ಹರಪನಹಳ್ಳಿ: ಪಟ್ಟಣದ ಹೆಚ್ .ಪಿ ಎಸ್ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ “ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾಲೇಜಿನ ಅವಣದಲ್ಲಿ ಸಸಿ ನೆಟ್ಟು”ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರೊ. . ಶಿವಾನಂದ. ಭೂಗೋಳ ಶಾಸ್ತ್ರದ ಉಪನ್ಯಾಸಕ ರವರು. ಪರಿಸರವು ಇಲ್ಲದಿದ್ದರೆ ಇಂದು ಮಾನವ ಬದಕಲು ಸಾಧ್ಯವೇ ? ನಮ್ಮ ಸುತ್ತಮುತ್ತಲಿನ ಪರಿಸರ ಮನುಷ್ಯನಿಗೆ, ಎಷ್ಟು ಅವಶ್ಯ ಕತೆ ಇದೆ ಎಂದು ಅರ್ಥ ಮಾಡಿಕೊಳ್ಳಿ, ಪ್ರಕೃತಿಯಲ್ಲಿ. ಹುಟ್ಟಿ ಬೆಳೆದ ಜೀವಜಂತುಗಳಿಗೆ ಅಗತ್ಯಾವಾಗಿ ಬೇಕಾಗಿರುವುದು ಗಾಳಿ, ನೀರು, ಗಿಡ, ಮರ,ಅರಣ್ಯಗಳು ಮುಖ್ಯ ಜೀವನದ ಮೂಲ ಆಧಾರ. , ನೀರು, ಗಾಳಿ ಮತ್ತು ಪ್ರಕೃತಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಎಂದು ಶಿಬಿರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಇಂದು ಮಾನವನ ಅತಿಯಾದ ಚಟುವಟಿಕೆಗಳಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಅರಣ್ಯನಾಶ, ಪ್ಲಾಸ್ಟಿಕ್ ಬಳಕೆ, ಕೈಗಾರಿಕಾ ತ್ಯಾಜ್ಯ ಮತ್ತು ವಾಹನಗಳಿಂದ ಹೊರಬರುವ ಹೊಗೆ ಪರಿಸರಕ್ಕೆ ಹಾನಿಯನ್ನುಉಂಟು ಮಾಡುತ್ತಿವೆ. ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.
ಪರಿಸರ ಸಂರಕ್ಷಣೆ ವ್ಯವಸ್ಥೆಯ ಸಮತೋಲನವನ್ನು ಕಾಪಡಿ ಕೊಳ್ಳುವುದು ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾಗಿದೆ. ಪರಿಸರ ವ್ಯವಸ್ಥೆಯಲ್ಲಿ ಅರಣ್ಯೀಕರಣ ಬದಲಾವಣೆಯ ಸುಧಾರಣೆ ಅಗತ್ಯ ,ಅರಣ್ಯೀಕರಣ, ಜಲಸಂರಕ್ಷಣೆ, ಬರಗಾಲದಂತಹ ಪರಿಸ್ಥಿತಿಗಳನ್ನೂ ಎದುರಿಸಲು ನಮಗೆ ಸಹಾಯ ಮಾಡುತ್ತದೆ, ಭೂಮಿಯ ಸವಕಳಿ ಮರುಭೂಮಿಕರಣವನ್ನು ತಡೆಗಟ್ಟುವುದು ಪ್ರಸ್ತುತ ಜಾಗತಿಕ ಸವಾಲುಗಳಲ್ಲಿ ಒಂದಾಗಿದೆ. 
ಐಕ್ಯ ರಾಜ್ಯಸಭೆಯು 1972 ರಲ್ಲಿ ಸ್ಟಾಕ್ ಹೋಮ್ ನಲ್ಲಿ ಮಾನವ ವಿಶ್ವ ಪರಿಸರ ಸಮ್ಮೇಳನದಲ್ಲಿ ಜೂನ್ 05 ರ ದಿನ ವನ್ನು ವಿಶ್ವ ಪರಿಸರ ದಿನಾಚರಣೆ ಎಂದು ಘೋಷಿಸಲಾಯಿತು. ಪರಿಸರ ದಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರಕ್ಷಿಸಲು ಈ ದಿನವನ್ನು ಪರಿಸರ ದಿನ ಎಂದು ಆಚರಿಸಲಾಗುತ್ತದೆ. ಎಂದು ಪ್ರೊ. ಹೆಚ್ .ಶಿವಾನಂದ ರವರು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶಿವಗಂಗಮ್ಮ. ಪಿ ಮಾತನಾಡಿ ನಾವು ಹೆಚ್ಚು ಮರಗಳನ್ನು ನೆಡಬೇಕು, ನೀರನ್ನು ಮಿತವಾಗಿ ಬಳಸಬೇಕು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡ ಬೇಕು,
“ಇಂದಿನ ಪರಿಸರ ಸಂರಕ್ಷಣೆ, ನಾಳಿನ ಸುಂದರ ಭವಿಷ್ಯಕ್ಕೆ ಭದ್ರ ಅಡಿಪಾಯ” ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಹಸಿರು ಪರಿಸರ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತಿ ಉಪನ್ಯಾಸಕರಾದ ಬಸವರಾಜ್ ಸಿ.ಎಸ್, ಕೆ.ಬಿ ರವೀಂದ್ರ, ವೀರೇಶ್ ಎಂ.ಎಸ್, ಎಂ.ಬಿ ಗೌಡರ, ಸಂತೋಷ್ ಎಂ.ಇ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಮಂಜುನಾಥ್ ಮಾಳ್ಗಿ, ಗುರುಬಸವರಾಜ್. ಹೆಚ್, ಶಂಕ್ರಪ್ಪ ಹೆಚ್ , ನರೇಂದ್ರ.ಎಸ್,ಶ್ವೇತ ಎಂ.ಬಿ, ಅವಿನಾಶ್ ಡಿ.ಬಿ, ಮತ್ತಿತರರು ಉಪಸ್ಥಿತರಿದ್ದರು.
