Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಜಿಪಂ ಅನುದಾನದಲ್ಲಿ ಬೋಗಸ್ ದಾಖಲೆ ಸೃಷ್ಟಿಸಿ ಬಿಲ್‌ ಎತ್ತುವಳಿ? | ಅರೆಬರೆ ಕಾಮಗಾರಿ ಆರೋಪ

ದೇವರ ಹೆಸರಿನ ಅನುದಾನಕ್ಕೂ ‘ಕನ್ನ’ ಆರೋಪ..!

ಜಿಪಂ ಅನುದಾನದಲ್ಲಿ ಬೋಗಸ್ ದಾಖಲೆ ಸೃಷ್ಟಿಸಿ ಬಿಲ್‌ ಎತ್ತುವಳಿ? | ಅರೆಬರೆ ಕಾಮಗಾರಿ ಆರೋಪ

ಗಂಗಾವತಿ ಕ್ಷೇತ್ರದಲ್ಲಿ ಸಂಚಲನ; ಶಾಸಕ ಜನಾರ್ದನ ರೆಡ್ಡಿ ಬೆಂಬಲಿಗರು, ಪಿಎ ಕರಮತ್ ವಿರುದ್ಧ ಬಸವರಾಜ ಮ್ಯಾಗಳಮನಿ ಗಂಭೀರ ಆರೋಪ

ಗಂಗಾವತಿ: ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸರ್ಕಾರ ನೀಡಿದ ಅನುದಾನವೇ ದುರ್ಬಳಕೆಯಾಗಿದೆ ಎಂಬ ಆರೋಪ ಗಂಗಾವತಿ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ. 2025–26ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಇಲಾಖೆಯ ಅಡಿಯಲ್ಲಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮಂಜೂರಾದ ಅನುದಾನದಲ್ಲಿ ಅರೆಬರೆ ಕಾಮಗಾರಿ ನಡೆಸಿ, ಪೂರ್ಣಗೊಂಡಂತೆ ಬೋಗಸ್ ದಾಖಲೆ ಸೃಷ್ಟಿಸಿ ಬಿಲ್‌ ಎತ್ತುವಳಿ ಮಾಡಲಾಗಿದೆ ಎಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಆರೋಪಿಸಿದ್ದಾರೆ.

ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗಳಲ್ಲಿ ನೆಲದ ಮೇಲಿನ ವಾಸ್ತವ ಸ್ಥಿತಿ ಹಾಗೂ ಕಡತಗಳಲ್ಲಿ ದಾಖಲಾಗಿರುವ ಕಾಮಗಾರಿಯ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಕಾಮಗಾರಿ ಪೂರ್ಣಗೊಳ್ಳದಿದ್ದರೂ ದಾಖಲೆಗಳಲ್ಲಿ ಪೂರ್ಣಗೊಂಡಂತೆ ತೋರಿಸಿ ಹಣ ಬಿಡುಗಡೆ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.

‘ಅರೆಬರೆ ಕೆಲಸ, ಪೂರ್ತಿ ಬಿಲ್‌’

ಕಾಮಗಾರಿ ಪೂರ್ಣಗೊಂಡಿರುವುದಾಗಿ ದಾಖಲೆ ಸಿದ್ಧಪಡಿಸಲು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆಯೇ? ಅಳತೆ ಪುಸ್ತಕದಲ್ಲಿ ನಮೂದಿಸಿರುವ ಪ್ರಮಾಣದಷ್ಟು ಕಾಮಗಾರಿ ನಿಜವಾಗಿಯೂ ನಡೆದಿದೆಯೇ? ಎಂಬುದನ್ನು ಸರ್ಕಾರ ಪರಿಶೀಲಿಸಬೇಕು ಎಂದುಮುಖ್ಯಮಂತ್ರಿಗಳನ್ನು ಮ್ಯಾಗಳಮನಿ ಒತ್ತಾಯಿಸಿದ್ದಾರೆ.

ದಾಖಲೆಗಳಲ್ಲಿ ಕಾಮಗಾರಿ ಪೂರ್ಣ; ಸ್ಥಳದಲ್ಲಿ ಅರೆಬರೆ—ಹಾಗಾದರೆ ಬಿಲ್‌ ಹೇಗೆ ಪಾವತಿಯಾಯಿತು? ಎಂಬ ಪ್ರಶ್ನೆ ಎತ್ತಿರುವ ಅವರು, ಕಾಮಗಾರಿಗಳ ಸಂಪೂರ್ಣ ದಾಖಲೆಗಳನ್ನು ಸಾರ್ವಜನಿಕಗೊಳಿಸುವಂತೆ ಆಗ್ರಹಿಸಿದ್ದಾರೆ.

