Satya Darshana
ಬಿಸಿ ಬಿಸಿ ಸುದ್ದಿ
ಸಿನಿಮಾ

ಶಿವರಾಜ್​ಕುಮಾರ್​ ಕಟೌಟ್​, ಹಾಲಿನ ಅಭಿಷೇಕ,ಮುಂಜಾನೆ 5 ಗಂಟೆ ಶೋ; ‘ಭಜರಂಗಿ 2’ ರಿಲೀಸ್​​ಗೆ ಕೌಂಟ್​ಡೌನ್​ 

 ಸಿನಿಮಾ ಸುದ್ದಿ ರಾಜ್ಯಾದ್ಯಂತ ಬರೋಬ್ಬರಿ 300 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ
ಮುಂಜಾನೆ ಐದು ಗಂಟೆಗೇ ಶೋ
ಸಾಮಾನ್ಯವಾಗಿ 10 ಗಂಟೆಯಿಂದ ಸಿನಿಮಾ ಪ್ರದರ್ಶನ ಕಾಣುತ್ತದೆ. ಆದರೆ, ‘ಭಜರಂಗಿ 2’ಗಾಗಿ ವಿಶೇಷ ಫ್ಯಾನ್ಸ್​ ಶೋ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಜೆ.ಪಿ. ನಗರದ ಸಿದ್ದೇಶ್ವರ ಚಿತ್ರಮಂದಿರ ಹಾಗು ಗೌಡನ ಪಾಳ್ಯದ ಶ್ರೀನಿವಾಸ ಥಿಯೇಟರ್​​ನಲ್ಲಿ ಮುಂಜಾನೆ 5 ಘಂಟೆಗೆ ಸಿನಿಮಾ ಪ್ರದರ್ಶನ ಕಾಣಲಿದೆ. ಫ್ಯಾನ್ಸ್ ಶೋಗಾಗಿ ಭರ್ಜರಿ ಪ್ಲ್ಯಾನ್​ ನಡೆದಿದೆ. ಈ ಶೋಗೆ ಶಿವರಾಜ್​ಕುಮಾರ್ ಹಾಗೂ ವಸಿಷ್ಠ ಸಿಂಹ ಆಗಮಿಸೋ ಸಾಧ್ಯತೆ ಇದೆ. ಗಾಂಧಿನಗರದ ಅನುಪಮ ಚಿತ್ರಂಮದಿರದಲ್ಲಿ 10 ಘಂಟೆಗೆ ಶೋ ಆರಂಭಆಗಲಿದೆ.
ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಸಿನಿಮಾ ರಿಲೀಸ್​ಗೆ ಅದ್ದೂರಿಯಾಗಿ ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಿನಿಮಾದ ಕಟೌಟ್​ಗಳನ್ನು ಚಿತ್ರಮಂದಿರಗಳ ಎದುರು ನಿಲ್ಲಿಸಲಾಗಿದೆ. ಇದಕ್ಕೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಲಿದ್ದಾರೆ.
ಹರ್ಷ-ಶಿವಣ್ಣ ಕಾಂಬಿನೇಷನ್​ನಲ್ಲಿ ಮೂರನೇ ಸಿನಿಮಾ
ಹಲವು ಕಾರಣಗಳಿಗಾಗಿ ‘ಭಜರಂಗಿ 2’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿರುವ ಟ್ರೇಲರ್​ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಸೂಪರ್​ ನ್ಯಾಚುರಲ್​ ಕಥೆ, ಬೃಹತ್​ ಸೆಟ್​ಗಳು, ಕಲಾವಿದರ ಭಿನ್ನ ವಿಭಿನ್ನ ಗೆಟಪ್​ಗಳು ಗಮನ ಸೆಳೆಯುತ್ತಿವೆ. ಶಿವರಾಜ್​ಕುಮಾರ್​ ಮತ್ತು ನಿರ್ದೇಶಕ ಎ. ಹರ್ಷ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಮೂರನೇ ಸಿನಿಮಾ ಇದಾಗಿದ್ದು, ಸಾಕಷ್ಟು ಹೈಪ್​ ಸೃಷ್ಟಿ ಮಾಡಿದೆ.
ಪಾತ್ರವರ್ಗ
ಶಿವರಾಜ್​ಕುಮಾರ್ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ, ಭಾವನಾ ಮೆನನ್​, ಶಿವರಾಜ್​ ಕೆ.ಆರ್​. ಪೇಟೆ, ಚೆಲುವ ರಾಜು ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

 

 

 

Related posts

ಪುನೀತ್​ ರಾಜ್​ಕುಮಾರ್​ ಹೃದಯಾಘಾತದಿಂದ ನಿಧನ ಕಂಠೀರವ ಕ್ರೀಡಾಂಗಣದಲ್ಲಿ ಅಪ್ಪು ಅಂತಿಮ ದರ್ಶನ

satyadarshana

ತುಂಬಾ ನಿರೀಕ್ಷೆಯಿಂದ ಕಾಯ್ತಿರೋ ಜೇಮ್ಸ್ ವರ್ಲ್ಡ್​ವೈಡ್​ ದಾಖಲೆಯ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ-ವಿದೇಶಗಳಲ್ಲಿ ಜೇಮ್ಸ್ ಅಬ್ಬರಿಸುತ್ತಿದ್ದಾನೆ.

satyadarshana

ರಾಹುಲ್ ಅಪ್ಪುಗೆಯ ಮೌಲ್ಯವನ್ನು ಕಳೆದು ಹಾಕಿದ ಕಣ್ಮಿಟುಕು

cradmin

Leave a Comment