Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ನರೇಗಾ ಉದ್ಯೋಗ ವಾಹಿನಿ ರಥ ಯಾತ್ರೆಗೆ ಚಾಲನೆ.

 ಗದಗ : ಗಜೇಂದ್ರಗಡ  ಪ್ರತಿ ಕುಟುಂಬಕ್ಕೆ ಕಡ್ಡಾಯವಾಗಿ ಉದ್ಯೋಗ ನೀಡುವ ಉದ್ದೇಶದಿಂದ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಈ ಬಗ್ಗೆ ಜನರಿಗೆ ಸರಿಯಾಗಿ ಅರಿವು ಮೂಡಿಸಲು ರಥಯಾತ್ರೆ ಕೈಗೊಳ್ಳಲಾಗಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

ಇಂತಹ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ೧೦೦ ದಿನಗಳ ಕಾಲ ನಿರಂತರ ಕೆಲಸ ನೀಡಿ ಬಡತನ ರೇಖೆಗಿಂದ ಕೆಳಗಿರುವ ಕುಟುಂಬಗಳ ಆರ್ಥಿಕ ಉತ್ತೇಜನಕ್ಕೆ ಸಹಕಾರ ನೀಡಬೇಕೆಂದರು.

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಮತ್ತು ವೈಯಕ್ತಿಕ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಿ ಮಾನವ ದಿನಗಳ ಸೃಜನೆ ಮಾಡಬೇಕೆಂದರು.

ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಉದ್ಯೋಗ ಖಾತ್ರಿ ರಥ, ಜಾಬ್‌ಕಾರ್ಡ್‌ ಅಭಿಯಾನ ಚಾಲನೆ ಹಾಗೂ ದುಡಿಯೋಣ ಭಾ ಅಭಿಯಾನದ ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಕೂಲಿಕಾರ್ಮಿಕರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಗಟ್ಟಲು ನರೇಗಾ ಯೋಜನೆಯಡಿ ಉದ್ಯೋಗ ನೀಡಲು ಸೂಚಿಸಲಾಗಿದೆ. ಇದಕ್ಕಾಗಿ ವಾಹನಗಳ ಮೂಲಕ ಯೋಜನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸ್ತ್ರೀ, ಪುರುಷ ಎನ್ನುವ ಭೇದವಿಲ್ಲದೆ ಕೂಲಿ ಕೊಡಲಾಗುತ್ತಿದೆ. ಜಾಬ್‌ ಕಾರ್ಡ್‌ ಇರುವ ಕೂಲಿಕಾರರು, ಗ್ರಾಪಂಗೆ ಅರ್ಜಿ ಸಲ್ಲಿಸಿ ಕೆಲಸ ಪಡೆದುಕೊಳ್ಳಬಹುದು ಎಂದರು.

ತಾಪಂ ಇಒ ಸಂತೋಷ ಪಾಟೀಲ ಮಾತನಾಡಿ, ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನದ ಮೂಲಕ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗುತ್ತಿದೆ. ಇನ್ನೂ ಜಾಬ್‌ ಕಾರ್ಡ್‌ ಪಡೆಯದೇ ಯೋಜನೆ ಸೌಲಭ್ಯ ಪಡೆಯದೆ ಇರುವ ಕುಟುಂಬಗಳನ್ನು ಸಮೀಕ್ಷೆ ಮಾಡಿ ಅರ್ಹರಿಗೆ ಕಾರ್ಡ್‌ ವಿತರಿಸಲಾಗುತ್ತಿದೆ. ಸ್ವ-ಸಹಾಯ ಗುಂಪುಗಳ ಮಹಿಳೆಯರಲ್ಲಿ ಯೋಜನೆ ಕುರಿತು ಅರಿವು ಮೂಡಿಸಿ, ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷ ರಾಜಣ್ಣ ಹೂಲಿ, ಶಿವಬಸವ ಬೆಲ್ಲದ, ಮುತ್ತಣ್ಣ ಕಡಗದ, ಅಶೋಕ ವನ್ನಾಲ, ಶಿವಾನಂದ ಮಠದ, ಮಂಜುನಾಥ ಮೇಟಿ, ಐಇಸಿ ಸಂಯೋಜಕ ಮಂಜುನಾಥ ಹಳ್ಳದ ಸೇರಿದಂತೆ ಇನ್ನಿತರರು ಇದ್ದರು.

Related posts

ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023 ಸಲಹೆ ದೂರುಗಳಿಗಾಗಿ ಸಹಾಯವಾಣಿ

satyadarshana

ಸ್ಮಾರಕ ಭವನ ಉದ್ಘಾಟಿಸಿದ ಸಿ.ಎಂ ಸಿದ್ದರಾಮಯ್ಯ

satyadarshana

60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಿದ್ದ ಸವಂಚಕರ ಬಂಧಿಸಿದ ಸಿಇಎನ್‌ ಪೊಲೀಸರು..

satyadarshana

Leave a Comment