ಶಾಸಕರ ಬೆಂಬಲಿಗರು, ಪಿಎ ಹೆಸರು ಉಲ್ಲೇಖ

ಈ ಅಕ್ರಮದ ಹಿಂದೆ ಶಾಸಕ ಜನಾರ್ದನ ರೆಡ್ಡಿ ಅವರ ಬೆಂಬಲಿಗರು ಹಾಗೂ ಪಿಎ ಕರಮತ್ ಅವರ ಪ್ರಭಾವವಿದೆ ಎಂದು ಬಸವರಾಜ ಮ್ಯಾಗಳಮನಿ ಆರೋಪಿಸಿದ್ದಾರೆ. ಆರೋಪಗಳಿಗೆ ಸಂಬಂಧಪಟ್ಟವರು ತಮ್ಮ ಸ್ಪಷ್ಟನೆ ನೀಡಬೇಕು. ಆರೋಪ ಸತ್ಯವೇ ಅಥವಾ ಸುಳ್ಳೇ ಎಂಬುದನ್ನು ನಿಷ್ಪಕ್ಷಪಾತ ತನಿಖೆಯಿಂದ ನಿರ್ಧರಿಸಬೇಕು.

ಜಿಲ್ಲಾ ಪಂಚಾಯಿತಿ ಎಇಇ ಪಲ್ಲವಿ ಅವರ ಮೇಲ್ವಿಚಾರಣೆಯಲ್ಲಿನ ಕಾಮಗಾರಿಗಳಲ್ಲೂ ಅರೆಬರೆ ಕೆಲಸ, ಬೋಗಸ್ ದಾಖಲೆ ಹಾಗೂ ಬಿಲ್‌ ಎತ್ತುವಳಿ ನಡೆದಿದೆ ಎಂದು ಮ್ಯಾಗಳಮನಿ ಆರೋಪಿಸಿದ್ದಾರೆ.

ಆರೋಪಗಳು ತನಿಖೆಯಲ್ಲಿ ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಇಲಾಖಾ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು.

‘ದೇವರ ಹಣಕ್ಕೆ ಲೆಕ್ಕ ಬೇಕು’

2025–26ನೇ ಸಾಲಿನಲ್ಲಿ ಜಿಪಂ ಇಲಾಖೆಯ ಅಡಿಯಲ್ಲಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮಂಜೂರಾದ ಪ್ರತಿಯೊಂದು ಕಾಮಗಾರಿಯನ್ನೂ ಮರುಪರಿಶೀಲನೆಗೆ ಒಳಪಡಿಸಬೇಕು. ತಾಂತ್ರಿಕ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಿ, ಎಂ.ಬಿ., ಬಿಲ್‌, ಪೂರ್ಣಗೊಂಡ ಪ್ರಮಾಣಪತ್ರ ಹಾಗೂ ಪಾವತಿ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಮ್ಯಾಗಳಮನಿ ಒತ್ತಾಯಿಸಿದ್ದಾರೆ.

“ಸಾರ್ವಜನಿಕರ ಹಣ ದೇವರ ಹೆಸರಿನಲ್ಲಿ ಬಿಡುಗಡೆಯಾಗಿದೆ. ಆ ಹಣಕ್ಕೆ ಪ್ರತಿಯೊಂದು ರೂಪಾಯಿಗೂ ಲೆಕ್ಕ ಇರಬೇಕು. ಕಾಮಗಾರಿ ನಡೆದಿದ್ದರೆ ಸ್ಥಳದಲ್ಲಿ ಕಾಣಬೇಕು; ಕಡತದಲ್ಲಿ ಮಾತ್ರ ಕಾಣಬಾರದು” ಎಂದು ಬಸವರಾಜ ಮ್ಯಾಗಳಮನಿ ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ರಾಘವೇಂದ್ರ ಕಡೆಬಾಗಿಲು, ರಾಮಣ್ಣ ರುದ್ರಾಕ್ಷಿ, ಬಿ ಕೆ ಗಣೇಶ್, ಮೇಘರಾಜ್, ಪಂಪಾಪತಿ ಕುರಿ, ಹನುಮಂತಪ್ಪ, ಕೃಷ್ಣ ಮೆಟ್ರಿ,ಮತ್ತಿತರರು ಇದ್ದರು.

Related posts

ಶಾಸಕ ಜಿ.ಎಸ್. ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ

satyadarshana

ಕಟಾವು ಮಾಡಿ ಕಣದಲ್ಲಿಟ್ಟು ಬೆಳೆ ಕಳೆದುಕೊಂಡವರಿಗೆ ನಷ್ಟ’ ಕೊಳೆತ ಬೆಳೆಗಳಿಗೆ ಸಿಗಲ್ಲ ಸರ್ಕಾರದ ಪರಿಹಾರ!

satyadarshana

ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ -ಕ್ಷೇತ್ರದಲ್ಲಿ ಸ್ವಚ್ಛತೆ ಮತ್ತು ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳಿ: ಡಾ. ಸುರೇಶ ಇಟ್ನಾಳ

satyadarshana

Leave a Comment