Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಜನಸಾಮಾನ್ಯರ ರಕ್ಷಣೆ, ಶಾಂತಿ ಸುವ್ಯವಸ್ಥೆಯ ಹೊಣೆಗಾರಿಕೆಯಲ್ಲಿ . ಪೊಲೀಸರ ಪಾತ್ರ ಪ್ರಮುಖವಾಗಿದೆ > ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ

ಗದಗ . ಅಕ್ಟೋಬರ್ 21: ರಾಜ್ಯದಲ್ಲಿ  ದೈನಂದಿನ ಜನಸಾಮಾನ್ಯರ  ರಕ್ಷಣೆ , ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಹೊಣೆಗಾರಿಕೆ ಅಪಾರವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಅವರು ಹೇಳಿದರು.

  ಜಿಲ್ಲಾ ಪೊಲೀಸ ಕಚೇರಿ ಆವರಣದಲ್ಲಿ ಶುಕ್ರವಾರದಂದು ಬೆಳಿಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕರ್ತವ್ಯಪಾಲನೆಯಲ್ಲಿ ಪ್ರಾಣಾರ್ಪಣೆ ಮಾಡಿದ ಪೊಲೀಸರ ನೆನಪಿಗಾಗಿ ಆಯೋಜಿಸಲಾದ ಪೊಲೀಸ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ರ್ನಾಟಕ ರಾಜ್ಯದಲ್ಲಿ ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಪೊಲೀಸರ ಹಗಲಿರುಳು ಕರ್ತವ್ಯ ಪಾಲನೆಯೇ ಕಾರಣ.  ಶಾಂತಿ ಸುವ್ಯವಸ್ಥೆಯ ಪಾಲನೆಯಲ್ಲಿ ಪೊಲೀಸ್ ಇಲಾಖೆಯ ಪ್ರತಿ ಹಂತದ ನೌಕರರು ತಮ್ಮದೇ ಆದ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಶಾಂತಿ ನೆಲೆಸುವಂತೆ ಮಾಡಿದ್ದಾರೆ ಎಂದರು.

          ಜನಸಾಮಾನ್ಯರ ಪ್ರಾಣ ರಕ್ಷಣೆಯೊಂದಿಗೆ ಯಾವುದೇ ತರಹದ ಅಹಿತಕರ ಘಟನೆಗಳಾಗದಂತೆ ನಿರಂತರವಾಗಿ ಕರ್ತವ್ಯ ಪಾಲಿಸಿ ಇಲಾಖೆಗೆ ತಮ್ಮದೇ ಆದಂತಹ ಕಾಣಿಕೆ ನೀಡಿ ಕೆಲವೊಂದು ಸಂದರ್ಭದಲ್ಲಿ ಬಲಿದಾನ  ಮಾಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

         ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಶಿವಪ್ರಕಾಶ ದೇವರಾಜ ಮಾತನಾಡಿ ಪ್ರತಿ ವರ್ಷ  ಅಕ್ಟೋಬರ್ 21 ರಂದು  ಪೊಲೀಸ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ.  ಈ ಸಂದರ್ಭದಲ್ಲಿ ಕಳೆದೊಂದು ವರ್ಷದಲ್ಲಿ ಕರ್ತವ್ಯನಿರತ ಪೊಲೀಸರು ಹುತಾತ್ಮರಾದವರನ್ನು ನೆನೆದು ಗೌರವ ಸಮರ್ಪಿಸಲಾಗುವುದು ಎಂದು ತಿಳಿಸುತ್ತಾ ಹುತಾತ್ಮರಾದ ಪೊಲೀಸರ ಹೆಸರುಗಳನ್ನು  ಓದಿದರು.  

         ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ, ಉಪಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಹುತಾತ್ಮ ಪೊಲೀಸ ಸ್ಮಾರಕಕ್ಕೆ  ಹೂಗುಚ್ಛವಿರಿಸಿ ಗೌರವ ಸಮರ್ಪಿಸಿದರು.  ಡಿ.ವೈ.ಎಸ್.ಪಿ. ಶಿವಾನಂದ ಪವಾಡಶೆಟ್ಟರ ವಂದಿಸಿದರು. 

Related posts

ರಾಹುಲ್ ಅಪ್ಪುಗೆಯ ಮೌಲ್ಯವನ್ನು ಕಳೆದು ಹಾಕಿದ ಕಣ್ಮಿಟುಕು

cradmin

ಅಮ್ಮಾ ಪೌಂಡೇಶನ್ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಕಾರ್ಯಕ್ರಮ.

satyadarshana

ಪ್ರವಾಸೋದ್ಯಮ ಇಲಾಖೆಯ  ಹಣ ಅಕ್ರಮ ವರ್ಗಾವಣೆ ಪ್ರಮುಖ ಆರೋಪಿ ಬಂಧನ

satyadarshana

Leave a Comment