Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಗದಗ – ಉಪತಶೀಲ್ದಾರ್ ಅಣ್ಣಿಗೇರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ.

ಗದಗ: ಗದಗ ಜಿಲ್ಲೆನಲ್ಲೂ ಬೆಳ್ಳಂ ಬೆಳಿಗ್ಗೆ ಎಸಿಬಿ ದಾಳಿ ಮೂಲಕ ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ. ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ತಹಶಿಲ್ದಾರ್ ಆಗಿರುವ ಬಸವಕುಮಾರ್ ಅಣ್ಣಿಗೇರಿ ಎಂಬುವರ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ‌ ಮಾಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಏಕಕಾಲಕ್ಕೆ ನಾಲ್ಕು ಕಡೆಗಳಲ್ಲಿ ದಾಳಿ ಮಾಡಲಾಗಿದೆ.

ಬಿ.ಎಸ್ ಅಣ್ಣಿಗೇರಿಗೆ ಸಂಬಂಧಿಸಿದ ಪಂಚಾಕ್ಷರಿ ನಗರದ ಮನೆ, ಜಿಲ್ಲಾಡಳಿತ ಭವನದಲ್ಲಿರುವ ಕಚೇರಿ, ಹುಯಿಲಗೋಳ ನಾರಾಯಣರಾವ್ ಸರ್ಕಲ್ ನಲ್ಲಿರುವ ಖಾಸಗಿ ಕಚೇರಿ ಹಾಗೂ ಅಳಿಯನ ಮನೆ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಜಿಲ್ಲಾಡಳಿತ ಭವನದಲ್ಲಿ ಉಪ ತಹಶಿಲ್ದಾರ್ ಆಗಿ ಬಿ.ಎಸ್. ಅಣ್ಣಿಗೇರಿ ಕೆಲಸ ಮಾಡ್ತಿದ್ದರು. ಜೊತೆಗೆ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿದ್ದರು.

ಸದ್ಯ ಬಿ.ಎಸ್ ಅಣ್ಣಿಗೇರಿ ಮನೆಯಲ್ಲಿ ಒಂದೂವರೆ ಲಕ್ಷ ರೂಪಾಯಿ ನಗದು, ಬ್ಯಾಂಕ್ ಪಾಸ್ ಬುಕ್, 450 ಗ್ರಾಂ. ಬಂಗಾರ ಹಾಗೂ 5 ಕೆಜಿ ಬೆಳ್ಳಿ, ಅಂದಾಜು 25 ಎಕರೆ ಜಮೀನು, 12 ಸೈಟ್ ಗಳ ದಾಖಲೆಗಳ ಪತ್ತೆಯಾಗಿ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇನ್ನು ಅಧಿಕಾರಗಳು ತಾಯಿ ಮನೆ ಹಾಗೂ ಅಳಿಯನ ರಿಯಲ್ ಎಸ್ಟೇಟ್ ಆಫೀಸ್ ಮೇಲೆ ದಾಳಿ ಮುಂದುವರಿಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಎಸಿಬಿ ದಾಳಿ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಮಾತ್ರ 18 ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆದಿದೆ. 100ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ 300 ಸಿಬ್ಬಂದಿಗಳ ತಂಡ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಜಾಲಾಡ್ತಿದ್ದಾರೆ. ಇಂದು 18 ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಹಿನ್ನೆಲೆ ದಾಳಿ ಮಾಡಲಾಗಿದೆ. 75 ಕಡೆಗಳಲ್ಲಿ ಎಸಿಬಿ ಶೋಧ ಕಾರ್ಯ ಆರಂಭಿಸಿದೆ. ಇನ್ನೂ, ಯಾರ ಯಾರ ಮೇಲೆ ದಾಳಿ ಮಾಡಲಾಗಿದೆ ಎಂಬುದನ್ನು ನೋಡುವುದಾರೇ..

1. ಬಸವ ಕುಮಾರ್ ಎಸ್ ಅಣ್ಣಿಗೇರಿ .ಶಿರಸ್ತೇದಾರ್ ಡಿಸಿ ಕಚೇರಿ ಗದಗ

2.ಗಪಿನಾಥ್ ಸಾ ಎನ್ ಮಾಳಗಿ, ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ, ವಿಜಯಪುರ

3.ಕೃಷ್ಣನ್.ಎಇ.ಎಪಿಎಂಸಿ ಹಾವೇರಿ.

