Satya Darshana
ಬಿಸಿ ಬಿಸಿ ಸುದ್ದಿ
ರಾಜ್ಯಸಿನಿಮಾ

ತುಂಬಾ ನಿರೀಕ್ಷೆಯಿಂದ ಕಾಯ್ತಿರೋ ಜೇಮ್ಸ್ ವರ್ಲ್ಡ್​ವೈಡ್​ ದಾಖಲೆಯ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ-ವಿದೇಶಗಳಲ್ಲಿ ಜೇಮ್ಸ್ ಅಬ್ಬರಿಸುತ್ತಿದ್ದಾನೆ.

ಕನ್ನಡದ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿರುವ ಕೊನೆಯ ಕಮರ್ಷಿಯಲ್ ಚಿತ್ರ ಜೇಮ್ಸ್ ಜಗತ್ತಿನಾದ್ಯಂತ ಬಹಳ ಅದ್ಧೂರಿಯಾಗಿ ತೆರೆಗೆ ಬಂದಿದೆ. ರಾಜ್ಯದ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹಾಗೂ ವಿಶ್ವದಾದ್ಯಂತ 4 ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಜೇಮ್ಸ್ ರಿಲೀಸ್ ಆಗಿದೆ .

ಬೆಳ್ಳಂಬೆಳಿಗ್ಗೆಥಿಯೇಟರ್​ಗೆಜೇಮ್ಸ್ಎಂಟ್ರಿ

ಅಭಿಮಾನಿಗಳಿಗೆ ‘ದೊಡ್ಮನೆ’ ಕುಟುಂಬ ಸಾಥ್

ರಾಜ್ಯದ ಹಲವು ಕಡೆ ಬೆಳ್ ಬೆಳಿಗ್ಗೆ ಜೇಮ್ಸ್ ಫ್ಯಾನ್ ಶೋ ಅಯೋಜನೆ ಮಾಡಲಾಗಿತ್ತು. ಬೆಂಗಳೂರಿನ ವೀರಭದ್ರೇಶ್ವರ, ವೀರೇಶ್, ಪ್ರಸನ್ನ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಮುಂಜಾನೆ 4, 5 ಹಾಗೂ 6 ಗಂಟೆಗೆ ಮೊದಲ ಶೋ ಆರಂಭವಾಗಿತ್ತು. ಇನ್ನು ರಾಘವೇಂದ್ರ ರಾಜ್​​ಕುಮಾರ್, ಪತ್ನಿ, ನಟ ಶ್ರೀಮುರಳಿ, ಪುನೀತ್ ಪುತ್ರಿ, ವಿನಯ್ ರಾಜ್​​ಕುಮಾರ್ ಹಾಗೂ ದೊಡ್ಮನೆ ಕುಟುಂಬಸ್ಥರು ಅವರು ಮಗಡಿ ರೋಡ್​​ನಲ್ಲಿರೋ ವಿರೇಶ್ ಥಿಯೇಟರ್ ಹಾಗೂ , ಜೇಮ್ಸ್ ಹೀರೋಯಿನ್ ಪ್ರಿಯಾ ಆನಂದ್ ಅವರು ನವರಂಗ್ ಥಿಯೇಟರ್​​ನಲ್ಲಿ ಅಭಿಮಾನಿಗಳ ಜೊತೆ ಬೆಳಗ್ಗೆ ಸಿನಿಮಾ ಕಣ್ತುಂಬಿಕೊಂಡಿದ್ದಾರೆ.

ಆಂಧ್ರ-ತೆಲಂಗಾಣದ300ಸ್ಕ್ರೀನ್​ನಲ್ಲಿಜೇಮ್ಸ್ಆಗಮನ

ವರ್ಲ್ಡ್​ವೈಡ್ 50 ದೇಶಗಳಲ್ಲಿ ‘ಪವರ್ ಸ್ಟಾರ್’ ಚಿತ್ರ ರಿಲೀಸ್

ಕನ್ನಡ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಜೇಮ್ಸ್ ಬಿಡುಗಡೆಯಾಗಿದೆ. ಆಂಧ್ರ-ತೆಲಂಗಾಣದಲ್ಲಿ ಆಲ್​ಮೋಸ್ಟ್ 300ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಜೇಮ್ಸ್ ಪ್ರದರ್ಶನ ಕಾಣುತ್ತಿದೆ. ತೆಲುಗು ರಾಜ್ಯಗಳಲ್ಲಿ ಇದು ದಾಖಲೆ. ಇನ್ನು ವಿಶ್ವದ 50ಕ್ಕೂ ಹೆಚ್ಚು ದೇಶಗಳಲ್ಲಿ ಜೇಮ್ಸ್ ರಿಲೀಸ್ ಆಗ್ತಿದೆ. ಯುಎಸ್, ಕೆನಡಾದಲ್ಲಿ ದಾಖಲೆಯ ಚಿತ್ರಮಂದಿರಗಳಲ್ಲಿ ಅಪ್ಪು ಸಿನಿಮಾ ಬರ್ತಿದೆ. ರಷ್ಯಾ ಮತ್ತು ಉಕ್ರೇನ್​ ಬಿಟ್ಟು ಜಪಾನ್, ನೈಜಿರಿಯಾ, ಕೀನ್ಯಾ, ಜಪಾನ್, ಸೌತ್ ಆಫ್ರಿಕಾ, ಜರ್ಮನಿ, ಫ್ರಾನ್ಸ್, ಐರ್ಲೆಂಡ್, ಪೋಲೆಂಡ್, ಸ್ಪೇನ್, ಉಗಾಂಡ ಸೇರಿದಂತೆ ವರ್ಲ್ಡ್​ವೈಡ್ ಪುನೀತ್ ಸಿನಿಮಾ ಪ್ರದರ್ಶನ ಕಾಣ್ತಿದೆ. ಕೇವಲ 20 ರಿಂದ 30 ಜನ ಕನ್ನಡಿಗರು ಇರೋ ಕಡೆಯೂ ಜೇಮ್ಸ್ ಪ್ರೈವೇಟ್ ಶೋ ಮಾಡಲಾಗ್ತಿದೆ.

ಚೇತನ್ ಕುಮಾರ್ ಡೈರೆಕ್ಟ್ ಮಾಡಿದ್ದು, ಪುನೀತ್ ಅವರ ಅಭಿಮಾನಿ ಕಿಶೋರ್ ಪತ್ತಿಕೊಂಡು ಈ ಚಿತ್ರ ಪ್ರೊಡ್ಯೂಸ್ ಮಾಡಿದ್ದಾರೆ. ಪ್ರಿಯಾ ಆನಂದ್ ಸೆಕೆಂಡ್ ಟೈಂ ಪುನೀತ್​ ಜೊತೆ ನಾಯಕಿ ಆಗಿ ಕಾಣಿಸಿಕೊಂಡಿದ್ದು, ಬಹುಭಾಷಾ ನಟರಾದ ಶ್ರೀಕಾಂತ್, ಶರತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Related posts

ಎಲ್ಲಾ ಹಳ್ಳಗಳಿಗೆ ಸಮರ್ಪಕ ಬಸ್ ಬಿಡಲು ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರ್ ಹೋರಾಟ

satyadarshana

ರೈತ ಬಾಂಧವರೇ ಫ್ರೂಟ್ಸ ನೋಂದಣಿ ಶೀಘ್ರವೇ ಮಾಡಿಸಿ

satyadarshana

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ, ಭಾರತದ ಸಂವಿಧಾನ: ಡಾ.ಎಚ್.ಕೆ.ಪಾಟೀಲ

satyadarshana

Leave a Comment