ಗದಗ : ಸೆಪ್ಟೆಂಬರ್ 22: 2024-25 ನೇ ಸಾಲಿನಲ್ಲಿ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟಗಳು ಗದಗ ಜಿಲ್ಲೆಯಲ್ಲಿ ಸೆಪ್ಟೆಂಬರ್ 28 ರಂದು ಬೆಳಿಗ್ಗೆ 09-00 ಗಂಟೆಗೆ ಮಹಾತ್ಮಾಗಾಂಧಿ ಹಾಕಿ ಕ್ರೀಡಾಂಗಣದಲ್ಲಿ ಹಾಕಿ ಪಂದ್ಯಾವಳಿ, ಕಳಸಾಪೂರ ರಸ್ತೆಯ ಒಳಾಂಗಣ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯಾವಳಿ ಹಾಗೂ ಕೆಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಪುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಬೆಳಗಾವಿ ವಿಭಾಗದಲ್ಲಿ ಬರುವ 07 ಜಿಲ್ಲೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಪುರುಷ ಮತ್ತು ಮಹಿಳಾ (ಪುಟ್ಬಾಲ್ ಹೊರತು ಪಡಿಸಿ) ಮಹಿಳಾ ಕ್ರೀಡಾಪಟುಗಳು ಸರಿಯಾದ ಸಮಯಕ್ಕೆ ಹಾಜರಾಗಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ: ಶರಣು ಗೋಗೇರಿ ರವರು ತಿಳಿಸಿರುತ್ತಾರೆ.
ಧಾರವಾಡ ಜಿಲ್ಲೆಯಲ್ಲಿ ಅಥ್ಲೇಟಿಕ್ಸ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನೀಸ್, ಟೆನ್ನೀಸ್, ಜಿಮ್ನಾಸ್ಟಿಕ್ಸ್, ಟೆಕ್ವಾಂಡೋ, ಕ್ರೀಡೆಗಳು ,ಬೆಳಗಾವಿ ಜಿಲ್ಲೆಯಲ್ಲಿ ವ್ಹಾಲಿಬಾಲ್, ಬಾಸ್ಕೇಟ್ ಬಾಲ್, ಕುಸ್ತಿ, ಜೂಡೋ, ಈಜು, ಬಾಕ್ಸಿಂಗ್, ಭಾರ ಎತ್ತುವ ಕ್ರೀಡೆಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿ ಖೋಖೋ, ಥ್ರೋಬಾಲ್, ಕ್ರೀಡೆಗಳು, ಹಾವೇರಿ ಜಿಲ್ಲೆಯಲ್ಲಿ ಹ್ಯಾಂಡಬಾಲ್ ಮತ್ತು ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗಳು, ಬಾಗಲಕೋಟೆ ಜಿಲ್ಲೆಯಲ್ಲಿ ವುಶೂ, ನೆಟ್ಬಾಲ್, ಮತ್ತು ಯೋಗ ಸ್ಪರ್ದೇಗಳು ಜರುಗಲಿದ್ದು, ಗದಗ ಜಿಲ್ಲೆಯ ಅಥ್ಲೇಟಿಕ್ಸ÷್ನಲ್ಲಿ ಪ್ರಥಮ ಮತ್ತು ದ್ವೀತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಆಟಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಆಯಾ ಜಿಲ್ಲೆಯವರು ನಿಗಧಿಪಡಿಸಿದ ದಿನಾಂಕ, ಸ್ಥಳ ಹಾಗೂ ಸಮಯಕ್ಕೆ ಹಾಜರಾಗಿ ಪಾಲ್ಗೊಳ್ಳಲು ತಿಳಿಸಲಾಗಿದೆ.
ಅರ್ಚರಿ ಮತ್ತು ಫೆನ್ಸಿಂಗ್ ಕ್ರೀಡೆಗಳ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಗೆ ಸಂಬAಧಿಸಿದAತೆ ಎಲ್ಲಾ 05 ವಿಭಾಗಗಳ ಆಯ್ಕೆಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರ, ನಗರ ಜಿಲ್ಲೆ, ಇವರು ಬೆಂಗಳೂರು ನಗರದಲ್ಲಿ ಆಯೋಜಿಸುತ್ತಾರೆ. ಸಂಬAಧಿಸಿದವರು ಸಂಪರ್ಕಿಸಿ ಭಾಗವಹಿಸುವುದು.
ಸೈಕ್ಲಿಂಗ್ ಕ್ರೀಡೆಗೆ ಸಂಬAಧಿಸಿದAತೆ ಪ್ರತಿ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ನೇರವಾಗಿ ಗರಿಷ್ಠ 10 ಕ್ರೀಡಾಪಟುಗಳನ್ನು (ಪುರುಷರು ಮತ್ತು ಮಹಿಳೆಯರು ಸೇರಿ) ತರಬೇತುದಾರರು ಮತ್ತು ವ್ಯವಸ್ಥಾಪಕರೊಂದಿಗೆ ನಿಯೋಜಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ ದೂರವಾಣಿ ಸಂಖ್ಯೆ 08372-238345ಗೆ ಹಾಗೂ ಸುರೇಶ ವ್ಹಿ. ಸಂಗಮದ ದೂರವಾಣಿ ಸಂಖ್ಯೆ :9060703554 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