4.ರಮೇಶ್ ಕುಮಾರ್, ಕಣಕಟ್ಟೆ, ಆರ್.ಎಫ್.ಓ.ಸಾಮಾಜಿಕ ಅರಣ್ಯ ಯಾದಗಿರಿ

5. ದಯಾ ಸುಂದರ್ ರಾಜು AEE.KPTCL, ದಕ್ಷಿಣ ಕನ್ನಡ..

6. ಅಶೋಕ್ ರೆಡ್ಡಿ ಪಾಟೀಲ್. ಎಇಇ.ಕೃಷ್ಣ ಭಾಗ್ಯ ಜಲ ನಿಗಮ ಲಿ.ದೇವದುರ್ಗ ರಾಯಚೂರು..

7. ಗವಿರಂಗಪ್ಪ.ಎಇಇ.ಪಿಡಬ್ಲ್ಯೂಡಿ. ಚಿಕ್ಕಮಂಗಳೂರು.

8. ಬಾಲಕೃಷ್ಣ ಹೆಚ್ ಎನ್.ಪೊಲೀಸ್ ಇನ್ಸ್ ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ. ಮೈಸೂರು

9. ಗಿರೀಶ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಸುವಿವಿಭಾಗ…

10.ಚಲುವರಾಜ್, ಅಬಕಾರಿ ನಿರೀಕ್ಷಕರು, ಗುಂಡ್ಲುಪೇಟೆ ತಾಲೂಕು

11. ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ ದಾವಣಗೆರೆ

12. ಶ್ರೀನಿವಾಸ್ ಜನರಲ್ ಮ್ಯಾನೇಜರ್ ಸಮಾಜ ಕಲ್ಯಾಣ ಇಲಾಖೆ.

13. ಮಂಜುನಾಥ್, ಸಹಾಯಕ ಆಯುಕ್ತ ರಾಮನಗರ

14. ಶಿವಾನಂದ್ ಪಿ ಶರಣಪ್ಪ ಖೇಡಗಿ, RFO, ಬಾದಾಮಿ

15.ಬಿ ಕೆ ಶಿವಕುಮಾರ್, ಹೆಚ್ಚುವರಿ ಡಿಟೆಕ್ಟರ್,ಇಂಡಸ್ಟ್ರಿವ್ಸ್ ಮತ್ತು ಕಾಮರ್ಸ್ ಬೆಂಗಳೂರು

16.ಬಸವರಾಜ್ ಶೇಖರ್ ರೆಡ್ಡಿ ಪಾಟೀಲ್, ಕಾರ್ಯನಿರ್ವಾಹಕ ಅಭಿಯಂತರ, ಕೌಜಲಗಿ ವಿಭಾಗ, ಗೋಕಾಕ್

17.ರಾಕೇಶ್ ಕುಮಾರ್ BDA. ಪಟ್ಟಣ ಯೋಜನೆ.

18.ಜ್ಞಾನೇಂದ್ರಕುಮಾರ್, ಹೆಚ್ಚುವರಿ ಆಯುಕ್ತರು, ಸಾರಿಗೆ ಟ್ರಾಡ್ ಸಾರಿಗೆ ಮತ್ತು ಸುರಕ್ಷತೆ ಬೆಂಗಳೂರು

Related posts

ಗದಗದಲ್ಲಿ ಸಾಗರೋಪಾದಿ ಮಾದಿಗ ಮಹಾಸಭಾ ಬೃಹತ್ ಪ್ರತಿಭಟನೆ ಬೃಹತ್ ಮಾನವ ಸರಪಳಿ ರಸ್ತೆ ತಡೆ DC ಕಚೇರಿ ಅಂಗಳದಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದ ಹೋರಾಟಗಾರರು.

satyadarshana

ಉತ್ತರ ಪ್ರದೇಶ: ಸಮವಸ್ತ್ರ ಧರಿಸದ ದಲಿತ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿ, ಶಾಲೆಯಿಂದ ಹೊರದಬ್ಬಿದ ಗ್ರಾಮದ ಮಾಜಿ ಮುಖ್ಯಸ್ಥ

satyadarshana

ಕರ ಪತ್ರ, ಬ್ಯಾನರ್, ಪೋಸ್ಟರ್ ಮುದ್ರಿಸಲು ಆರ್‌ಓ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿಗಳು

satyadarshana

Leave a Comment