Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಉಪ ಕಾನೂನು ನೆರವು ಅಭಿರಕ್ಷಕರ ಹುದ್ದೆಗಾಗಿ ಅರ್ಜಿ ಆಹ್ವಾನ

ಗದಗ : ಏಪ್ರಿಲ್ 12:ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನರ ಮೇರೆಗೆ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಸ್ಥಾಪಿಸಿದ ಕಾನೂನು ನೆರವು ಅಭಿರಕ್ಷಕರ ಕಚೇರಿಯಲ್ಲಿ ಖಾಲಿ ಇರುವ ಉಪ ಕಾನೂನು ನೆರವು ಅಭಿರಕ್ಷಕರ (ಡೆಪ್ಯುಟಿ ಚೀಫ್ ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್ ) ಒಂದು ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಭರ್ತಿ ಮಾಡಿ ಅವಶ್ಯಕ ದಾಖಲೆಗಳನ್ನು ಸ್ವತ: ದೃಢೀಕರಿಸಿ ಲಗತ್ತಿಸಿ ಎಪ್ರಿಲ್ 24 ರ ಸಂಜೆ 5 ಗಂಟೆಯೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ, ಜಿಲ್ಲಾ ನ್ಯಾಯಾಲಯದ ಸಂಕೀರ್ಣ , ಗದಗ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲಾ ನ್ಯಾಯಾಲಯದ ವೆಬ್‍ಸೈಟ್ https://gadag.dcourts.gov.in ಮೂಲಕ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕರ್ನಾಟಕ ರಾಜ್ಯೋತ್ಸ: ಆಕರ್ಷಕ ಪಥ ಸಂಚಲನ, ಸಾಧಕರಿಗೆ ಸನ್ಮಾನ ಹಾಗೂ ತ್ರಿಚಕ್ರ ವಾಹನ ವಿತರಣೆ

satyadarshana

ತಂದೆಗೆ ತಕ್ಕ ಮಗ’ ಪುನೀತ್ ರಾಜ್‌ಕುಮಾರ್ ಅಪ್ಪನ ಹೆಸರನ್ನು ಉಳಿಸಿ ಬೆಳೆಸಿ ಹೊರಟ

satyadarshana

ದಲಿತರ ವಿರೋಧಿ ಹಾಲಪ್ಪ ಆಚಾರ್ ಈ ಬಾರಿ ಸೋಲು ಖಚಿತ: ಈರಪ್ಪ ಕುಡುಗುಂಟಿ 

satyadarshana

Leave a Comment