Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್‍ಗೆ ಕೌಂಟ್‍ಡೌನ್-ಚುನಾವಣಾ ಪೂರ್ವ ಬಜೆಟ್ ಮೇಲೆ ಹಲವು ನಿರೀಕ್ಷೆ

ಬೆಂಗಳೂರು: ಸಿಎಂ ಬಸಬರಾಜ ಬೊಮ್ಮಾಯಿಯವರ ಚೊಚ್ಚಲ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 12.30ಕ್ಕೆ ಸಿಎಂ ತಮ್ಮ ಮೊದಲ ಪೂರ್ಣ ಬಜೆಟ್ ಮಂಡಿಸುತ್ತಿದ್ದು, ಹತ್ತು ಹಲವು ನಿರೀಕ್ಷೆಗಳನ್ನು ಹುಟ್ಟಿಸಿದೆ.

ಈ ಬಜೆಟ್ ಸಿಎಂಗೂ, ಸರ್ಕಾರಕ್ಕೂ ಸವಾಲಿನ ಬಜೆಟ್ ಆಗಿದೆ. ರೈತಪರ, ಜನಪರ, ಜನಪ್ರಿಯ ಬಜೆಟ್ ಮಾಡುವ ಹುಮ್ಮಸ್ಸಿನಲ್ಲಿರೋ ಸಿಎಂ, ಎಲ್ಲ ವರ್ಗದವರಿಗೆ, ಎಲ್ಲ ವಲಯಗಳಿಗೆ ಮುಟ್ಟುವ ಬಜೆಟ್ ಮಾಡಬೇಕೆಂಬ ಹಂಬಲ ಹೊಂದಿದ್ದಾರೆ. ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಕೃಷಿ, ನೀರಾವರಿ, ಆರೋಗ್ಯ, ಮೂಲ ಸೌಕರ್ಯ, ಪ್ರವಾಸೋದ್ಯಮ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ.

ವಿತ್ತೀಯ ಶಿಸ್ತು ಕಾಪಾಡಿಕೊಂಡು ಸಾಲದ ಹೊರೆ ಬೀಳದೆ ಮುಂದಿನ ಚುನಾವಣೆಗೆ ಜನಪ್ರಿಯ ಬಜೆಟ್ ಘೋಷಿಸಲು ಸಿಎಂ ಮುಂದಾಗಿದ್ದಾರೆ. ಇದು ಚುನಾವಣಾ ವರ್ಷವಾಗಿರುವುದರಿಂದ ಜನಪ್ರಿಯ ಯೋಜನೆಗಳ ಘೋಷಣೆ ಮಾಡುವ ಸಾಧ್ಯತೆ ಇದೆ.

Related posts

ಕವಿಗಳಿಗೆ ಲೋಕಾವಲೋಕನ ದೃಷ್ಟಿ ಇರಬೇಕು: ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಸಲಹೆ

satyadarshana

ಪಿಎಂಪಿಬಿವೈ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಬೆಳೆ ಹಾನಿ ಆರ್ಥಿಕ ನಷ್ಟದಿಂದ ಪಾರಾಗಲು ವಿಮಾ ಮಾಡಿಸಿ

satyadarshana

₹25 ಲಕ್ಷ ವಂಚನೆ ಕೇಸ್ ತಗಡೂರು ವಿರುದ್ಧ ಕ್ರಮಕ್ಕೆ ಮನವಿ ಪತ್ರಕರ್ತರ ಧ್ವನಿ ಸಂಘಟನೆಯಿಂದ ಜಿಲ್ಲಾಡಳಿತಕ್ಕೆ

satyadarshana

Leave a Comment