Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

₹25 ಲಕ್ಷ ವಂಚನೆ ಕೇಸ್ ತಗಡೂರು ವಿರುದ್ಧ ಕ್ರಮಕ್ಕೆ ಮನವಿ ಪತ್ರಕರ್ತರ ಧ್ವನಿ ಸಂಘಟನೆಯಿಂದ ಜಿಲ್ಲಾಡಳಿತಕ್ಕೆ

ಗದಗ: ವಾನಂದ ತಗಡೂರು ಮೇಲಿನ ₹25 ಲಕ್ಷ ಭ್ರಷ್ಟಾಚಾರ ಕೇಸ್ ಸರ್ಕಾರದ ಪದವಿ, ಅಕಾಡೆಮಿ ಪ್ರಶಸ್ತಿ ರದ್ದುಪಡಿಸಲು ಗದಗ ಡಿಸಿ ಮೂಲಕ ರಾಜ್ಯಪಾಲರು ಸಿಎಂಗೆ ಧ್ವನಿ ಸಂಘಟನೆ ಮನವಿ 

​ಹಲಸೂರು ಗೇಟ್ ಠಾಣೆಯಲ್ಲಿ ಐಪಿಸಿ 420 ವಂಚನೆ ಕೇಸ್ ದಾಖಲು ಕ್ರಿಮಿನಲ್ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಗೆ ಸರ್ಕಾರದ ಸಾಂವಿಧಾನಿಕ ಮಣೆ ಸಲ್ಲದು.​ಮಾಧ್ಯಮ ಅಕಾಡೆಮಿ ಮಾಸಾಶನ ಸಮಿತಿ ಸ್ಥಾನ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ವಜಾಗೆ ಪಟ್ಟು ನ್ಯಾಯಾಂಗ ತನಿಖೆ ಮುಗಿಯುವವರೆಗೆ ದೂರವಿಡಲು ಆಗ್ರಹ.​ಗದಗ ಪತ್ರಿಕಾ ಭವನ ಸಾರ್ವಜನಿಕ ಆಸ್ತಿ ಏಕಸ್ವಾಮ್ಯ ಮುರಿದು ಜಿಲ್ಲಾಡಳಿತದ ಸಮಿತಿ ರಚನೆಗೆ ಗಂಭೀರ ಮನವಿ

​ಜಿಲ್ಲಾ ಮಟ್ಟದ ಪ್ರಮುಖ ಅಧಿಕಾರಿಗಳಿಗೆ ಸಂಘಟನೆಯ ಪರಿಚಯ ಪತ್ರ ಪದಾಧಿಕಾರಿಗಳ ಸಂಪೂರ್ಣ ಪಟ್ಟಿ ಸಲ್ಲಿಕೆ 

