Satya Darshana
ಬಿಸಿ ಬಿಸಿ ಸುದ್ದಿ
Otherಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಸ್ಪಂದನಾ ಅಂತಿಮ ದರ್ಶನ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಗಣ್ಯರು.

ಬೆಂಗಳೂರು , ಆ.9- ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯಕ್ರಿಯೆ ಇಂದು ನಗರದ ಹರಿಶ್ಚಂದ್ರಘಾಟ್‍ನಲ್ಲಿ ನಡೆಯಲಿದೆ. ಕಳೆದ ಮೂರು ದಿನಗಳ ಹಿಂದೆ ಥೈಲಾಂಡ್ ಪ್ರವಾಸದ ವೇಳೆ ಹೃದಯಾಘಾತಕ್ಕೊಳಗಾಗಿ ಸ್ಪಂದನಾ ಅವರು ಮೃತಪಟ್ಟಿದ್ದರು. ಇಂದು ಮುಂಜಾನೆ 1.30ರ ವೇಳೆಗೆ ಪಾರ್ಥೀವ ಶರೀರವನ್ನು ನಗರಕ್ಕೆ ತರಲಾಯಿತು.

ಪತಿ ವಿಜಯರಾಘವೇಂದ್ರ ಅವರು ಪೂಜೆ ಹಾಗೂ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ವೇಳೆ ದುಃಖದ ಕಟ್ಟೆಯೊಡೆದು ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಪಂದನಾ ಅವರ ತಂದೆ ಬಿ.ಕೆ.ಶಿವರಾಂ ಅವರ ಮನೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಕುಟುಂಬದ ಸದಸ್ಯರೂ ಆಗಿರುವ ಹಿರಿಯ ನಟ ಶಿವರಾಜ್ ಕುಮಾರ್ ಅವರು ಮುಂಜಾನೆ ಸ್ಪಂದನಾ ಅವರ ಪಾರ್ಥೀವ ಶರೀರವನ್ನು ಬರಮಾಡಿಕೊಂಡು ಅಂತಿಮ ದರ್ಶನದ ವ್ಯವಸ್ಥೆಗಳ ನಿಗಾವಹಿಸಿದ್ದರು. ಇಂದು ಬೆಳಿಗ್ಗೆ ರಾಘವೇಂದ್ರ ರಾಜ್‍ಕುಮಾರ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಸೇರಿದಂತೆ ಕುಟುಂಬದ ಆತ್ಮ ಬಳಗ ಅಂತಿಮ ದರ್ಶನ ಪಡೆದು ವಿಜಯರಾಘವೇಂದ್ರ ಮತ್ತು ಅವರ ಪುತ್ರ ಶೌರ್ಯ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಚಿತ್ರರಂಗದ ಶ್ರೀನಾಥ್, ಸುಧಾರಾಣಿ, ಗಿರಿಜಾ ಲೋಕೇಶ್, ಸೃಜನ್ ಲೋಕೇಶ್, ವಿನೋದ್ ರಾಜ್‍ಕುಮಾರ್ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು.

ಸ್ಪಂದನಾ ಅವರ ದೊಡ್ಡಪ್ಪ ಬಿ.ಕೆ.ಹರಿಪ್ರಸಾದ್ ಅಂತಿಮ ವಿವಿಧಾನಗಳ ಬಗ್ಗೆ ಮಾಹಿತಿ ನೀಡಿದ್ದು, ಮಧ್ಯಾಹ್ನ 2 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಿ ನಂತರ ಮಲ್ಲೇಶ್ವರಂ ಸಮೀಪವಿರುವ ಹರಿಶ್ಚಂದ್ರಘಾಟ್‍ನಲ್ಲಿ ಅಂತ್ಯ ಸಂಸ್ಕಾರ ನಡೆಸುವುದಾಗಿ ತಿಳಿಸಿದ್ದಾರೆ

Related posts

ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ.

satyadarshana

ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿ ನಿಧನ

satyadarshana

ಆಣೆ ಪ್ರಮಾಣ ಮಾಡಿದ ಬಿಜೆಪಿ ಮುಖಂಡರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಕೇಸ್..!

satyadarshana

Leave a Comment