Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಸಾಧನೆಗೆ ಜ್ಞಾನರಸ ಯಾತ್ರೆಯಲಿ ಸಾಗಬೇಕು. ಡಾ. ಮಾದಿ.

ಗಜೇಂದ್ರಗಡ.. ಯಾವುದೇ ಸಾಧನೆ ಮಾಡಲು ಜ್ಞಾನ ಗ್ರಹಿಸಬೇಕು ಆ ಪವಿತ್ರಾದ ಜ್ಞಾನ ರಸ ಯಾತ್ರೆಯಲ್ಲಿ ಅಂದುಕೊಂಡಿರುವ ಸಾಧನೆಯನ್ನು ಅಂದುಕೊಂಡಿರುವಂತೆ ಮಾಡಲು ಸಾಧ್ಯವಿದೆ ಎಂದು ಸಾಂಸ್ಕೃತಿಕ ಚಿಂತಕ ಡಾ: ಬಿ ಕೆ ಮಾದಿ ಹೇಳಿದರು.

ಜ್ಞಾನ ಸಹ್ಯಾದ್ರಿ ಕೋಚಿಂಗ್ ಸೆಂಟರ್ ವತಿಯಿಂದ ಹಮ್ಮಿಕೊಂಡಿದ್ದ ವೀರ ಯೋಧರಿಗೆ ಸನ್ಮಾನ ಕಾರ್ಯಕ್ರಮದ ಅತಿಥಿ ಉಪನ್ಯಾಸದಲ್ಲಿ ಮಾತನಾಡುತ್ತಾ ಕಾಯಕದಲ್ಲಿ ಸತಿ ಸುತರೇನ್ನದೆ ಗುರು ದರ್ಶನವನ್ನು ಹಿಂದಿರಿಸೆಂದು ಹೇಳಿರುವ ಅಗ್ರ ವಚನಕಾರ ಜೇಡರ ದಾಸಿಮಯ್ಯ ನವರ ವಚನವನ್ನು ರೂಡಿಸಿಕೊಂಡು ಎರಡು ದಶಕಗಳಿಗಿಂತಲೂ ಅಧಿಕ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ಈಗ ವಿಜಯನಗರ ಜಿಲ್ಲೆಯಲ್ಲಿ ಪಿಎಸ್ಐ ಆಗಿ ನೇಮಕಗೊಂಡಿರುವ ಬಸವರಾಜ್ ಪೊಲೀಸ್ ಪಾಟೀಲ್ ರವರ ಸಾಧನೆಯ ಶೃಂಗ ಹಾಗೂ ಅವರ ಜ್ಞಾನವನ್ನು ಮೆಲಕು ಹಾಕಿದರು.

ಮಾಜಿ ಸೈನಿಕರಾದ ಎಚ್ ಟಿ ಶಿರೂರ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡುತ್ತಾ ಪ್ರತಿಯೊಬ್ಬರೂ ರಾಷ್ಟ್ರಸೇವೆಗೆ ಸಿದ್ದರಾಗಿ ದೇಶ ಭಾಷೆ ನೆಲ ಜಲ ಸಂರಕ್ಷಿಸಬೇಕೆಂದರು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳ್ಳಾರಿ ವಿಭಾಗದ ಪಿಎಸ್ಐ ಬಸವರಾಜ್ ಪೊಲೀಸ್ ಪಾಟೀಲ್ ಮಾತನಾಡಿ ಪ್ರತಿಯೊಬ್ಬರು ಅಧ್ಯಯನಶೀಲರಾಗಿ ನಿರಂತರ ಸಾಧನೆಯತ್ತ ಸಾಗಬೇಕು ಅಂದಾಗಲೇ ಬದುಕು ಸಾರ್ಥಕವಾಗುತ್ತದೆ ನೀವೆಲ್ಲರೂ ತಂದೆ ತಾಯಿ ಗುರು ಹಿರಿಯರಿಗೆ ಗೌರವ ನೀಡಿ ಅವರ ಸೇವೆ ಮಾಡುವ ಮನೋಭಾವವನ್ನು ರೂಡಿಸಿಕೊಳ್ಳುವ ಸಂಸ್ಕಾರ ಎಂದಿಗಿಂತಲೂ ಇಂದು ಹೆಚ್ಚು ಅವಶ್ಯಕತೆ ಇದೆ ಎಂದರು. ಹಾಲುಮತ ಸಮಾಜದ ರಾಜ್ಯಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಬಿ ಪೊಲೀಸ್ ಪಾಟೀಲ್ ಮಾತನಾಡಿ ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಸಮರ್ಥ ಸ್ತ್ರೀಯ ಪಾತ್ರ ಇರುವಂತೆ ನನ್ನ ಸಾಧನೆ ಹಿಂದೆ ನನ್ನ ಪತಿಯ ನಿರಂತರ ಶ್ರಮ ಮಾರ್ಗದರ್ಶನ ಇದೆ ಎಂದರು. ಈ ಸಂದರ್ಭದಲ್ಲಿ ಉಪನ್ಯಾಸಕ ಸುಭಾಸ ಅವಧೂತ, ಶಿಕ್ಷಕರಾದ, ಕೂಡ್ಲೆಪ್ಪ, ಸಿದ್ದಲಿಂಗಪ್ಪ ಸಮಾಜ ಕಾರ್ಯಕರ್ತ ಯಮನೂರಪ್ಪ ಮಾತನಾಡಿದರು.

ಜ್ಞಾನ ಸಹ್ಯಾದ್ರಿ ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು ದ್ಯಾಮಣ್ಣ ಮುದೆನಗುಡಿ ಸ್ವಾಗತಿಸಿದರು ಜ್ಞಾನ ಸಹ್ಯಾದ್ರಿ ಸಂಸ್ಥೆಯ ಸಂಸ್ಥಾಪಕರಾದ ಡಾಕ್ಟರ್ ಪ್ರಕಾಶ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು ಗ್ರಂಥಪಾಲಕರಾದ ಎಸ್ ಟಿ ಪತ್ತಾರ್ ಕೊನೆಯಲ್ಲಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು ಈ ಸಂದರ್ಭದಲ್ಲಿ ವೀರ ಯೋಧರು ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು.

ವರದಿ :-ಮಲ್ಲಪ್ಪ.

Related posts

ಕರ್ತವ್ಯ ಲೋಪ ಮಾಡದೇ ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಇಲಾಖಾಧಿಕಾರಿಗಳು ಕರ್ತವ್ಯ ನಿರ್ವಹಿಸಿ.}ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ

satyadarshana

ಸ್ವಾವಲಂಬನೆ ಜೀವನ ರೂಪಿಸಿಕೊಳ್ಳಲು ಕೌಶಲ್ಯ ಅಭಿವೃದ್ಧಿ ತರಬೇತಿ ತುಂಬಾ ಅಗತ್ಯ. ಡಾ. ಬಸವರಾಜ್ ಬಳ್ಳಾರಿ

satyadarshana

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ನಿವಾಸಕ್ಕೆ ಮುತ್ತಿಗೆ ಹಾಕಿ.ಭಾರಿ ಹಣ ವಶಕ್ಕೆ ಪಡೆದ ಪ್ರತಿಭಟನಾಕಾರರು

satyadarshana

Leave a Comment