​ಗದಗ (ವಿಶೇಷ ವರದಿ):ಸ 03

ಬೆಂಗಳೂರಿನ ಹಳೇ ತಾಲೂಕು ಕಚೇರಿ ರಸ್ತೆಯ ಕಂದಾಯ ಭವನದಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸಂಘದ ಅಭಿವೃದ್ಧಿಗಾಗಿ ಸಂಗ್ರಹಿಸಲಾಗಿದ್ದ ಸುಮಾರು ₹25 ಲಕ್ಷ ಹಣವನ್ನು ಅವಧಿಪೂರ್ವವಾಗಿ ನಿಯಮಬಾಹಿರವಾಗಿ ಬಿಡುಗಡೆ ಮಾಡಿಕೊಂಡು ವೈಯಕ್ತಿಕವಾಗಿ ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರ್ಥಿಕ ವಂಚನೆ ಆರೋಪದಡಿ, ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 403, 415, 420, 421 ಅಡಿಯಲ್ಲಿ ಕ್ರಿಮಿನಲ್ ಪ್ರಕರಣ (FIR ಕ್ರ.ಸಂ: 0048/2026) ಎದುರಿಸುತ್ತಿರುವ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ಎಲ್ಲಾ ಸರ್ಕಾರಿ ಹುದ್ದೆಗಳು ಹಾಗೂ ಪ್ರಶಸ್ತಿಗಳನ್ನು ತಕ್ಷಣವೇ ರದ್ದುಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಗದಗ ಜಿಲ್ಲಾ ಘಟಕದ ವತಿಯಿಂದ ಅಪರ ಜಿಲ್ಲಾಧಿಕಾರಿಗಳ ಮೂಲಕ ಘನತೆವೆತ್ತ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮಹತ್ವದ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘಟನೆಯ ಗದಗ ಜಿಲ್ಲಾಧ್ಯಕ್ಷರಾದ ಅಂದಪ್ಪ ರಾಮಪ್ಪ ಮಾದರ ಅವರು, ಮಹಾನ್ ಚೇತನ ಡಿ.ವಿ. ಗುಂಡಪ್ಪನವರು ಸಂಸ್ಥಾಪಿಸಿದ 95 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಪತ್ರಕರ್ತರ ಸಂಘದ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಕೋರಂ ಇಲ್ಲದೆ ಸಭೆ ನಡೆಸಿ ಲೂಟಿ ಮಾಡಿರುವ ಬಗ್ಗೆ ಸ್ವತಃ ಹಿರಿಯ ಪತ್ರಕರ್ತರ ವಿಚಾರಣಾ ಸಮಿತಿಯೇ ವರದಿ ನೀಡಿದೆ. ಇಂತಹ ಗಂಭೀರ ವಂಚನೆ ಹಾಗೂ 420 ಕೇಸ್‌ನಲ್ಲಿ ಆರೋಪಿಯಾಗಿರುವ ಶಿವಾನಂದ ತಗಡೂರು ಅವರಿಗೆ ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಸದಸ್ಯತ್ವ ಹಾಗೂ ಸಂಕಷ್ಟದಲ್ಲಿರುವ ಹಿರಿಯ ಪತ್ರಕರ್ತರ ಮಾಸಾಶನ ಸಮಿತಿಯ ಸದಸ್ಯತ್ವದಲ್ಲಿ ಮುಂದುವರಿಯಲು ಬಿಟ್ಟಿರುವುದು ನಾಡಿನ ಸಮಸ್ತ ಪ್ರಾಮಾಣಿಕ ಪತ್ರಕರ್ತರಿಗೆ ಬಗೆದ ಮಹಾದ್ರೋಹವಾಗಿದೆ. ಅಷ್ಟೇ ಅಲ್ಲದೆ, ಇಂತಹ ಆರ್ಥಿಕ ಅಪರಾಧ ಹೊತ್ತಿರುವ ವ್ಯಕ್ತಿಗೆ ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿರುವುದು ನಾಡಿನ ಕಲೆ ಮತ್ತು ಸಾಂಸ್ಕೃತಿಕ ಲೋಕಕ್ಕೆ ಮಾಡಿದ ಅವಮಾನ. ಆದ್ದರಿಂದ ಪತ್ರಿಕೋದ್ಯಮದ ಪಾವಿತ್ರ್ಯತೆ ಮತ್ತು ಸಾರ್ವಜನಿಕ ನೈತಿಕತೆಯನ್ನು ಎತ್ತಿಹಿಡಿಯಲು ನ್ಯಾಯಾಂಗ ತನಿಖೆ ಮುಕ್ತಾಯವಾಗುವವರೆಗೆ ಈ ಎಲ್ಲಾ ಸ್ಥಾನಮಾನಗಳು ಹಾಗೂ ಪ್ರಶಸ್ತಿಯನ್ನು ಸರ್ಕಾರ ರದ್ದುಪಡಿಸಬೇಕು ಎಂದು ಎಚ್ಚರಿಸಿದರು.

