Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಪ್ರತಿ ಮನೆಯಲ್ಲೂ ಇರಲಿ ಪುಸ್ತಕ ಕೋಣೆ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಸಲಹೆ

ಕೊಪ್ಪಳ ಜಿಲ್ಲೆಯಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ

ಕೊಪ್ಪಳ :ಜೂನ್ 03. ನಮ್ಮೆಲ್ಲರ ಮನೆಯಲ್ಲಿ ಭಕ್ತಿಗಾಗಿ ದೇವರ ಕೋಣೆ ಇರುವಂತೆ, ಪುಸ್ತಕಕ್ಕೂ ಮೀಸಲು ಜಾಗ ಇರಲಿ, ಪುಸ್ತಕ ಕೋಣೆ ಇರಲಿ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ.ಮಾನಸ ಅವರು ಸಲಹೆ ಮಾಡಿದರು.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡ ಪುಸ್ತಕ ಪ್ರಾಧಿಕಾರದಿಂದ ನಗರದ ಎನ್.ಜಿ.ಓ ಕಾಲೋನಿಯಲ್ಲಿನ ಲೇಖಕರು ಹಾಗೂ ರಂಗಕರ್ಮಿಗಳಾದ ನಾಗರಾಜನಾಯಕ ಡಿ. ಡೊಳ್ಳಿನ ಅವರ ಅಪ್ಪಾಜಿ ನಿಲಯದ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಡಿ ಜೂನ್ 2ರಂದು ಏರ್ಪಡಿಸಲಾಗಿದ್ದ ಪುಸ್ತಕ ಪ್ರದರ್ಶನಕ್ಕೆ ದೀಪ ಬೆಳಗಿಸಿ ಚಾಲನೆ ಅವರು ಮಾತನಾಡಿದರು.

ಪ್ರತಿಯೊಬ್ಬರ ಮನೆಯಲ್ಲೂ ಪುಸ್ತಕಗಳಿರಬೇಕು ಎಂಬುದು ಭಾರತ ಭಾಗ್ಯವಿಧಾತ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು. ಓದು ಮನುಷ್ಯನನ್ನು ಪ್ರಜ್ಞಾವಂತನನ್ನಾಗಿಸುತ್ತದೆ. ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಓದು ತುಂಬಾ ಸಹಕಾರಿಯಾಗಲಿದೆ. ಇಂದಿನ ಒತ್ತಡದ ಬದುಕಿನಲ್ಲಿ ಓದು ಮಾತ್ರ ನಮ್ಮನ್ನು ಶಾಂತವಾಗಿರುವAತೆ ಮಾಡುತ್ತದೆ. ಪುಸ್ತಕಗಳು ಉತ್ತಮ ಸ್ನೇಹಿತರಿದ್ದಂತೆ. ಓದು ಮತ್ತು ಲೇಖಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ವರೆಗೂ ಲೇಖಕನಿಗೆ ಸಿಕ್ಕ ಗೌರವ ಓದುಗನಿಗೆ ಸಿಗುತ್ತಿರಲಿಲ್ಲ. ಇದನ್ನರಿತು ಕನ್ನಡ ಪುಸ್ತಕ ಪ್ರಾಧಿಕಾರವು ಓದುಗ ಪ್ರತಿ ಮನೆಯಲ್ಲೂ ಇರಲಿ ಎನ್ನುವ ಆಶಯದೊಂದಿಗೆ ಈ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಶಿಕ್ಷಕರಾದ ಶಿವಮ್ಮ, ಉಪನ್ಯಾಸಕರಾದ ನಿಂಗಪ್ಪ ಕಂಬಳಿ, ಮುಖ್ಯಾಧ್ಯಾಪಕರಾದ ವಿಕಯಲಕ್ಷಿö್ಮÃ, ಮಾರುತಿ ಕಟ್ಟಿಮನಿ ಗೆಳೆಯರ ಬಳಗ ಗುಡಿ ಗ್ರಂಥಾಲಯ ನಿರ್ಮಾಣ ಮಾಡಿದ್ದಕ್ಕಾಗಿ ಈ ಐವರ ಮನೆಗೆ ತೆರಳಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಗ್ರಂಥಾಲಯ ಜಾಗೃತಿ ಸಮಿತಿ ಸಂಚಾಲಕ ಜಿ.ಎಸ್.ಗೋನಾಳ, ಜಿಲ್ಲಾ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರಾದ ಸಾವಿತ್ರಿ ಮುಜುಂದಾರ, ಫಕೀರಪ್ಪ ವಜ್ರಬಂಡಿ, ನಿವೃತ್ತ ಉಪನ್ಯಾಸಕರಾದ ಎಸ್.ಎ.ರಜಪೂತ, ಉಪಪ್ರಾಂಶುಪಾಲರಾದ ಮಂಜುನಾಥ ಚಿತ್ರಗಾರ ಮತ್ತಿತರರು ಹಾಜರಿದ್ದರು.

Related posts

ಅಭಿವೃದ್ದಿ ಪಥದ ಜನಪರ ಬಜೆಟ್- ಎಚ್.ಕೆ.ಪಾಟೀಲ

satyadarshana

ವಿಧಾನ ಪರಿಷತ್ ಚುನಾವಣೆಯಲ್ಲಿʼದೊಡ್ಡ ಪಕ್ಷಗಳ ಕಾಂಚಾಣ ಹಂಚಿಕೆʼ ನಡುವೆ ನಾವು ಹಿಂದೆ ಬಿದ್ದಿದ್ದೇವೆ.ಎಚ್‌ಡಿಕೆ

satyadarshana

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಶಿರಹಟ್ಟಿ ತಾಲೂಕಿನ ಸುಮಾರು 17 ಕೀಮಿ ಮಾನವ ಸರಪಳಿ ರಚನೆ

satyadarshana

Leave a Comment