Satya Darshana
ಬಿಸಿ ಬಿಸಿ ಸುದ್ದಿ
ದೇಶ-ವಿದೇಶಬಿಸಿ ಬಿಸಿ ಸುದ್ದಿ

ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಈ ವರ್ಷದ ಏಪ್ರಿಲ್‌ನಿಂದ ಜುಲೈ ನಡುವೆ ನಿವೃತ್ತರಾಗಲಿರುವ 20 ರಾಜ್ಯಗಳ 59 ರಾಜ್ಯಸಭಾ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಆತ್ಮೀಯ ವಿದಾಯ ಕೋರಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

ದ್ವೈವಾರ್ಷಿಕ ವಿದಾಯ ಸಭೆ

ದ್ವೈವಾರ್ಷಿಕ ವಿದಾಯ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ‘ಇಂತಹ ಕ್ಷಣಗಳು ಪಕ್ಷಭೇದಗಳನ್ನು ಕರಗಿಸಿಬಿಡುತ್ತವೆ. ಸಂಸತ್ತು ಮುಕ್ತ ವಿಶ್ವವಿದ್ಯಾಲಯ ಇದ್ದಂತೆ. ರಾಜಕಾರಣದಲ್ಲಿ ಪೂರ್ಣವಿರಾಮ ಎಂಬುದೇ ಇಲ್ಲ. ನಿಮ್ಮ ಕೊಡುಗೆಗಳು ರಾಷ್ಟ್ರೀಯ ಜೀವನದ ಶಾಶ್ವತ ಭಾಗವಾಗಿ ಉಳಿಯುತ್ತವೆ’ ಎಂದು ಹಿರಿಯ ನಾಯಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ವೇಳೆ, ದೇವೇಗೌಡರು, ಖರ್ಗೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ರನ್ನು ‘ದಿಗ್ಗಜರು’ ಎಂದು ಬಣ್ಣಿಸಿದ ಮೋದಿ, ‘ಇವರೆಲ್ಲಾ ತಮ್ಮ ಅರ್ಧ ಜೀವನವನ್ನು ಸಂಸತ್ತಿನ ಕಲಾಪಗಳಲ್ಲೇ ಕಳೆದಿದ್ದಾರೆ. ಅವರು ಇಂದಿಗೂ ಹುರುಪಿನೊಂದಿಗೆ ಕಲಾಪಗಳಲ್ಲಿ ಭಾಗಿ ಆಗುವುದು ಅನುಕರಣೀಯ. ಇದು ಸಣ್ಣ ಸಾಧನೆಯೂ ಅಲ್ಲ’ ಎಂದು ಹೊಗಳಿಗೆಯ ಮಾತುಗಳನ್ನಾಡಿದರು. ದೇವೇಗೌಡರನ್ನು ‘ಸದನಕ್ಕೆ ಮಹತ್ತರ ಸ್ಥಾನಮಾನ ತಂದುಕೊಟ್ಟ ಗೌರವಾನ್ವಿತರು’ ಎಂದರೆ, ‘ಖರ್ಗೆಯವರು ಉಭಯ ಸದನಗಳ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಧ್ವನಿ’ ಎಂದು ಮೋದಿ ಹೇಳಿದರು

Related posts

ಅಂತರ್ ವಿಭಾಗೀಯ ವ್ಹಾಲಿಬಾಲ್ ಪಂದ್ಯಾವಳಿ

satyadarshana

ಪೈಗಂಬರ್ ಆದರ್ಶ ಅನುಕರಣೀಯ:ಮಕ್ತುಮ್ ಸಾಬ್ ವಾಯ್ ಮುಧೋಳ ಈದ್ ಮುಬಾರಕ್

satyadarshana

ಸತ್ಯದರ್ಶನ ಕನ್ನಡ ದಿನಪತ್ರಿಕೆ.07.04.2023

satyadarshana

Leave a Comment