Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಗಜೇಂದ್ರಗಡ ಲ್ಲೂ ವ್ಯಾಪಕ ಪ್ರತಿಭಟನೆ

ಸತ್ಯದರ್ಶನ

ಗಜೇಂದ್ರಗಡ, ಡಿ.20- ಅತ್ತ ಬೆಳಗಾವಿ ಯಲ್ಲಿ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದರೆ ಇತ್ತ  ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮಹಾರಾಷ್ಟ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿವೆ.

ಎಂಇಎಸ್‍ನವರು ನಮ್ಮ ನಾಡಧ್ವಜಕ್ಕೆ ಅವಮಾನ ಮಾಡಿದ್ದಾರೆ. ಸರ್ಕಾರದ ವಾಹನಗಳಿಗೆ ಬೆಂಕಿ ಇಟ್ಟು ಸರ್ಕಾರದ ಮೇಲೆ ದಾಳಿ ಮಾಡಿದ್ದಾರೆ. ಆದರೆ ಸರ್ಕಾರ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿದೆ ಎಂದು ಕರವೇ.ಕನ್ನಡಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದರೆ

 ಕಾಲಕಾಲೇಶ್ವರ ಸರ್ಕಲ್ ನಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಈಗ ಬೂದಿ ಮುಚ್ಚಿದ ಕೆಂಡದಂತಿದೆ. ಅಲ್ಲಿ ಎಂಇಎಸ್ ಹಿಟ್ಲರ್ ರೀತಿ ವರ್ತಿಸುತ್ತಿದೆ. ಎಂಇಎಸ್ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡಬೇಕಿದೆ.

ಸರ್ಕಾರದ ಆಸ್ತಿಪಾಸ್ತಿಯನ್ನು ಹಾಳು ಮಾಡುವ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನ ಮಾಡುವಂತಹ ದುಷ್ಕøತ್ಯ ಎಸಗಿರುವುದಲ್ಲದೆ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜವನ್ನು ಸುಟ್ಟು ಅವಮಾನ ಮಾಡಿದ್ದಾರೆ.

ಇದನ್ನು ಸಹಿಸಲು ಸಾಧ್ಯವಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಇಂತಹ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು. ನಮ್ಮ ಸ್ವಾಭಿಮಾನ ಅಡವಿಟ್ಟು ಅವರನ್ನು ಓಲೈಸುವ ಕೆಲಸವನ್ನು ಯಾರೂ ಮಾಡಬಾರದು. ಮುಂದಿನ ಹೋರಾಟ ದಲ್ಲಿ ನಾವು ತಕ್ಕ ಪ್ರತ್ಯುತ್ತರ ಕೊಡುವ ಕೆಲಸ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.

 

 

 

 

 

Related posts

ಕೆಲಸ ಮಾಡುವ ಸ್ಥಳದಲ್ಲೇ ಲಸಿಕೆ ನೀಡುವ ಕಾರ್ಯಕ್ರಮ *ರಾಜ್ಯದಲ್ಲಿ ಕೋವಿಡ್-19 ಲಸಿಕೆಯ ಎರಡನೇ ಡೋಸ್‌ಗೆ ಜನರ ನಿರುತ್ಸಾಹ.

satyadarshana

ಬಾಗಲಕೋಟೆ ಒಟ್ಟು 23 ವಿದ್ಯುತ್ ವಿತರಣಾ ಕೇಂದ್ರ 400 ಕಿ. ವ್ಯಾ. ಸಾಮರ್ಥ್ಯದ ಲೋಕಾಪೂರ ವಿದ್ಯುತ್ ಸ್ವೀಕರಣಾ ಕೇಂದ್ರ

satyadarshana

ಅಕ್ರಮವಾಗಿ ಮರಳು ಸಾಗಾಟ ಭೂ ವಿಜ್ಞಾನಿ ನಾಗರಾಜು ಚಾಲಕ ಸಚಿನ್‌ ಗೌರಿಪುರ ಮೇಲೆ ಹಲ್ಲೆ

satyadarshana

Leave a Comment