Satya Darshana
ಬಿಸಿ ಬಿಸಿ ಸುದ್ದಿ
Other

ಲಿಂಗರಾಜು ಎಸ್.ಎಂ. ರವರಿಗೆ ಪಿಎಚ್.ಡಿ. ಪದವಿ ಪ್ರದಾನ

ಲಿಂಗರಾಜು ಎಸ್.ಎಂ. ರವರಿಗೆ ಪಿಎಚ್.ಡಿ. ಪದವಿ ಪ್ರದಾನ

ಕನ್ನಡ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ಲಿಂಗರಾಜು ಎಸ್.ಎಂ. ರವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಬೆಂಗಳೂರು  :ದಕ್ಷಿಣ: ಏ.30: ಕನಕಪುರ ತಾಲೂಕಿನ ಸೋಮೇದ್ಯಾಪನಹಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಸಿದ್ದಮ್ಮ ಮತ್ತು ದಿವಂಗತ ಮಾದಯ್ಯ ದಂಪತಿಯ ಹಿರಿಯ ಪುತ್ರ, ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ಲಿಂಗರಾಜು ಎಸ್.ಎಂ. ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.

ಕನ್ನಡ ಅಧ್ಯಯನ ಕೇಂದ್ರದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಮುನಿಯಪ್ಪ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ರಾಮನಗರ ಜಿಲ್ಲೆಯ ಐತಿಹ್ಯಗಳು ಸಾಂಸ್ಕೃತಿಕ ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ಸಂದರ್ಭದಲ್ಲಿ ಲಿಂಗರಾಜು ಎಸ್.ಎಂ. ಅವರ ಶೈಕ್ಷಣಿಕ ಸಾಧನೆಗಾಗಿ ಕುಟುಂಬಸ್ಥರು, ಗುರು-ಹಿರಿಯರು, ಸ್ನೇಹಿತರು ಮತ್ತು ಸೋಮೇದ್ಯಾಪನಹಳ್ಳಿ ಗ್ರಾಮದ ಸುತ್ತಮುತ್ತಲಿನವರು ಶುಭಕೋರಿ, ಅಭಿನಂದನೆ ಸಲ್ಲಿಸಿದ್ದಾರೆ.

Related posts

ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯ : ಜಿಲ್ಲಾ ನ್ಯಾ. ಬಸವರಾಜ

satyadarshana

ಭಾರತಕ್ಕೆ 48 ರನ್‌ಗಳ ಭರ್ಜರಿ ಜಯ :ಋತುರಾಜ್‌ ಗಾಯಕ್ವಾಡ್‌  ಇಶಾನ್‌ ಶೈನ್‌, ಹರ್ಷಲ್‌ ಬೌಲಿಂಗ್‌ ಕಮಾಲ್‌.

satyadarshana

ಭಾರತದಲ್ಲಿ ಹೊಸದಾಗಿ 10 ಅಣು ಸ್ಥಾವರಗಳ ಸ್ಥಾಪನೆ

satyadarshana

Leave a Comment