Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಕೊಪ್ಪಳ ಜಿಲ್ಲೆ ಮುದ್ಲಾಪುರ ಗ್ರಾಮಸ್ಥರು ನಮ್ಮ ಬವಣೆ ಕೇಳುವವರು ಯಾರು ಇಲ್ಲ

ಕೊಪ್ಪಳ :ಜಿಲ್ಲೆಯಲ್ಲೊಂದು ಗ್ರಾಮವಿದೆ .. ಈ ಗ್ರಾಮಕ್ಕೆ ಕಳೆದ 13 ವರ್ಷಗಳಿಂದ ಸರ್ಕಾರದಿಂದ ಯಾವುದೇ ಹೊಸ ಯೋಜನೆ ಮಂಜೂರು ಆಗಿಲ್ಲ .

ಕುಗ್ರಾಮದಲ್ಲಿರುವ ಈ ಗ್ರಾಮವನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ ಸ್ಥಳಾಂತರಗೊಳ್ಳುವ ಸ್ಥಳದಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲ . ಕಾಲಹರಣ ಮಾಡುತ್ತಿದೆ . ಇದರಿಂದ ಮುದ್ಲಾಪುರ ಗ್ರಾಮಸ್ಥರು ನಮ್ಮ ಬವಣೆ ಕೇಳುವವರು ಯಾರು ಇಲ್ಲ ಅನ್ನುತ್ತಿದ್ದಾರೆ .

ತುಂಗಭದ್ರಾ ಆಣೆಕಟ್ಟೆಗೆ ಸೇರುತ್ತಿರುವ ಹೂಳು ತಡೆಯುವ ಉದ್ದೇಶಕ್ಕಾಗಿ 1.92 ಟಿಎಂಸಿ ಸಾಮರ್ಥ್ಯದ ಹಿರೇಹಳ್ಳ ಜಲಾಶಯವನ್ನು ಮುದ್ಲಾಪುರ ಬಳಿ ನಿರ್ಮಿಸಿ 2001 ರಲ್ಲಿ ಲೋಕಾರ್ಪಣೆ ಮಾಡಲಾಯಿತು . ಹಿರೇಹಳ್ಳ ಜಲಾಶಯದಲ್ಲಿ ಮುಳುಗಡೆಯಾಗುವ ನಾಲ್ಕು ಹಳ್ಳಿಗಳು ಮತ್ತು ಜಲಾಶಯ ಹೊಂದಿಕೊಂಡಿರುವ ಕೊಪ್ಪಳ ತಾಲೂಕಿನ ಮುದ್ಲಾಪುರ ಗ್ರಾಮವನ್ನು ಸ್ಥಳಾಂತರಿಸಲು ಅದೇ ಯೋಜನೆ ಸಿದ್ಧಪಡಿಸಲಾಗಿದೆ ಆದರೆ , 2021 ಆದರೂ ಈ ಗ್ರಾಮಗಳು ಸ್ಥಳಾಂತರವಾಗಿಲ್ಲ .

ಯಲಬುರ್ಗಾ ತಾಲೂಕಿನ ಮುತ್ತಾಳ , ಶಿರೂರು , ವೀರಾಪುರ ಮತ್ತು ಕೊಪ್ಪಳ ತಾಲೂಕಿನ ಮುದ್ಲಾಪುರ ಗ್ರಾಮಗಳು ಸ್ಥಳಾಂತರಗೊಂಡಿವೆ . ಈ ನಡುವೆ 2010 ರಲ್ಲಿ ಕೊಪ್ಪಳ ತಾಲೂಕಿನ ಮುದ್ಲಾಪುರವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸರ್ಕಾರದಿಂದ ಹಣ ಮಂಜೂರಾಗಿದೆ . ಆ ಸಮಯದಲ್ಲಿ ಮನೆಗಳಿಗೆ ಪರಿಹಾರ ನೀಡಲಾಗುತ್ತದೆ . ಈ ನಡುವೆ ಸವಕಳಿ ಹಣ ನೀಡಲಾಗಿದೆ , ಪರಿಹಾರ ಕಡಿಮೆಯಾಗಿದೆ ಎಂದು ಗ್ರಾಮದ 182 ಕುಟುಂಬಗಳು ನ್ಯಾಯಲಯಕ್ಕೆ ಮೋರೆ ಹೋಗಿದ್ದಾರೆ , ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ

Related posts

ಹಳೇ ಅಭ್ಯರ್ಥಿಗಳಿಗೆ ಹೊಸ ಸವಾಲು.ಗಂಗಾವತಿ ಕ್ಷೇತ್ರ ಸ್ಥಿತಿ–ಗತಿ

satyadarshana

ಬೆಂಗಳೂರಲ್ಲಿ ವಿದ್ಯುತ್‌ ಶಾಕ್‌, ಬಿರುಗಾಳಿಗೂ ವಿದ್ಯಾರ್ಥಿ ಸೇರಿ 3 ಜನ ಸಾವು: 7 ಮಂದಿಯನ್ನು ಬಲಿಪಡೆದ ಬೌರಿಂಗ್ ಆಸ್ಪತ್ರೆ ಕಂಪೌಂಡ್ ಬಳಿ ನಿಜಕ್ಕೂ ನಡೆದಿದ್ದೇನು?

satyadarshana

ಕೊಪ್ಪಳ ಜಿಲ್ಲಾದ್ಯಂತ ಎಲ್ಲ ಕಡೆಗೂ ಸಮರ್ಪಕ ನೀರು ಪೂರೈಕೆಯಾಗಲಿ: ಜಿಲ್ಲಾಧಿಕಾರಿ ಡಾ.ಸುರೇಶ ಬಿ ಇಟ್ನಾಳ ನಿರ್ದೇಶನ

satyadarshana

Leave a Comment