Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಏ.14 ರಂದು ಡಾ. ಅಂಬೇಡ್ಕರ್‌ರವರ ಹಾಗೂ ಡಾ. ಬಾಬು ಜಗಜೀವನರಾಮ್‌ರವರ ಜನ್ಮ ದಿನಾಚರಣೆ

ಗದಗ : ದಿನಾಂಕ: 14-04-2026 ರಂದು ಡಾ. ಬಿಆರ್ ಅಂಬೇಡ್ಕರ್‌ರವರ 135ನೇ ಜಯಂತಿ ಹಾಗೂ ಡಾ.ಬಾಬು ಜಗಜೀವನರಾಮ್‌ರವರ 119ನೇ ಜನ್ಮ ದಿನಾಚರಣೆಯ ನಿಮಿತ್ಯ ಮುಂಜಾನೆ 9 ಗಂಟೆಗೆ ಗದಗ ಬೆಟಗೇರಿ ನಗರ ಸಭೆ ಆವರಣದಿಂದ ಹೊರಡಲಿದೆ.

ನಂತರ ಮೆರವಣಿಗೆಯು ಗಾಂಧಿ ಸರ್ಕಲ್, ಮಹೇಂದ್ರಕರ ಸರ್ಕಲ್, ಟಾಂಗಾ ಕೂಟ್, ಬಸವೇಶ್ವರ ಸರ್ಕಲ್, ಜೋಡುಮಾರುತಿ ದೇವಸ್ಥಾನ, ಪ್ರವಾಸಿ ಮಂದಿರ, ಮುಳಗುಂದನಾಕಾ ಮುಖಾಂತರ ಡಾ. ಬಿ,ಆರ್ ಅಂಬೇಡ್ಕರ ಭವನವನ್ನು ಮದ್ಯಾಹ್ನ 12.00 ಗಂಟೆಗೆ ಮೆರವಣಿಗೆ ತಲುಪುವುದು. ನಂತರ ವೇದಿಕೆ ಕಾರ್ಯಕ್ರಮ ಜರುಗಲಿದೆ.

ಸದರಿ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಜನಪ್ರತಿನಿದಿಗಳು, ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ/ ಅಲ್ಪಸಂಖ್ಯಾತ ವರ್ಗಗಳ ಸಮಾಜದ ಮುಖಂಡರು, ಸರ್ವಸದಸ್ಯರು, ಗಣ್ಯ ವ್ಯಕ್ತಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಸದರಿ ಜಯಂತಿಯಲ್ಲಿ ಭಾಗವಹಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಕೊರಿದ್ದಾರೆ.

Related posts

ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ: ಮೇ 10 ರಿಂದ ಮದ್ಯ ಮಾರಾಟ ನಿಷೇಧ

satyadarshana

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮತದಾರರ ಜಾಗೃತಿಗಾಗಿ ಬೈಕ್ ಏರಿದ ಹಿರಿಯ ಅಧಿಕಾರಿಗಳು

satyadarshana

ಶಿಗ್ಗಾವಿಯ ಸಿಎಂ ಮನೆವರೆಗೂ ಪಾದಯಾತ್ರೆ ಕೈಗೊಂಡ ಮಹಿಳೆಯರು

satyadarshana

Leave a Comment