೆಸುವುದು ಸರಿಯೇ ಎಂದು ಪ್ರಶ್ನಿಸಿದರು.

ನಾವು ಆರೋಪಿಯನ್ನು ಬಂಸಿದ್ದೇವೆ. ಈಗಾಗಲೇ ಪೊಲೀಸರು ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಆರೋಪಿಯನ್ನು ಬಿಟ್ಟು ಕಳುಹಿಸಿದವರಿಂದ ನಾವು ಬುದ್ದಿ ಕಲಿಯಬೇಕಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದ್ದು, ಪೂರ್ಣಗೊಳ್ಳಲಿ, ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

ಪೊಲೀಸರಿಗೆ ಶ್ರೀಕಿ ಯಾಮಾರಿಸಿರುವ ಕುರಿತಾಗಿ ಪ್ರತಿಕ್ರಿಯಿಸಿದ ಸಿಎಂ ಆತ ತನ್ನ ಅಕೌಂಟ್ ಎಂದು ಯಾವುದೋ ಎಕ್ಸೇಂಜ್ ಅಕೌಂಟ್ ತೋರಿಸಿ ಸುಳ್ಳು ಹೇಳಿದ್ದಾನೆ. ಯಾರಿಗೂ ಕೂಡ ವೈಯಕ್ತಿಕವಾಗಿ ಎಕ್ಸೇಂಜ್ ಅಕೌಂಟ್ ಇರುವುದಿಲ್ಲ. ನಡೆದಿರುವುದು ಇಷ್ಟೇ ಎಂದು ಸಿಎಂ ಸಮರ್ಥಿಸಿಕೊಂಡರು.

Related posts

ಗಣೇಶ ಹಬ್ಬ:ಯಲಬುರ್ಗಾ, ಬೇವೂರ, ಕುಕನೂರಲ್ಲಿ ಮದ್ಯೆ ಮಾರಾಟ ನಿಷೇಧಿಸಿ ಆದೇಶ

satyadarshana

: ಮಾರಣಬಸರಿ ಟು ಜಕ್ಕಲಿ ರಸ್ತೆ ಎರಡು ವರ್ಷವಾದರೂ ಡಾಂಬರ ಕಾಣದ ರಸ್ತೆ

satyadarshana

ಜನಗಣತಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ- ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ

satyadarshana

Leave a Comment