ಗದಗ :ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಗದಗ ಜಿಲ್ಲೆಯ KRIDL ಎಇಇ ಫರ್ವೇಜ್, ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಓಡಾಡಿದ ದೃಶ್ಯವನ್ನು ಏಷ್ಯಾನೆಟ್ ಸುವರ್ಣನ್ಯೂಸ್ಗೆ ಲಭ್ಯವಾಗಿದೆ. ಭೋಪಾಲ್ ನಿಲ್ದಾಣದಿಂದ ಫರ್ವೇಜ್ ಹೋಗಿದ್ದೆಲ್ಲಿಗೆ ಎಂಬುದರ ಬಗ್ಗೆ ಪೊಲೀಸರು ಪತ್ತೆ ಮಾಡುತ್ತಿದ್ದಾರೆ.
ರೈಲು ನಿಲ್ದಾಣದಲ್ಲಿ ಫರ್ವೇಜ್ ಚಲನವಲನ ಹೇಗಿತ್ತು? ಅಲ್ಲಿಂದ ಯಾವ ರೈಲು ಏರಿದ್ರು ಎಂಬುದರ ಕುರಿತ ಎಕ್ಸ್ಕ್ಲೂಸಿವ್ ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಲಭ್ಯವಾಗಿದೆ.
ಲೋಕಲ್ ಟ್ರೈನ್ ಮುಖಾಂತರ ಉಜ್ಜಯಿನಿಯತ್ತ ಪ್ರಯಾಣ ಫರ್ವೇಜ್?
ಗದಗದಿಂದ ನಾಪತ್ತೆಯಾಗಿದ್ದ ಫರ್ವೇಜ್, ಭೋಪಾಲ್ ರೈಲು ನಿಲ್ದಾಣಕ್ಕೆ ತಲುಪಿ ಅಲ್ಲಿ ಸುಮಾರು ಮೂರು ರೈಲುಗಳನ್ನು ಏರಿ ಇಳಿದ ಬಳಿಕ, ಕೊನೆಗೆ ಲೋಕಲ್ ಟ್ರೈನ್ ಮುಖಾಂತರ ಉಜ್ಜಯಿನಿಯತ್ತ ಪ್ರಯಾಣ ಬೆಳೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸುಳಿವಿನ ಆಧಾರದ ಮೇಲೆ ಗದಗ-ಬೆಟಗೇರಿ ಪೊಲೀಸರು ಉಜ್ಜಯಿನಿಗೆ ತೆರಳಿದ್ದು, ಅಲ್ಲಿನ ಪ್ರಸಿದ್ಧ ಮಹಾಕಾಳ ದೇವಸ್ಥಾನ ಹಾಗೂ ಶಾಹಿ ಮಸೀದಿಗೆ ಫರ್ವೇಜ್ ಭೇಟಿ ನೀಡಿದ್ದಾನೆಯೇ ಎಂಬುದರ ಕುರಿತು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಇದಷ್ಟೇ ಅಲ್ಲದೆ, ಫರ್ವೇಜ್ ಉಜ್ಜಯಿನಿಯಿಂದ ರಾಜಸ್ಥಾನದ ಅಜ್ಮೇರ್ ಶರೀಫ್ ದರ್ಗಾಕ್ಕೆ ತೆರಳಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದ್ದು, ಈ ಎಲ್ಲಾ ಮಾಹಿತಿಗಳನ್ನು ಪೊಲೀಸ್ ಮೂಲಗಳು
