Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ರಾಜ್ಯೂವೇಷನ್ ಡೇ ಆಚರಣೆ.

 

ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಹಂತದ ಆರಂಭವನ್ನು ಗುರುತಿಸುವಂತೆ ಮಾಡುವುದು ಅಗತ್ಯ: ನಾಜೀಯಾ ಮುದಗಲ್.

ಗಜೇಂದ್ರಗಡ:

ನಗರದ ಮೈಸೂರು ಮಠದಲ್ಲಿ ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯ ಗ್ರಾಜ್ಯೂವೇಷನ್ ಡೇ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಸಿ.ಆರ್.ಪಿ ಆರ್.ಜಿ. ಮ್ಯಾಕಲ್ ಅವರು ಉದ್ಘಾಟಿಸಿ ಮಾತನಾಡಿ

ಮಕ್ಕಳ ಶಿಕ್ಷಣದ ಮಹತ್ವವನ್ನು ವಿವರಿಸಿ, ಪ್ರಾಥಮಿಕ ಹಂತದಲ್ಲೇ ಉತ್ತಮ ಶಿಕ್ಷಣ ಮತ್ತು ಸಂಸ್ಕಾರಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳಿಗೆ ಗ್ರಾಜ್ಯೂವೇಷನ್ ಕ್ಯಾಪ್ , ಸಮವಸ್ರ್ತ ಧರಿಸಿ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣಗಳು ಉಪಸ್ಥಿತರಿದ್ದವರ ಮನಸೂರೆಗೊಂಡವು.

ಬಳಿಕ‌ ಸಂಸ್ಥೆಯ ಕಾರ್ಯದರ್ಶಿ ನಾಜೀಯಾ ಮುದಗಲ್ ಮಾತನಾಡಿ ಪೂರ್ವ ಪ್ರಾಥಮಿಕ ಹಂತದಲ್ಲಿ ಮಕ್ಕಳ ಭವಿಷ್ಯದ ಅಡಗಿರುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ನೀಡುವಲ್ಲಿ ನಮ್ಮ ಸಂಸ್ಥೆಯು ಸದಾಕಾಲವೂ ಸಿದ್ದವಿದೆ. ಮುಗ್ದ ಮನಸ್ಸಿನ ಮಕ್ಕಳನ್ನು ಕಲಿಕೆಯತ್ತ ಸೆಳೆಯಲು ಇಂತಹ ಕಾರ್ಯಕ್ರಮಗಳು ಮಾದರಿ ಎಂದರು.

ಇದೇ ಸಂದರ್ಭದಲ್ಲಿ ಉತ್ತರ ವಲಯದ ಸಿ.ಆರ್.ಪಿ. ಕಾಲೇಶ ವನ್ನಾಲ, ಹಿನ್ನಲೆ ಗಾಯಕರಾದ ನಾಗರಾಜ ಹುಣಸಿಕಟ್ಟಿ, ಸಂಸ್ಥೆಯ ಅಧ್ಯಕ್ಷ ಸೀತಲ ಓಲೇಕಾರ, ಶಿಕ್ಷಕಿಯರಾದ ಅನುಷಾ ತಳವಾರ, ಎಚ.ಎಚ್.ಮಾದರ, ಪರಿಚಾರಕಿಯರಾದ ಅಂಜುಮ ಹಂಪಿಹೊಳ್ಳಿ, ಮಂಜುಳಾ ಸುಂಕದ ಸಂಗಮೇಶ ರೇವಡಿ, ರವಿಚಂದ್ರ ನಿಡಗುಂದಿ, ಶ್ರೀನಿವಾಸ ಕಾಮಾರ ಸೇರಿದಂತೆ ಮುದ್ದು ಮಕ್ಕಳು ಹಾಗೂ ಪಾಲಕರು ಇದ್ದರು‌.

Related posts

ಯಲಬುರ್ಗಾ ಕ್ಷೇತ್ರ: ಕೊನೆಯ ದಿನ 11 ನಾಮಪತ್ರಗಳ ಸಲ್ಲಿಕೆ

satyadarshana

ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಪುನರಾಭಿವೃದ್ಧಿಗೊಂಡ ಮುನಿರಾಬಾದ್ ರೈಲು ನಿಲ್ದಾಣ

satyadarshana

ಸಫಾಯಿ ಕರ್ಮಚಾರಿಗಳಿಗೆ ಸರ್ಕಾರಿ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಧಿಕಾರಿಗಳಿಗೆ ಸೂಚನೆ

satyadarshana

Leave a Comment