ವಿಜಯನಗರ : ಜಿಲ್ಲೆ ಹರಪನಹಳ್ಳಿ ತಾಲೂಕಿನ ಗುಂಡಗತ್ತಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಗುಂಡಗತ್ತಿ ಕಂದಾಯ ಗ್ರಾಮದ ಸೇರಿದ ರಿ. ಸರ್ವೇ ನೋಂಬರ್ 84/.B. ವಿಸ್ತೀರ್ಣ 6.19 ಎಕ್ಕರೆ ಜಮೀನನ್ನು 3 ವರ್ಷಗಳ ಕಾಲಾವಧಿಗೆ ರೈತರಿಗೆ ಗುತ್ತಿಗೆ(ಲಾವಣಿ)ಗೆ ಹಾಕಲು ಹರಾಜು. 
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಗುಂಡಗತ್ತಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಗೆ ಒಳಪಟ್ಟಿದೆ. ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದಂತೆ ಗುಂಡಗತ್ತಿ ಕಂದಾಯ ಗ್ರಾಮದ ಸೇರಿದ ರಿ. ಸರ್ವೇ ನೋಂಬರ್ 84/.B. ವಿಸ್ತೀರ್ಣ 6.19 ಎಕ್ಕರೆ ಜಮೀನನ್ನು 3 ವರ್ಷಗಳ ಕಾಲಾವಧಿಗೆ ದಿನಾಂಕ ಜೂನ್ 01 2026 ರಂದು. ಬೆಳಗ್ಗೆ 11: 00 ಗಂಟೆಗೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮಾನ್ಯ ತಾಲ್ಲೂಕ ತಹಶೀಲ್ದಾರ್ / ತಾಲ್ಲೂಕ್ ದಂಡಾಧಿಕಾರಿಗಳು ಹರಪನಹಳ್ಳಿ ರವರ ಅಧ್ಯಕ್ಷತೆಯಲ್ಲಿ.ಗ್ರಾಮಸ್ಥರ, ರೈತರ ಸಮ್ಮುಖದಲ್ಲಿ ಬಹಿರಂಗವಾಗಿ ಗುತ್ತಿಗೆ(ಲಾವಣಿ)ಗೆ ಹಾಕಲು ಹರಾಜು. ರೈತರಿಗೆ ಆಹ್ವಾನಿಸಲಾಗಿದೆ. ಆಸಕ್ತರು ಹರಾಜಿನಲ್ಲಿ ಭಾಗವಹಿಸಲು ಅಸಕ್ತಿ ,ಉತ್ಸಾಹಿ ವ್ಯಕ್ತಿಗಳು ಈ ” ಷರತ್ತುಗಳಿಗೆ ಒಳಪಟ್ಟು ಬಹಿರಂಗ ಹರಾಜಿನಲ್ಲಿ ಭಾಗವಹಿಸಲು ಅವಕಾಶ “ಕಲ್ಪಿಸಿದೆ ಕೊಟ್ಟಿದೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಷರತ್ತುಗಳು:
* ಹರಾಜಿನಲ್ಲಿ ಭಾಗವಹಿಸುವವರು ಹರಾಜು ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ದೇವಾಲಯದ ಕಛೇರಿಯಲ್ಲಿ ರೂ/ 10000/- ಗಳನ್ನು ಮುಂಗಡ ಠೇವಣಿ ಹಣವನ್ನು ಪಾವತಿಸಿ ಹರಾಜಿನಲ್ಲಿ ಭಾಗವಹಿಸಬೇಕು.
* ಮುಂಗಡ ಠೇವಣಿ ಹಣವನ್ನು ಪಾವತಿಸದಿರುವವರಿಗೆ ಬಹಿರಂಗ ಹರಾಜಿನಲ್ಲಿ ಭಾಗವಹಿಸಲು ಅವಕಾಶ ವಿರುದಿಲ್ಲ
* ಹೆಚ್ಚಿಗೆ ಬಿಡ್ಡು ಅದ ಬಿಡ್ಡುದಾದಾರ ಮುಂಗಡ ಠೇವಣಿ ಹಣವನ್ನು ಹೊರತುಪಡಿಸಿ ಹರಾಜಿನಲ್ಲಿ ಭಾಗವಹಿಸಿದ ಉಳಿದವರ ಮುಂಗಡ ಹಣವನ್ನು ಸ್ಟದಲ್ಲಿಯೇ ಹಿಂತಿರುಗಿಸಲಗುವುದು.
* ಉನ್ನತ ಬಿಡ್ಡು ಮಾಡಿದ ಬಿಡ್ಡುದಾರರನ್ನು 15 ದಿನಗಳ ಒಳಗಾಗಿ ಪೂರ್ಣ ಹಣವನ್ನು ದೇವಸ್ತಾನದ ಆಡಳಿತ ಕಛೇರಿಯಲ್ಲಿ ನೀಡಿ ಅಧಿಕೃತವಾದ ರಸೀದಿಯನ್ನು ಪಡೆಯತಕ್ಕದ್ದು.
* ಹರಾಜು ಉನ್ನತ ಬಿಡ್ಡುದಾರರು ನಿಗದಿತ ಅವಧಿಯೊಳಗೆ ಹಣ ಪಾವತಿಸಲು ವಿಫಲವಾದಲ್ಲಿ ಠೇವಣಿ ಮೊತ್ತವನ್ನು ಮಟ್ಟಗೋಳು ಹಾಕಿಕೊಳ್ಳಲಾಗುವುದು ಮತ್ತು ಯಾವುದೇ ಸೂಚನೆ ನೀಡದೆ ಮರು ಹರಾಜು ಮಾಡಲು ಕ್ರಮ ಕೈ ಗೊಳ್ಳುಲಾಗುವುದು.
* ಹರಾಜನ್ನು ಅಂಗೀಕರಿಸುವ ಅಥವಾ ತಿರಕರಿಸುವ ಅಧಿಕಾರ ಮಾನ್ಯ ತಾಲ್ಲೂಕ ತಹಶೀಲ್ದಾರ್ / ತಾಲ್ಲೂಕ್ ದಂಡಾಧಿಕಾರಿಗಳು ಹರಪನಹಳ್ಳಿ ರವರ ವ್ಯಾಪ್ತಿಗೊಳ್ಳಪಟ್ಟಿರುತ್ತದೆ.
* ಉನ್ನತ ಬಿಡ್ಡುದಾರರ ಗಮನಕ್ಕೆ ಪ್ರಕೃತಿಯ ಹಿತಾ ದೃಷ್ಟಿಯಿಂದ ಅನಾವೃಷ್ಟಿಗೆ ಮತ್ತು ಲಾಭ, ನಷ್ಟ ಗಳಿಗೆ ದೇವಸ್ಥಾನದ ಹಾಗೂ ಇಲಾಖೆ ಅಧಿಕಾರಿಗಳು ಜವಾಬ್ದಾರಲ್ಲ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ..
