ಬರ್ಮಿಂಗ್‌ಹ್ಯಾಮ್: [ Jul 10,] ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಅಮೋಘ ಬೌಲಿಂಗ್ ಬಲದಿಂದ ಭಾರತ ತಂಡವು ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಗಳಿಸಿತು.
ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಜಡೇಜ (ಔಟಾಗದೆ 46; 29ಎ, 4X5) ಮಿಂಚಿನ ಬ್ಯಾಟಿಂಗ್ ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 170 ರನ್ ಗಳಿಸಿತು. ಅದಕ್ಕುತ್ತರವಾಗಿ ಇಂಗ್ಲೆಂಡ್ 17 ಓವರ್‌ಗಳಲ್ಲಿ 121 ರನ್ ಗಳಿಸಿ ಆಲೌಟ್ ಆಯಿತು. ಭುವನೇಶ್ವರ್ ಮೂರು ವಿಕೆಟ್ ಗಳಿಸಿದರು.
ಆರನೇ ಕ್ರಮಾಂಕದಲ್ಲಿ ಜಡೇಜ ಕ್ರೀಸ್‌ಗೆ ಬಂದಾಗ ತಂಡದ ಸ್ಥಿತಿ ಚೆನ್ನಾಗಿರಲಿಲ್ಲ. 89 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದು ಕೊಂಡಿತ್ತು. ಆದರೆ ಆತಂಕದ ನಡು ವೆಯೂ ಎಡಗೈ ಬ್ಯಾಟರ್ ಜಡೇಜ ದಿಟ್ಟ ಆಟವಾಡಿದರು. 158.62ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು.
ಮತ್ತೆ ಟೀಂ ಇಂಡಿಯಾಗೆ ಆಸರೆಯಾದ ಜಡೇಜಾ: ಪಂದ್ಯದ ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡಿದ ಟೀಂ ಇಂಡಿಯಾ
ಅಜೇಯ 44 ರನ್ ಬಾರಿಸಿ ಭಾರತಕ್ಕೆ ಆಸರೆಯಾದ ಜಡ್ಡು
4 ವಿಕೆಟ್ ಕಬಳಿಸಿ ಮಿಂಚಿದ ಕ್ರಿಸ್ ಜೋರ್ಡನ್‌ಲ್ಲಿ ಇಂಗ್ಲೆಂಡ್ ಎದುರು ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಚಚ್ಚಿದ್ದ ರವೀಂದ್ರ ಜಡೇಜಾ, ಇದೀಗ ಟಿ20 ಪಂದ್ಯದಲ್ಲೂ ಆಕರ್ಷಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಜಡೇಜಾ 29 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ ಅಜೇಯ 46 ರನ್ ಬಾರಿಸಿದರು. ಜಡೇಜಾಗೆ ಕೊನೆಯಲ್ಲಿ ಸಾಥ್ ನೀಡಿದ ಹರ್ಷಲ್ ಪಟೇಲ್ ಕೇವಲ 6 ಎಸೆತಗಳಲ್ಲಿ 13 ರನ್ ಬಾರಿಸಿದರು.
ಗ್ಲೀಸನ್‌ಗೆ 3, ಜೋರ್ಡನ್‌ಗೆ 4 ವಿಕೆಟ್: ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಬಲಗೈ ವೇಗಿ ರಿಚರ್ಡ್ ಗ್ಲೀಸನ್ ಚೊಚ್ಚಲ ಪಂದ್ಯದಲ್ಲೇ ಟೀಂ ಇಂಡಿಯಾದ ಅಗ್ರಕ್ರಮಾಂಕದ ಮೂರು ವಿಕೆಟ್ ಕಬಳಿಸುವ ಮೂಲಕ ಸ್ಮರಣೀಯವಾಗಿಸಿಕೊಂಡರು. ಇನ್ನು ಅನುಭವಿ ವೇಗಿ ಕ್ರಿಸ್ ಜೋರ್ಡನ್ ಟೀಂ ಇಂಡಿಯಾದ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು.
