Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಜಕ್ಕಲಿ ಗ್ರಾಮದ ದಲಿತ ಯುವಕರ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಆಕ್ರೋಶ 

 

ರೋಣ: ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದ ಹತ್ತಿರ ದಲಿತ ಸಮುದಾಯದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ ಮೇಲೆ ನಡೆದಿರುವ ಅಮಾನವೀಯ ಹಲ್ಲೆ ಮತ್ತು ಜಾತಿ ನಿಂದನೆಯ ಘಟನೆಯನ್ನು ದಲಿತ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ರೋಣ ಪೋಲಿಸ್ ಠಾಣೆಯಲ್ಲಿ ಎಲ್ಲಾ ದಲಿತ ಮುಖಂಡರು ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ ಮೇಲೆ ನಡೆದಿರುವ ಅಮಾನವೀಯ ಹಲ್ಲೆ ಮತ್ತು ಜಾತಿ ನಿಂದನೆಯ ಘಟನೆಯನ್ನು ಖಂಡಿಸಿ ದಲಿತ ಮುಖಂಡರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,”ದಿನಾಂಕ 20/03/2026 ರಂದು ರಾತ್ರಿ ಅಂದಪ್ಪ ಮಾದರ ಅವರು ರೋಣದಿಂದ ಜಕ್ಕಲಿಗೆ ಬರುತ್ತಿದ್ದಾಗ, ಸಾರ್ವಜನಿಕ ರಸ್ತೆಯಲ್ಲಿ ಲಾರಿಗಳನ್ನು ಅಡ್ಡಗಟ್ಟಿ ಗಲಾಟೆ ಮಾಡಿದ್ದಲ್ಲದೆ, ಸ್ಥಳೀಯರಾದ ಸಂದೇಶ ಮೇಟಿ ಮತ್ತು ವೀರಭದ್ರಪ್ಪ ಗಾಣಿಗೇರ ಎಂಬುವವರು ಸೇರಿಕೊಂಡು ದಲಿತ ಯುವಕರನ್ನು ಜಾತಿ ಹಿಡಿದು ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವುದು ಅತ್ಯಂತ ಖಂಡನೀಯ ಮತ್ತು ಕಾನೂನುಬಾಹಿರ ಕೃತ್ಯವಾಗಿದೆ,” ಎಂದು ದಲಿತ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನರೇಗಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ SC/ST ದೌರ್ಜನ್ಯ ತಡೆ ಕಾಯ್ದೆಯಡಿ FIR (ಸಂಖ್ಯೆ: 24/2026) ದಾಖಲಾಗಿ ಮೂರು ದಿನಗಳಾಗುತ್ತಾ ಬಂದರೂ, ಪೊಲೀಸರು ಈವರೆಗೂ ಪ್ರಮುಖ ಆರೋಪಿಗಳನ್ನು ಬಂಧಿಸದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆರೋಪಿಗಳ ಹಿಂದೆ ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ ಪೊಲೀಸರು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ದಲಿತಮುಖಂಡರು ಪೊಲೀಸ ಇಲಾಖೆಗೆ ಪ್ರಮುಖ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ತನಕ ನಾವು ಪ್ರತಿಭಟನೆ ಮಾಡುವದಾಗಿ ಎಚ್ಚರಿಸಿದರು ಹಾಗೆಯೇ

FIR ನಲ್ಲಿ ಹೆಸರಿಸಲಾದ ಎಲ್ಲಾ ಆರೋಪಿಗಳನ್ನು ಮತ್ತು ಆ ಐದು ಲಾರಿಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು.

ಸಂತ್ರಸ್ತ ಅಂದಪ್ಪ ಮಾದರ ಮತ್ತು ಸಾಕ್ಷಿಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು.

ಸಮಾಜ ಕಲ್ಯಾಣ ಇಲಾಖೆಯು ಕೂಡಲೇ ಸಂತ್ರಸ್ತರಿಗೆ ನಿಯಮಾನುಸಾರ ಪರಿಹಾರ ಧನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು.

ಒಂದು ವೇಳೆ ಪೊಲೀಸರು ವಿಳಂಬ ಧೋರಣೆ ಅನುಸರಿಸಿದರೆ, ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ರೋಣ ತಾಲ್ಲೂಕು ಕಚೇರಿ ಹಾಗೂ ಪೊಲೀಸ್ ಠಾಣೆಯ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಕೊನೆಗೆ ರೋಣ ಪೊಲೀಸಠಾಣೆಯ ಪಿ ಎಸ್ ಐ, ಸಿ ಪಿ ಐ, ಡಿ ವಾಯ್ ಎಸ್ ಪಿ, ಎಡಿಷನಲ್ ಎಸ್ಪಿ ದಲಿತ ಮುಖಂಡರ ಮನವಿ ಸ್ವೀಕಾರ ಮಾಡಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು ಈ ಸಮಯದಲ್ಲಿ ಎಲ್ಲಾ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು

 

Related posts

ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ: ಸಚಿವ ಶಿವರಾಜ ತಂಗಡಗಿ

satyadarshana

ಐತಿಹಾಸಿಕ ಲಕ್ಕುಂಡಿ ಉತ್ಸವದ ಎರಡನೇ ದಿನದ ಸಾಂಸ್ಕøತಿಕ ಕಾರ್ಯಕ್ರಮ

satyadarshana

ಏ.14 ರಂದು ಡಾ. ಅಂಬೇಡ್ಕರ್‌ರವರ ಹಾಗೂ ಡಾ. ಬಾಬು ಜಗಜೀವನರಾಮ್‌ರವರ ಜನ್ಮ ದಿನಾಚರಣೆ

satyadarshana

Leave a Comment