Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿ

ಕಕಿ೯ಹಳ್ಳಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪಾಲಕರ ಸಭೆ ಶೈಕ್ಷಣಿಕ ಬೆಳವಣಿಗಗೆ ಪಾಲಕರ ಪಾತ್ರ ಬಹುಮುಖ್ಯ

 

ಕೊಪ್ಪಳ:

ವಸತಿ ಶಾಲೆಗಳ ಅಭಿವೃದ್ಧಿಗೆ ಹಾಗೂ ಶೈಕ್ಷಣಿಕ ಬೆಳವಣಿಗಗೆ ಪಾಲಕರ ಪಾತ್ರ ಬಹುಮುಖ್ಯಎಂದು ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ‌ ಕುಸುಮ ಕುಮಾರಿ‌ಯವರು ಹೇಳಿದರು.

ಇತ್ತೀಚಿಗೆ ತಾಲೂಕಿನ ಕರ್ಕಿಹಳ್ಳಿಯ ಶ್ರೀಮತಿ‌ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನಡೆದ 2024-25ನೇ ವರ್ಷದ ಪಾಲಕರ-ಶಿಕ್ಷಕರ ಸಭೆ ಜರುಗಿತು.

ಸಭೆಯನ್ನೆದ್ದೇಶಿಸಿ ಅವರು ಮಾತನಾಡಿ ವಸತಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಮಕ್ಕಳ ಉತ್ತಮ‌ ಭವಿಷ್ಯದ ನಿರ್ಮಾಣದಲ್ಲಿ ಪಾಲಕರ ಹಾಗೂ ಶಿಕ್ಷಕರ ಪಾತ್ರ ಅತಿಮುಖ್ಯವಾದುದು, ಮಕ್ಕಳು ದೈಹಿಕವಾಗಿ, ಮಾನಸಿಕ, ಶೈಕ್ಷಣಿಕವಾಗಿ ಸದೃಢರಾಗಲು ಶಿಕ್ಷಕರ ಪ್ರಯತ್ನದ ಜೊತೆ ಪಾಲಕರ ಸಹಕಾರವೂ ಅವಶ್ಯಕವಾಗಿರುತ್ತದೆ. ಮಗುವಿನ ಭವಿಷ್ಯದ ಬುತ್ತಿಗೆ ನಾವೆಲ್ಲರೂ ಒಮ್ಮತದಿಂದ ಪ್ರಯತ್ನಿಸಿದ್ದೆ ಆದರೆ ಉತ್ತಮವಾದ ಫಲಿತಾಂಶವನ್ನು ನೀರಿಕ್ಷಿಸಬಹುದು.

ವಸತಿ ಶಾಲೆಯ 3 ವರ್ಷಗಳ ಎಸ್.ಎಸ್.ಎಲ್.ಸಿ‌ ಫಲಿತಾಂಶವು ಉತ್ತಮವಾಗಿ ಬಂದಿದ್ದು ಈ ಶೈಕ್ಷಣಿಕ ವರ್ಷವೂ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರೊಂದಿಗೆ ಪಾಲಕರ ಸಹಕಾರವೂ ಅಷ್ಟೇ ಮುಖ್ಯವಾಗಿರುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಹಿಂದಿನ ಶೈಕ್ಷಣಿಕ ವರ್ಷ

ಉತ್ತಮ ಫಲಿತಾಂಶ ಪಡೆದ ಮಕ್ಕಳ‌ ಪಾಲಕರಿಗೆ ಹೂಗುಚ್ಛ ನೀಡಿ ಅಭಿನಂದಿಸಲಾಯಿತು.

ಇದೇ ಸಭೆಯಲ್ಲಿ 2024-25ನೇ ಸಾಲಿಗೆ ಅನ್ವಯವಾಗುವಂತೆ ವಿದ್ಯಾರ್ಥಿ ಪಾಲಕ ಪ್ರತಿನಿಧಿಗಳಾಗಿ 9ನೇ ತರಗತಿ ವಿದ್ಯಾರ್ಥಿಯ ಅಪ್ಪಾಜಿ ತಂದೆಯಾದ ತಿಪ್ಪಣ್ಣ ಅಡವಳ್ಳಿ ಹಾಗೂ ವಿದ್ಯಾರ್ಥಿನಿ ಪ್ರತಿನಿಧಿಯಾಗಿ 6ನೇ ತರಗತಿಯ ಅಮೃತ ತಾಯಿಯಾದ ಶ್ರೀಮತಿ ಸುಧಾ ರವರನ್ನು ಸಭೆಯಲ್ಲಿದ್ದ ಎಲ್ಲಾ ಪಾಲಕರು ಒಮ್ಮತದಿಂದ ಆಯ್ಕೆ ಮಾಡಿದರು.

ಈ ಸಂದರ್ಭದಲ್ಲಿ ನೂರಾರು ಪಾಲಕರು, ವಸತಿ ಶಾಲೆಯ ಬೋಧಕ ,ಬೋಧಕೇತರ ಸಿಬ್ಬಂದಿಗಳು, ಮಕ್ಕಳು ಹಾಜರಿದ್ದರು.

ಕನ್ನಡ ಭಾಷಾ ಶಿಕ್ಷಕರಾದ ಸಿದ್ದಪ್ಪ ಬಾಸಿಂಗದಾರ ರವರು ಪ್ರಾಸ್ತಾವಿಕ ನುಡಿದರು, ವಿಜ್ಞಾನ ಶಿಕ್ಷಕಿ ಸ್ವೇತಾ ರವರು ಸ್ವಾಗತಿಸಿದರು ಹಿಂದಿ ಭಾಷಾ ಶಿಕ್ಷಕರಾದ ಸತ್ಯಪ್ಪ ಕಂಬಳಿರವರು ನಿರೂಪಿಸಿದರು.

Related posts

ನರೇಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಲೋಕಾಯುಕ್ತ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಜನಸಂಪರ್ಕ ಸಭೆ

satyadarshana

ಸಚಿವ ಎಚ್.ಕೆ. ಪಾಟೀಲ ಹಾಗೂ ಶಾಸಕ ಜಿ.ಎಸ್. ಪಾಟೀಲ ಅವರಿಂದ ಬಾಗಿನ ಅರ್ಪಣೆ

satyadarshana

ಅತೀವೃಷ್ಠಿಯಿಂದ ಗದಗ ಜಿಲ್ಲೆಯಲ್ಲಿ ಅಂದಾಜು 811.26 ಕೋಟಿ ಹಾನಿ.

satyadarshana

Leave a Comment