Satya Darshana
ಬಿಸಿ ಬಿಸಿ ಸುದ್ದಿ
ಕ್ರೀಡೆ

ಟಿ20 ವಿಶ್ವಕಪ್​ನ ನ್ಯೂಜಿಲೆಂಡ್ ಸೋತರೆ ಟೀಮ್ ಇಂಡಿಯಾಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ…

ಸತ್ಯದರ್ಶನ
 ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋತರೆ ಟೀಮ್ ಇಂಡಿಯಾಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಇರಲಿದೆ.

ಇದೀಗ ನಿರ್ಣಾಯಕ ಪಂದ್ಯದಲ್ಲಿ ಮುಜೀಬ್ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಟಿ20 ವಿಶ್ವಕಪ್​ನ 40ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್-ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋತರೆ ಟೀಮ್ ಇಂಡಿಯಾಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಇರಲಿದೆ. ಹೀಗಾಗಿ ಅಫ್ಘಾನ್-ಕಿವೀಸ್ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಅತ್ತ ಅಫ್ಘಾನಿಸ್ತಾನ್ ತಂಡಕ್ಕೆ ಕಳೆದೆರಡು ಪಂದ್ಯಗಳಲ್ಲಿ ತಮ್ಮ ಸ್ಟಾರ್ ಬೌಲರ್​ ಮುಜೀಬ್​ ಉರ್ ರೆಹಮಾನ್ ಅವರ ಅಲಭ್ಯತೆ ಕಾಡಿತ್ತು. ಇದೀಗ ನಿರ್ಣಾಯಕ ಪಂದ್ಯದಲ್ಲಿ ಮುಜೀಬ್ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಗೊಂಡು ಕಳೆದೆರಡು ಪಂದ್ಯದಿಂದ ಹೊರಗುಳಿದಿದ್ದ ಮುಜೀಬ್ ಉರ್ ರೆಹಮಾನ್ ಫುಲ್ ಫಿಟ್​ ಆಗಿದ್ದಾರೆ. ಅದರಂತೆ ಶನಿವಾರ ಜಿಮ್​ನಲ್ಲಿ ತಾಲೀಮು ನಡೆಸಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ದ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಮುಜೀಬ್ ಆಗಮನದಿಂದಾಗಿ ಅಫ್ಘಾನ್​ ತಂಡ ಮತ್ತಷ್ಟು ಬಲಿಷ್ಠವಾಗಲಿದೆ.

ನ್ಯೂಜಿಲೆಂಡ್​ ವಿರುದ್ದದ ಪಂದ್ಯಕ್ಕೆ ಮುಜೀಬ್ ಅಲಭ್ಯರಾಗುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ್ದ ರವಿಚಂದ್ರನ್ ಅಶ್ವಿನ್, ಮುಜೀಬ್​ಗೆ ಬೇಕಿದ್ದರೆ ಟೀಮ್ ಇಂಡಿಯಾದ ಫಿಸಿಯೋ ಸಹಾಯ ಕೇಳಬಹುದು ಎಂದು ತಮಾಷೆಯಾಗಿ ತಿಳಿಸಿದ್ದರು. ಇತ್ತ ಟೀಮ್ ಇಂಡಿಯಾ ಕೂಡ ನ್ಯೂಜಿಲೆಂಡ್ ವಿರುದ್ದ ಮುಜೀಬ್ ಕಣಕ್ಕಿಳಿದರೆ ಅಫ್ಘಾನ್ ಬೌಲಿಂಗ್ ಲೈನಪ್ ಬಲಿಷ್ಠವಾಗಲಿದೆ ಎಂಬ ಲೆಕ್ಕಚಾರದಲ್ಲಿತ್ತು. ಇದೀಗ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಖುದ್ದು ಮುಜೀಬ್ ಉರ್ ರೆಹಮಾನ್ ಹಂಚಿಕೊಂಡಿದ್ದಾರೆ. ಇದರೊಂದಿಗೆ ನ್ಯೂಜಿಲೆಂಡ್ ವಿರುದ್ದ ಅಫ್ಘಾನಿಸ್ತಾನ್​ ಯುವ ಸ್ಪಿನ್ನರ್ ಆಡೋದು ಬಹುತೇಕ ಖಚಿತ.

Related posts

ಐತಿಹಾಸಿಕ ಲಕ್ಕುಂಡಿ ಉತ್ಸವದ ಎರಡನೇ ದಿನದ ಸಾಂಸ್ಕøತಿಕ ಕಾರ್ಯಕ್ರಮ

satyadarshana

ಚುನಾವಣೆಗೂ ಮುನ್ನವೇ ಕನ್ನಡದ ಆಸ್ಮಿತೆ ಕಿಚ್ಚು ಹಚ್ಚಿದ ಸಿದ್ದರಾಮಯ್ಯ

cradmin

ರಾಹುಲ್ ಅಪ್ಪುಗೆಯ ಮೌಲ್ಯವನ್ನು ಕಳೆದು ಹಾಕಿದ ಕಣ್ಮಿಟುಕು

cradmin

Leave a Comment