Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಪಿಎಸ್ಐ ಪರೀಕ್ಷೆ ಅಕ್ರಮ ;16 ಆರೋಪಿಗಳ ಮೊಬೈಲ್​​​ ಲ್ಯಾಬ್​​ಗೆ ರವಾನೆ..!

ಬೆಂಗಳೂರು, ಮೇ 10- ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ PSI ಅಭ್ಯರ್ಥಿಗಳ ಮೊಬೈಲ್​​ ಪರೀಕ್ಷೆ ಮಾಡಲು  ಸೈಬರ್​​ ಲ್ಯಾಬ್​ಗೆ ಕಳಿಸಿದ್ದಾರೆ. 16 ಆರೋಪಿಗಳ ಮೊಬೈಲ್​​​ ಲ್ಯಾಬ್​​ಗೆ ರವಾನೆ ಮಾಡಲಾಗಿದೆ.

ಪಿಎಸ್ಐ ನೇಮಕ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂಬ ಆರೋಪಿಗಳಡೆ 92 ಮೊಬೈಲ್ಗಳನ್ನು ವಶಕ್ಕೆ ಪದಿರುವ ಸಿಐಡಿ ಅಧಿಕಾರಿಗಳುದತ್ತಾಂಶ ಮರುಗಳಿಕೆಗಾಗಿ ವಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.ಅಕ್ರಮದಲ್ಲಿ ಮೊಬೈಲ್ ಸಂಪರ್ಕಗಳು, ಸಂಭಾಷಣೆಗಳು ಪ್ರಮುಖ ಪಾತ್ರವಹಿಸಿದ್ದು, ಆರೋಪಿಗಳ ಸುಳಿವು ಪತ್ತೆಗೆ ಸಹಕರಿಸುತ್ತಿವೆ. ಬಹಳಷ್ಟು ಮಂದಿ ಆರೋಪಿಗಳು ಸಿಕ್ಕಿ ಬೀಳುವ ಭಯದಲ್ಲಿ ತಮ್ಮ ಮೊಬೈಲ್ಗಳನ್ನು ನಾಶ ಪಡಿಸಿದ್ದಾರೆ. ಕೆಲವರು ಕೆರೆ, ಬಾವಿ, ಅಣೆಕಟ್ಟೆಗಳಲ್ಲಿರುವ ನೀರಿಗೆ ಮೊಬೈಲ್ಅನ್ನು ಎಸೆದಿದ್ದಾರೆ.

ಇನ್ನು ಕೆಲವರು ಸಿಮ್ ತೆಗೆದು ಮುರಿದು ಹಾಕಿ ಮೊಬೈಲ್ಅನ್ನು ಒಡೆದು ಹಾಕಿದ್ದಾರೆ. ಕೆಲವರ ಮೊಬೈಲ್ಗಳು ಸಿಕ್ಕಿವೆಯಾದರೂ ಅದರಲ್ಲಿ ಕಾಲ್ ರಿಜಿಸ್ಟ್ರಾರ್, ಮೆಸೆಜ್, ವಾಟ್ಸ್ಆಪ್ ,ಸಿಮ್ ಮುರಿದು ಹಾಕಿರುವ ಪ್ರಕರಣಗಳಲ್ಲಿ ಮೊಬೈಲ್ ಸಂಖ್ಯೆ ಆಧರಿಸಿ ಕಾಲ್ ಲೀಸ್ಟ್ ತೆಗೆದು ತನಿಖೆ ನಡೆಸಲಾಗುತ್ತಿದೆ. ಸಂಪರ್ಕ ಹಾಗೂ ಸಂವಹನಕ್ಕಾಗಿ ಬಳಸಲಾದ ಮೊಬೈಲ್ ನಂಬರ್ ಸಂಖ್ಯೆಗಳನ್ನು ಆಧಾರವಾಗಿಟ್ಟುಕೊಂಡು ಸಿಐಡಿಗಳು ಆರೋಪಿಗಳ ಬೆನ್ನು ಹತ್ತಿದ್ದಾರೆ.ಇ-ಮೇಲ್ ಸಂದೇಶ ಸೇರಿದಂತೆ ದತ್ತಾಂಶಗಳನ್ನು ಅಳಿಸಿ ಹಾಕಲಾಗಿದೆ. ಲಭ್ಯವಿರುವ ಮೊಬೈಲ್ಗಳನ್ನು ವಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್)ಕ್ಕೆ ರವಾನಿಸಿದ್ದು, ದತ್ತಾಂಶದ ರೀಟ್ರ್ಯಾಕ್ಗೆ ಪ್ರಯತ್ನಿಸಲಾಗುತ್ತಿದೆ.

Related posts

ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023 ಸಲಹೆ ದೂರುಗಳಿಗಾಗಿ ಸಹಾಯವಾಣಿ

satyadarshana

ಜನತಾ ಜಲಧಾರೆಯ ಗಂಗಾ ರಥಗಳಿಗೆ ಹಸಿರು ನಿಶಾನೆ

satyadarshana

ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕ ಪ್ರಮಾಣದಲ್ಲಿ ಲಭ್ಯ

satyadarshana

Leave a Comment