Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಗೋಲ್ 2.0 ಕಾರ್ಯಕ್ರಮ :ಪರಿಶಿಷ್ಟ ಪಂಗಡದ ಯುವಕ/ಯುವತಿಯರಿಗೆ ನೋಂದಣಿಗೆ ಅವಕಾಶ

ಗದಗ ( ಸತ್ಯದರ್ಶನ ) ಸೆಪ್ಟೆಂಬರ್ 26: ಕರ್ನಾಟಕ ರಾಜ್ಯದಲ್ಲಿ ಗೋಲ್ 2.0 ಕಾರ್ಯಕ್ರಮದಡಿ ಉದ್ಯಮ ಶೀಲತೆಯನ್ನು ಉತ್ತೇಜಿಸುವ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಅವಕಾಶಗಳನ್ನು ತೆರೆಯುವ ಮೂಲಕ ಬುಡಕಟ್ಟು ಯುವಕ/ಯುವತಿ ಹಾಗೂ ಮಹಿಳೆಯರನ್ನು ಡಿಜಿಟಲ್ ಆಗಿ ಸಕ್ರಿಯಗೊಳಿಸುವ ಹಾಗೂ ಫೇಸ್ ಬುಕ್ ಲೈವ್ ಸೆಷನ್‍ಗಳು ಮತ್ತು ಮೆಟಾ ಬಿಸಿನೆಸ್ ಕೋಚ್, ವಾಟ್ಸ್‍ಪ್ ಪ್ಲಾಟ್‍ಫಾರ್ಮ್‍ನಲ್ಲಿ ಸ್ವಯಂಚಾಲಿತ ಶೈಕ್ಷಣಿಕ ಚಾಟ್‍ಬೋಟ್ ಮೂಲಕ ಮೆಟಾದ ಉಪಕರಣಗಳು ಮತ್ತು ಸಂಪನ್ಮೂಲಗಳ ಮಾಸ್ಟರ್ ಕ್ಲಾಸ್‍ಗಳನ್ನು ಬಳಸಿಕೊಂಡು ಬುಡಕಟ್ಟು ಸಮುದಾಯದ 10 ಲಕ್ಷ ಯುವಕರು ಮತ್ತು ಮಹಿಳೆಯರಿಗೆ ಡಿಜಿಟಲ್ ಆಗಿ ಸಕ್ರಿಯಗೊಳಿಸುವ ಗುರಿ ಹೊಂದಿದೆ.

          ಡಿಜಿಟಲ್ ಕೌಶಲ್ಯಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ 52 ಸಾಪ್ತಾಹಿಕ ಮಾಸ್ಟರ್ ಕ್ಲಾಸ್‍ಗಳ ಭೋದನೆಯನ್ನು ಪೇಸ್ ಬುಕ್ ಲೈವ್ ಮೂಲಕ 12 ಪ್ರಾದೇಶಿಕ ಭಾಷೆಗಳಲ್ಲಿ ಅಭಿವೃದ್ದಿಪಡಿಸಿ ಸ್ವಯಂ ಕಲಿಕೆಯ ಸಾಧನವನ್ನು ಅಭಿವೃದ್ದಿ ಪಡಿಸಿ ಬುಡಕಟ್ಟು ಮತ್ತು ಸ್ಥಳೀಯ ಸಮುದಾಯಗಳ ಯುವಕ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದ್ದು, ಸದರಿ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡದ ಯುವಕ/ಯುವತಿ ಹಾಗೂ ಮಹಿಳೆಯರು https://goal.tribal.gov.in ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಗದಗ,ಮುಂಡರಗಿ,ಶಿರಹಟ್ಟಿ,ರೋಣ,ನರಗುಂದ ರವರನ್ನು ಸಂಪರ್ಕಿಸಬಹುದಾಗಿದೆ.

Related posts

ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಗವಿಸಿದ್ದಪ್ಪ ಹೊಸಮನಿ ಪದೋನ್ನತಿ

satyadarshana

ಕಲ್ಯಾಣ ಕರ್ನಾಟಕದ ಯುವಜನತೆಯ ಪಾಲಿನ ಜ್ಞಾನ ದೇಗುಲ “ಪ್ರಬುದ್ಧ ಅಕಾಡೆಮಿ”

satyadarshana

ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 8 ಕೊನೆಯ ದಿನ : ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್

satyadarshana

Leave a Comment