ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿ ವಿದ್ಯಾರ್ಥಿ ಚೇತನ ಕಾರ್ಯಕ್ರಮ.
ಗದಗ: ಈಗ ಆಯುಷ್ ಸರ್ಕಾರವು ಸಾರ್ವಜನಿಕರ ಸದುಪಯೋಗಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತದೆ. ಇಲಾಖೆ ಗದಗ ಮೂಲಕ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ “ವಿದ್ಯಾರ್ಥಿ ಚೇತನ” ಎಂಬ ವಿಶೇಷ ಹಾಗೂ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತನ್ನಿಮಿತ್ಯ ಈಗಾಗಲೇ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಮಾರ್ಗೋಪಾಯ ಹೇಳಿದ್ದಾರೆ. ಆರೋಗ್ಯಯುತ ಜೀವನ ಶೈಲಿ ಪಾಠ ಮಾಡಿದ್ದಾರೆ.
ನಿಮ್ಮ ವೈಯಕ್ತಿಕ ಆರೋಗ್ಯ ತೊಂದರೆಗಳಿಗೆ ಸ್ಪಂದಿಸಿ ಔಷಧಿ ನೀಡಿ ಮನೆಮದ್ದು ಕುರಿತು ಮಾಹಿತಿ ನೀಡಿದ್ದಾರೆ. ಪ್ರತಿದಿನ ಯೋಗ ತರಬೇತಿ ನೀಡುತ್ತಿದ್ದಾರೆ. ಹೀಗೆ ನಿಮಗೆ ಅತ್ಯಂತ ಅವಶ್ಯಕವಾದದ್ದನ್ನೆ ಆಯುಷ್ ಇಲಾಖೆ ಮಾಡುತ್ತಿರುವುದು ಅತ್ಯಂತ ಸ್ತುತ್ಯಾರ್ಹ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಡಾ. ನಂದಾ ಹನಬರಟ್ಟಿ ಅವರು ಸಂತಸ ವ್ಯಕ್ತಪಡಿಸಿದರು.
ಅವರು ನಿನ್ನೆ ನಗರದ ಡಾ. ಬಿ.ಆರ್. ಅಂಬೇಡ್ಕರ್, ಸರ್ಕಾರಿ ವೃತ್ತಿಪರ ಬಾಲಕಿಯರ ವಸತಿ ನಿಲಯದಲ್ಲಿನ ಬಾಲಕಿಯರಿಗೆ ಆಯುಷ್ ಇಲಾಖೆಯಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಹಮ್ಮಿಕೊಂಡ “ವಿದ್ಯಾರ್ಥಿ ಚೇತನ” ಎಂಬ ವಿಶೇಷವಾದ ಆಯುಷ್ ಸೇವಾ ಕಾರ್ಯಕ್ರಮದ ಅಂಗವಾಗಿ “ಔಷಧಿ ಕಿಟ್” ವಿತರಿಸಿ ಮಾತನಾಡುತ್ತಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ, ಡಾ. ಅಶೋಕ. ಜಿ. ಮತ್ತಿಗಟ್ಟಿ ರವರು “ವಿದ್ಯಾರ್ಥಿ ಚೇತನ” ಕಾರ್ಯಕ್ರಮದ ಇಲ್ಲಿಯವರೆಗೆ ಮಾಡಲಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ A/2 ಅಳತೆಯ ಎರಡು ಐ.ಇ.ಸಿ ಪ್ರೇಮ್‌ಗಳನ್ನು ವಿದ್ಯಾರ್ಥಿನಿಲಯಕ್ಕೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ನಿರ್ವಹಣಾಧಿಕಾರಿಗಳಲ್ಲಿ ಒಬ್ಬರಾದ ಡಾ. ಸಾಯಿಪ್ರಕಾಶ ಮಡಿವಾಳರ ಅವರು ಔಷಧಿ ಕಿಟ್‌ನಲ್ಲಿರುವ ಔಷಧಿಗಳ ಕುರಿತು ವಿವರಿಸಿದರು.
ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಶ್ರೀಮತಿ॥ ಸುಜಾತಾ ಪಾಟೀಲ ಅವರು ಸ್ವಾಗತಿಸಿದರು. ಶ್ರೀಮತಿ ಗೀತಾ ಅವರು ವಂದಿಸಿದರು. ಕುಮಾರಿ ಗಾಯಿತ್ರಿ ಲಮಾಣಿ ಪ್ರಾರ್ಥಿಸಿ, ಕುಮಾರಿ ಸುಧಾ ನಿರೂಪಿಸಿದರು. 250 ವಿದ್ಯಾರ್ಥಿನಿಯರಿಗೆ ಔಷಧಿ ಕಿಟ್ ವಿತರಿಸಲಾಯಿತು.
