Satya Darshana
ಬಿಸಿ ಬಿಸಿ ಸುದ್ದಿ
ಕ್ರೀಡೆಬಿಸಿ ಬಿಸಿ ಸುದ್ದಿರಾಜ್ಯ

ವಿಶ್ವಕಪ್ ಫೈನಲ್: ಪ್ರಧಾನಿ ಮೋದಿ, ಅಮಿತಾಬ್ ಬಚ್ಚನ್, ರಜನಿಕಾಂತ್ ಸೇರಿ ಕ್ರಿಕೆಟ್ ದಿಗ್ಗಜರು ಪಂದ್ಯ ವೀಕ್ಷಣೆ

ಅಹಮದಾಬಾದ್, ನ.19- ಪ್ರಸಕ್ತ ಸಾಲಿನ ವಿಶ್ವಕಪ್ ಕ್ರಿಕೆಟ್‍ನ ಫೈನಲ್ ಪಂದ್ಯ ನಾಳೆ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಹಣಾಹಣಿ ಕ್ರೀಡಾ ರಸಿಕರಿಗೆ ರಸದೌತಣ ಉಣಬಡಿಸಲಿದೆ.

ಪಂದ್ಯ ವೀಕ್ಷಣೆಗೆ ಆಸ್ಟ್ರೇಲಿಯಾ ಪ್ರಧಾನಿಗಳಿಗೂ ಮೋದಿ ಆಹ್ವಾನ ನೀಡಿದ್ದು ಅವರು ಪಂದ್ಯ ವೀಕ್ಷಣೆಗೆ ಆಗಮಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಆಟಗಾರರ ಫಾರ್ಮ್ ನೋಡಿದಾಗ ನಿಶ್ಚಿತವಾಗಿ ಭಾರತ ಈ ಫೈನಲ್ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

ಆದರೆ ಆಸ್ಟ್ರೇಲಿಯಾ ತಡ ಈಗಾಗಲೇ ಐದು ಬಾರಿ ವಿಶ್ವಕಪ್ ಟ್ರೋಫಿನ್ನು ಎತ್ತಿಹಿಡಿದಿರುವ ತಂಡವಾಗಿದ್ದು ಯಾವ ಕಾರಣಕ್ಕೂ ಆಸಿಸ್ ಪಡೆಯನ್ನು ಹಗುರವಾಗಿ ಪಡಿಗಣಿಸುವಂತಿಲ್ಲ ಎನ್ನುವುದು ಅತ್ಯಂತ ಸ್ಪಷ್ಟ.

ಇನ್ನು ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳ ಮಧ್ಯೆ ಕಠಿಣ ಪೈಪೋಟಿ ನಡೆಯುವುದು ನಿಶ್ಚಿತ. ಈಗಾಗಲೇ ಲೀಗ್ ಹಂತದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಸುಲಭವಾಗಿ ಮಣಿಸಿತ್ತು

Related posts

ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿ ನಿಧನ

satyadarshana

ಶಾಸಕರ ಭವನದಲ್ಲಿ ಮೊಟ್ಟೆ ನಿರ್ಬಂಧ.

satyadarshana

ಕೇಂದ್ರ ಅಧ್ಯಯನ ತಂಡದಿಂದ ಅತೀವೃಷ್ಠಿ ಹಾನಿ ಪರಿಶೀಲನೆ.

satyadarshana

Leave a Comment