ಗಂಗಾವತಿ :ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಡೆಸಿದ ವಿವಿಧ ಕಾಮಗಾರಿಗಳಲ್ಲಿ ಆಕ್ರಮ ಎಸಗಿದ ಆರೋಪ ಸಾಬೀತಾಗಿದ್ದರಿಂದ ಪಂಚಾಯತ್ ರಾಜ್ ಎಂಜಿನಿಯರ್ ಉಪವಿಭಾಗದ ಇಲ್ಲಿನ ಕಿರಿಯ ಎಂಜಿನಿಯರ್ ಪಲ್ಲವಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
2018-19, 2019-20ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡಿದ 38 ಕಾಮಗಾರಿಗಳಿಗೆ ಸಾಮಗ್ರಿ ಪೂರೈಕೆ ಮಾಡಿದ ವೆಂಡರ್‌ಗಳಿಗೆ ಬಿಲ್ ಪಾವತಿಸಿಲ್ಲ.
2021-22ನೇ ಸಾಲಿನಲ್ಲಿ ನೋಂದಣಿ ಮಾಡಿಸಿಕೊಂಡ ವೆಂಡರ್‌ಗಳಿಗೆ ಸಾಮಗ್ರಿ ಪೂರೈಸದಿದ್ದರೂ ಬಿಲ್ ಪಾವತಿ ಮಾಡಲಾಗಿತ್ತು.
2023-24ರ ಮಾರ್ಚ್ ಮತ್ತು 2024-25ನೇ ಜೂನ್‌ನಲ್ಲಿ ಕೂಲಿಕಾರರಲ್ಲದ ಕೆಲ ವ್ಯಕ್ತಿಗಳ ಹೆಸರುಗಳನ್ನು ನಮೂದಿಸಿ ಅವರ ಖಾತೆಗೆ ಹಣ ಪಾವತಿ ಮಾಡಲಾಗಿದೆ. ಆರು ಕಾಂಕ್ರೀಟ್ ರಸ್ತೆಗಳ ಕಾಮಗಾರಿಗಳ ಗುಣಮಟ್ಟ ಕೂಡ ಕಳಪೆಯಾಗಿರುವುದು ಕಂಡುಬಂದಿದೆ. ತನಿಖಾ ವರದಿ ಆಧರಿಸಿ ಪಂಚಾಯತರಾಜ್ ಎಂಜಿನಿಯರಿಂಗ್ ಇಲಾಖೆಯ ಪ್ರಧಾನ ಎಂಜಿನಿಯರ್ ಶ್ರೀನಾಥ್ ಕೆ. ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.
