Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿಸಿನಿಮಾ

ಕೋಟಿಗೊಬ್ಬ 3 ಹಾಗೂ ಸಲಗ ಸಿನಿಮಾ: ಅಕ್ಟೋಬರ್ 14ಕ್ಕೆ ಬಿಡುಗಡೆ,

ಸುದ್ದಿಮೂಲ ಸತ್ಯದರ್ಶನ

ಬೆಂಗಳೂರು.ಅಕ್ಟೋಬರ್​ 14ರಂದು ಎರಡು ಸ್ಟಾರ್​ ಸಿನಿಮಾಗಳು ಒಟ್ಟಿಗೆ ರಿಲೀಸ್​ ಆಗುತ್ತಿವೆ. ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್​ ‘ಸಲಗ’ ಸಿನಿಮಾ ಒಂದೇ ದಿನ ರಿಲೀಸ್​ ಆಗುವುದು ಬಹುತೇಕ ಖಚಿತವಾಗಿದೆ. ಈ ವಿಚಾರದ ಬಗ್ಗೆ ಸಲಗ ನಿರ್ಮಾಪಕ ಕೆ.ಪಿ. ಶ್ರೀಕಾಂತ್​ ಮಾತನಾಡಿದ್ದಾರೆ.

‘ಇದು ಸ್ಟಾರ್​ವಾರ್ ಅಲ್ಲ. ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪಬಾಬು ಅವರ ನಿರ್ಧಾರ ತಡವಾಗಿದೆ. ಕಳೆದ ಒಂದೂವರೆ ವರ್ಷದಿಂದ ನಾವು ಕಾಯುತ್ತಿದ್ದೆವು. 3 ಸಿನಿಮಾಗಳ ನಿರ್ಮಾಪಕರು ಮಾತುಕತೆ ನಡೆಸಿದ್ದೆವು. ಸರ್ಕಾರ ಅನುಮತಿ ನೀಡಿದ ನಂತರ ಮೊದಲು ‘ಸಲಗ’ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಚರ್ಚೆಯಾಗಿತ್ತು. ಮೊದಲೇ ಮಾತುಕತೆ ನಡೆಸಿರುವಂತೆ ‘ಸಲಗ’ ಚಿತ್ರ ಬಿಡುಗಡೆ ಆಗುತ್ತಿದೆ. ದಸರಾ ಹಬ್ಬ ಹಿನ್ನೆಲೆಯಲ್ಲಿ ಅಕ್ಟೋಬರ್ 14ರಂದು ಸಲಗ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು ಶ್ರೀಕಾಂತ್​.

ನಮ್ಮ ಚಿತ್ರಕ್ಕೆ ನಟ ಸುದೀಪ್ ಟ್ವೀಟ್​ ಮಾಡಿ ಹಾರೈಸಿದ್ದಾರೆ. ನಟ ಸುದೀಪ್​ ಮೊದಲಿನಿಂದಲೂ ‘ಸಲಗ’ ಜೊತೆಗಿದ್ದಾರೆ. ಕನ್ನಡದ 2 ಸಿನಿಮಾಗಳು ಒಟ್ಟಿಗೆ ಬರುತ್ತಿರುವುದರಿಂದ ಸಂತಸ ಇದೆ. ಕನ್ನಡ ಚಿತ್ರರಂಗದ ನಾವೆಲ್ಲರೂ ಒಂದಾಗಿದ್ದೇವೆ. ಒಂದೊಂದು ಊರಿನಲ್ಲಿ 2ಕ್ಕಿಂತಲೂ ಹೆಚ್ಚು ಟಾಕೀಸ್​ಗಳಿವೆ. ಆದ್ದರಿಂದ 2 ಚಿತ್ರಗಳಿಗೆ ಟಾಕೀಸ್​ ಸಮಸ್ಯೆ ಉಂಟಾಗುವುದಿಲ್ಲ’ ಎಂದರು ಅವರು.

ಈ ಬಗ್ಗೆ ಮಾತನಾಡಿರುವ ದುನಿಯಾ ವಿಜಯ್​, ‘ನಟ ಸುದೀಪ್​ ಹಾಗೂ ನನ್ನ ನಡುವೆ ಒಳ್ಳೆಯ ಸ್ಪರ್ಧೆ ಇದೆ. ಇದನ್ನು ಸ್ಟಾರ್​ ವಾರ್​ ಎಂದು ಭಾವಿಸುವುದು ಬೇಡ. ಅಭಿಮಾನಿಗಳು ಯಾರೂ ಆ ರೀತಿ ಭಾವಿಸಬೇಡಿ. ಕಷ್ಟಪಟ್ಟು ನಾನು ಈ ಸಲಗ ಚಿತ್ರವನ್ನು ಮಾಡಿದ್ದೇನೆ. ನಾಳೆ ಮತ್ತೆ ಸಭೆ ಮಾಡಿ ಚರ್ಚೆ ಮಾಡುತ್ತೇವೆ. ಒಬ್ಬ ನಿರ್ಮಾಪಕನನ್ನ ಕಾಪಾಡುವುದು ನಿಮ್ಮ ಜವಾಬ್ದಾರಿ. ನಮ್ಮ ನಿಲುವಿನಲ್ಲಿ ಯಾವುದೇ ರೀತಿ ಬದಲಾವಣೆ ಇಲ್ಲ’ ಎಂದಿದ್ದಾರೆ.

 

 

 

Related posts

ಕರ್ನಾಟಕ ಸಂಭ್ರಮ- 50 ರ ಅಂಗವಾಗಿ ಜ್ಯೋತಿ ರಥಯಾತ್ರೆ ನಗರದಲ್ಲಿ ರಥಯಾತ್ರೆಗೆ ಭವ್ಯ ಸ್ವಾಗತ

satyadarshana

ಮೂರು ಜನ ಸಿಬ್ಬಂದಿಗಳ ಅಕ್ರಮ ನೇಮಕಕ್ಕೆ ಅಧಿಕಾರಿಗಳ ಶಾಮಿಲಿನ ಅನುಮಾನ.CEO ರನ್ನು ಅಮಾನತ್ತು ಗೊಳಿಸುವಂತೆ ನಿರುಪಾದಿ ಕೆ ಗೊಮರ್ಸಿ ಆಕ್ರೋಶ.

satyadarshana

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬದ್ದ -ಬಸವರಾಜ ಬೊಮ್ಮಯಿ.

satyadarshana

Leave a Comment