Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆರೆ ಪುನಶ್ಚೇತನ ಕಾಮಗಾರಿ ಪ್ರಾರಂಭ

ವಿಬಿ ಜಿ ರಾಮ್ ಜಿ ಯೋಜನೆಡಿ ಕೆರೆ ಪುನಶ್ಚೇತನ ಕಾಮಗಾರಿ ಪ್ರಾರಂಭ. 

ವಿಬಿ ಜಿ ರಾಮ್ ಜಿ ಯೋಜನೆಯಿಂದ ಸರ್ವಾಂಗೀಣ ಅಭಿವೃದ್ಧಿ: ತಾ.ಪಂ. ಇಒ ಚಂದ್ರಶೇಖರ ಬಿ ಕಂದಕೂರ

ಗಜೇಂದ್ರಗಡ: ತಾಲೂಕಿನ ಇಟಗಿ ಗ್ರಾಮ ಪಂಚಾಯತಿಯ ಇಟಗಿ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಂದು ಭೇಟಿ ನೀಡಿ ಪರಿಶೀಲಿಸಿದರು.

 


ಈ ವೇಳೆ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ರೈತರು, ಕೂಲಿಕಾರರ ಜೀವನೋಪಾಯ ಚಟುವಟಿಕೆಗಳ ಮೂಲಕ ಆರ್ಥಿಕ ಸಮರ್ಥನೆಗಾಗಿ ಜಾರಿಯಾದ ವಿಬಿ ಜಿ ರಾಮ್ ಜಿ ಯೋಜನೆಯಿಂದ ಕೂಲಿಕಾರರ ಸರ್ವಾಂಗೀಣ ಅಭಿವೃದ್ದಿಯಾಗಲಿದೆ ಎಂದು ಹೇಳಿದರು.

ವಿಬಿ ಜಿ ರಾಮ್ ಜಿ ಯೋಜನೆಡಿ ಪ್ರತಿದಿನ ಎರಡು ಬಾರಿ ಹಾಜರಾತಿ ಕಡ್ಡಾಯವಿದೆ. ಅಳತೆಗೆ ತಕ್ಕಂತೆ ವೇತನ ನೀಡಲಾಗುವುದು. ಹೀಗಾಗಿ ಎಲ್ಲರೂ ಸರಿಯಾಗಿ ಕೆಲಸ ಮಾಡಿ ಪೂರ್ಣ ಪ್ರಮಾಣದ ಕೂಲಿ ಪಡೆಯಬೇಕು. ಈ ಯೋಜನೆಯಲ್ಲಿ ಸಮುದಾಯ ಕಾಮಗಾರಿಗಳು ಅಷ್ಟೇ ಅಲ್ಲದೆ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರೈತರು ತಮ್ಮ ಜಮಿನುಗಳಲ್ಲಿ ವೈಯಕ್ತಿಕವಾಗಿ ಕಾಮಗಾರಿಗಳನ್ನು ಆರ್ಥಿಕವಾಗಿ ಸದೃಡರಾಗಬೇಕು.

ವಿಬಿ ಜಿ ರಾಮ್ ಜಿ ಯೋಜನೆಡಿ 375 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಜುಲೈ 1 ರಿಂದ ಪ್ರತಿಯೊಬ್ಬ ಕೂಲಿಕಾರರಿಗೂ 382 ರೂಪಾಯಿ ಕೂಲಿಮೊತ್ತ ಹಾಗೂ 125 ದಿನಗಳ ಕೆಲಸ ಸಿಗಲಿದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು. ಗ್ರಾಪಂಗಳಲ್ಲಿ ನಿರಂತರ ಕೆಲಸ ನೀಡಲಾಗುವುದು.

ಈ ಸಂದರ್ಭದಲ್ಲಿ ಪಿಡಿಒ ಮಹಾಂತೇಶ ಬಾಳಿಕಾಯಿ, ಎಸ್‌ಡಿಇಎ ಪರಶುರಾಮ್ ಮ್ಯಾಗಳಮನಿ, ಬಿಎಫ್‌ಟಿ ಜ್ಯೋತಿ ವಡ್ಡರ, ಜಿಕೆಎಂ ಹೇಮಲತಾ ಜಡದೇಲಿ, ಕಾರ್ತಿಕ ಪೂಜಾರ, ಗ್ರಾಮ ಪಂಚಾಯತಿ ಸಿಬ್ಬಂದಿ, ಕಾಯಕ ಬಂಧುಗಳು, ಕೂಲಿಕಾರರು.

Related posts

ಸರ್ಕಾರಿ ಶಾಲಾ ಮಕ್ಕಳ ಬೇಳೆಯಲ್ಲೂ ಭಾರೀ ಭ್ರಷ್ಟಾಚಾರವಾಗಿದೆ. ಕಳಪೆ ಬೇಳೆ ಕೊಟ್ಟು ಮಕ್ಕಳಿಗೆ ಭಾರೀ ವಂಚನೆ

satyadarshana

ವಿದ್ಯಾರ್ಥಿಗಳ ಗೊಳಿಗೆ ಶಾಶ್ವತ ಪರಿಹಾರ ಸಿಗಲಿ.ಸಾರಿಗೆ ಇಲಾಖೆ ಮೂಗಿಗೆ ತುಪ್ಪ ಸವರದಿರಲಿ.

satyadarshana

ಕೆರೆ ತುಂಬುವ ಯೋಜನೆಗೂ ಹಾಲಪ್ಪ ಆಚಾರ್ ಗೂ ಸಂಬಂಧ ಇಲ್ಲ: ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ 

satyadarshana