ಇದೇ ವೇಳೆ ಗದಗ ಜಿಲ್ಲಾಧಿಕಾರಿಗಳಿಗೆ ಮತ್ತೊಂದು ಪ್ರತ್ಯೇಕ ಮಹತ್ವದ ಮನವಿ ಸಲ್ಲಿಸಿದ ನಿಯೋಗವು ಗದಗ ನಗರದಲ್ಲಿರುವ ಪತ್ರಿಕಾ ಭವನವು ಸಾರ್ವಜನಿಕರ ತೆರಿಗೆ ಹಣ ಶಾಸಕರು ಮತ್ತು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ವಾರ್ತಾ ಇಲಾಖೆಯ ವೆಚ್ಚದಲ್ಲಿ ನಿರ್ಮಾಣವಾದ ಸಾರ್ವಜನಿಕ ಸಮುದಾಯ ಆಸ್ತಿಯಾಗಿದೆ. ನಿಯಮಾವಳಿಗಳ ಪ್ರಕಾರ ಇದು ಯಾವುದೇ ಒಂದು ಖಾಸಗಿ ಸಂಘಟನೆಯ ಸ್ವಂತ ಸ್ವತ್ತಲ್ಲ. ಆದರೆ ಪ್ರಸ್ತುತ ನಿರ್ದಿಷ್ಟ ಸಂಘವೊಂದು ಕಟ್ಟಡವನ್ನು ಏಕಸ್ವಾಮ್ಯಕ್ಕೆ ಒಳಪಡಿಸಿಕೊಂಡು, ಇತರ ಪತ್ರಕರ್ತರಿಗೆ ಪ್ರವೇಶ ನಿರಾಕರಿಸುತ್ತಿರುವುದು ಕಾನೂನುಬಾಹಿರವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಾರ್ತಾ ಇಲಾಖೆ ಹಾಗೂ ಎಲ್ಲಾ ನೋಂದಾಯಿತ ಸಂಘಟನೆಗಳನ್ನೊಳಗೊಂಡ ಪತ್ರಿಕಾ ಭವನ ಆಡಳಿತ ಮೇಲ್ವಿಚಾರಣಾ ಸಮಿತಿ ರಚಿಸಿ ಜಿಲ್ಲೆಯ ಸಮಸ್ತ ಮುದ್ರಣ ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮದ ನೈಜ ಪತ್ರಕರ್ತರಿಗೆ ಸಮಾನ ಪ್ರವೇಶ ಮತ್ತು ಸೌಲಭ್ಯ ಕಲ್ಪಿಸಬೇಕು ಎಂದು ಕಟ್ಟುನಿಟ್ಟಾಗಿ ಆಗ್ರಹಿಸಿತು. 

ಕರ್ನಾಟಕ ಸರ್ಕಾರದಿಂದ ಅಧಿಕೃತ ಮಾನ್ಯತೆ ಹೊಂದಿರುವ (ನೋಂದಣಿ ಸಂಖ್ಯೆ: DRB4/SOR/52/2022-2023) ಸಂಘಟನೆಯು ತನ್ನ ಜಿಲ್ಲಾ ಸಮಿತಿ ಹಾಗೂ ಎಲ್ಲಾ 7 ತಾಲೂಕುಗಳ ಪದಾಧಿಕಾರಿಗಳ ಅಧಿಕೃತ ಪಟ್ಟಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP), ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO) ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ (DIPR) ಅಧಿಕಾರಿಗಳಿಗೆ ಸಲ್ಲಿಸಿತು. ಸ್ಥಳೀಯ ಮಟ್ಟದಲ್ಲಿ ತಾಲೂಕು ಆಡಳಿತ, ಪೊಲೀಸ್ ಠಾಣೆಗಳು ಮತ್ತು ತಾಲೂಕು ಪಂಚಾಯಿತಿಗಳಿಗೆ ಅಧಿಕೃತ ನಿರ್ದೇಶನ ನೀಡಿ ಸಂಘಟನೆಯ ಕಾರ್ಯಚಟುವಟಿಕೆಗಳಿಗೆ ಸೂಕ್ತ ಸಮನ್ವಯ ನೀಡುವಂತೆ ಕೋರಲಾಯಿತು. ಇದೇ ವೇಳೆ ಜಿಲ್ಲೆಗೆ ನೂತನವಾಗಿ ಅಧಿಕಾರ ಸ್ವೀಕರಿಸಿದ ಎಸ್ಪಿ ಹಾಗೂ ಜಿ.ಪಂ ಸಿಇಒ ಅವರಿಗೆ ನಿಯೋಗದಿಂದ ಗೌರವ ಸಮರ್ಪಿಸಲಾಯಿತು.

