Satya Darshana
ಬಿಸಿ ಬಿಸಿ ಸುದ್ದಿ
ಫೋಟೋಬಿಸಿ ಬಿಸಿ ಸುದ್ದಿ

ಕೇಂದ್ರ ಬಿಜೆಪಿ ಸರಕಾರದ ಬೆಲೆ ಎರಿಕೆ ಖಂಡಿಸಿ ವಲಯವಾರು ಪ್ರತಿಭಟನೆ

ಗದಗ: ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿನ ಗದಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೇಂದ್ರ ಬಿಜೆಪಿ ಸರಕಾರದ ಬೆಲೆ ಎರಿಕೆ ಖಂಡಿಸಿ ವಲಯವಾರು ಪ್ರತಿಭಟನೆ ಹಮ್ಮಿಕೊಳ್ಳುವ ಕುರಿತು ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಮಯೂರ ಜಯಕುಮಾರ ನೇತೃತ್ವದಲ್ಲಿ ಏಪ್ರಿಲ್ 22ರಂದು ಸಂಜೆ 5ಕ್ಕೆ ಪೂರ್ವಭಾವಿ ಸಭೆ ಜರುಗಲಿದೆ.

ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ಶ್ರೀ ಜಿ ಎಸ್ ಪಾಟೀಲ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಕಾಂಗ್ರೆಸ್ ಪಕ್ಷದ ಮಾಜಿ ಹಾಗೂ ಹಾಲಿ ಶಾಸಕರುಗಳು, ಪಕ್ಷದ ಜಿಲ್ಲಾ ಪಧಾದಿಕಾರಿಗಳು ಬ್ಲಾಕ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ, ಗ್ರಾಮ ಪಂಚಾಯತ, ಎಪಿಎಂಸಿ ಪಕ್ಷದ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಹಾಗೂ ನಗರಸಭೆ ಪಟ್ಟಣ ಪಂಚಾಯ್ತಿ ಪುರಸಭೆ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎಸ್‌ಸಿ/ಎಸ್‌ಟಿ, ಅಲ್ಪಸಂಖ್ಯಾತರ, ವಿದ್ಯಾರ್ಥಿ ಕಾಂಗ್ರೆಸ್, ಕಾಂಗ್ರೆಸ್ ಸೇವಾದಳ, ಹಿಂದುಳಿದ ವರ್ಗ, ಸಾಮಾಜಿಕ ಜಾಲತಾಣ, ರಾಜೀವಗಾಂಧಿ ಪಂಚಾಯತ ಸಂಘಟನೆ, ಮಾಜಿ ಸೈನಿಕರ ವಿಭಾಗ, ಮೀನುಗಾರ ವಿಭಾಗ, ಕಾರ್ಮಿಕರ ವಿಭಾಗ, ಐ,ಎನ್,ಟಿ,ಯು,ಸಿ, ಕಾನೂನು ಮತ್ತು ಮಾನವ ಹಕ್ಕು ವಿಭಾಗ, ಕಿಸಾನ್ ಮತ್ತು ಖೆತ್ ಮಜದೂರ ವಿಭಾಗ, ಮಾಜಿ ಸೈನಿಕರ ವಿಭಾಗ, ವೈದ್ಯರ ವಿಭಾಗ, ವೃತ್ತಿಪರ ವಿಭಾಗ, ಪದವಿಧರ ಹಾಗೂ ಶಿಕ್ಷಕರ ವಿಭಾಗ, ನೀತಿ ಮತ್ತು ಸಂಶೋಧನೆ ತರಬೇತಿ ವಿಭಾಗ, ವಿಕಲಚೇತನರ ವಿಭಾಗ, ಲಿಗಲ್ ರೀಪಾರ್ಮ್ಸ್ ವಿಭಾಗ, ಐ,ಟಿ, ಮತ್ತು ಡಾಟಾ ವಿಭಾಗ ಮಾಧ್ಯಮ ಮತ್ತು ಸಂಪರ್ಕ ಇಲಾಖೆ ವಿಭಾಗ, ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ಪಕ್ಷದ ಅಭಿಮಾನಿಗಳು ಪಾಲ್ಗೊಳ್ಳಬೇಕೆಂದು *ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾದ ವಿ ಬಿ ಸೋಮನಕಟ್ಟಿಮಠ ಗದಗ-ಬೆಟಗೇರಿ ಶಹರ ಕಾಂಗ್ರೇಸ್ ಸಮಿತಿ ಅದ್ಯಕ್ಷರಾದ ಬಿ ಬಿ ಅಸೂಟಿ ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರಾದ ಅಶೋಕ ಕೆ ಮಂದಾಲಿ ವಿನಂತಿಸಿದ್ದಾರೆ*

Related posts

ಅಹೋರಾತ್ರಿ ಧರಣಿಗೆ ಎಐಸಿಸಿ ಮೆಚ್ಚುಗೆ… ಡಿಕೆಶಿ ಜಾಣತನದ ಹೆಜ್ಜೆಗೆ ಕಾಂಗ್ರೆಸ್ ಹೈಕಮಾಂಡ್ ಶಹಬ್ಬಾಸ್…

satyadarshana

ಚರ್ಚೆ: ಜನೌಷಧದ ಬಗ್ಗೆ ದಾರಿ ತಪ್ಪಿಸುತ್ತಿದ್ದಾರಾ ವೈದ್ಯರು?

cradmin

ಕೆ.ಹೊಸಹಳ್ಳಿ ವೀರಭದ್ರಪ್ಪ ಶಿವಶರಣರ 70ನೇ ಪುಣ್ಯ ತಿಥಿ

satyadarshana