ಜಿಲ್ಲಾಧ್ಯಕ್ಷರಾದ ಅಂದಪ್ಪ ರಾಮಪ್ಪ ಮಾದರ, ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ್ ಹೂವಿನಹಾಳ ಪ್ರಧಾನ ಕಾರ್ಯದರ್ಶಿ ಎಸ್. ವಿ. ಸಂಕನಗೌಡ್ರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಭಿಷೇಕ ಕೊಪ್ಪದ, ಜಿಲ್ಲಾ ಸಹಕಾರ್ಯದರ್ಶಿ ಹುಚ್ಚಿರಪ್ಪ ಈಟಿ, ಜಿಲ್ಲಾ ಖಜಾಂಚಿ ಮುರ್ತುಜ ಹುಬ್ಬಳ್ಳಿ, ನಿರ್ದೇಶಕರಾದ ಎಂ. ಎಸ್. ಮಲ್ಲನಗೌಡ್ರ, ರಮೇಶ್ ನಂದಿ, ಕುಮಾರ್ ಬಿ. ಎಲ್., ಶಿವಸಂಗಯ್ಯ ಸಾಂತಯ್ಯನಮಠ.

​ತಾಲೂಕು ಘಟಕಗಳ ಪದಾಧಿಕಾರಿಗಳು:

ರೋಣ ತಾಲೂಕು ಅಧ್ಯಕ್ಷರಾದ ರುದ್ರಪ್ಪ ಹೆಬ್ಬಳ್ಳಿ, ಗಜೇಂದ್ರಗಡ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಾನಂದ ಗೋಗೇರಿ.

​ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು:

ಮಲ್ಲಪ್ಪ ಮಾದರ, ಅಬ್ದುಲ್ ಹುಡೇದ್, ಕನಕಪ್ಪ ಕೊತಬಾಳ, ಮಹಮ್ಮದ್ ರಫಿ ಮಜ್ಜಿಸ್ ಮನಿ, ಮಂಜುನಾಥ್ ಬಂಡಿ ವಡ್ಡರ, ಶ್ರೀಮತಿ ಸಾವಿತ್ರಿ ಸೋಮನಕಟ್ಟಿ, ಶರಣಪ್ಪ ಸಕ್ರ ಗೌಡ, ಪ್ರಶಾಂತ್ ಜಕ್ಕಲಿ, ಶಿವಯೋಗಪ್ಪ ಬಾವಿ, ದುರ್ಗೇಶ್ ಬೈರಮನವರ, ಅಣ್ಣಪ್ಪ ಗುತ್ತಮ್ಮನವರ್, ಗಾಳೆಪ್ಪ ಹರಿಜನ , ಮಂಜುನಾಥ್ ಮೇಲ್ಮರಿ ಹಾಗೂ ಕರಿಯಪ್ಪ ಎನ್. ಸೇರಿದಂತೆ ಜಿಲ್ಲೆಯ ಹಲವು ಪತ್ರಕರ್ತರು ಉಪಸ್ಥಿತರಿದ್ದರು.

Related posts

ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಭೆ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ನೀಡಿ

satyadarshana

ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ರಾಜ್ಯೂವೇಷನ್ ಡೇ ಆಚರಣೆ.

satyadarshana

ಗದಗ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಸ್ಪರ್ಧೆ ಉದ್ಘಾಟನೆ: ಆದರ್ಶ ಶಿಕ್ಷಣ ಸಮಿತಿಯ ಚೇರಮನ್ ಆನಂದ ಪೋತ್ನೀಸ್

satyadarshana

Leave a Comment