ಯಲಬುರ್ಗಾ: ತಾಲೂಕಿನ ಕುಡಗುಂಟಿ ಗ್ರಾಮದ ಪ್ರತಿಭಾವಂತ ಇಂಜಿನೀಯರಿಂಗ್ ವಿದ್ಯಾರ್ಥಿನಿಗೆ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವದರ ಮೂಲಕ ಚಾಲನೆ ನೀಡಿದೆನು.
ಗ್ರಾಮೀಣ ಭಾಗದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಗುಣಮಟ್ಟದ ಶಿಕ್ಷಣ, ಡಿಜಿಟಲ್ ಕೌಶಲ್ಯಗಳು, ಹಾಗೂ ಪೋಷಕರ ಮಾರ್ಗದರ್ಶನ ಅತ್ಯಗತ್ಯ. ಸ್ಥಳೀಯ ಸರ್ಕಾರಿ ಶಾಲೆಗಳ ಸಬಲೀಕರಣ, ಕಂಪ್ಯೂಟರ್ ಶಿಕ್ಷಣದ ಲಭ್ಯತೆ ಮತ್ತು ಕೌಶಲ್ಯ ಆಧಾರಿತ ಕಲಿಕೆಯಿಂದ ಮಕ್ಕಳ ಪ್ರತಿಭೆಯನ್ನು ಅರಳಿಸಿ, ಅವರನ್ನು ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧಪಡಿಸುವದು ಒಂದು ಸವಾಲಿನ ಕೆಲಸವಾಗಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಸಿದ್ದಯ್ಯ ಸ್ವಾಮಿ ಹಿರೇಮಠ ವಹಿಸಿದ್ದರು.ಗ್ರಾಮದ ಹಿರಿಯರಾದ ಕಲ್ಲನಗೌಡ ಪಾಟೀಲ್,ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಶರಣಪ್ಪ ಕುರಿ,ಡಾ.ಗದ್ದೆಪ್ಪ ಚಲವಾದಿ,ವೀರಬಸಪ್ಪ ಗುರಿಕಾರ,ದೇವಪ್ಪ ಲಗಳೂರ,ಉಮೇಶಪ್ಪ ಹರಿಜನ,ಶರಣಪ್ಲ ಹಾದಿಮನಿ,ರಾಜಾಸಾಬ ಹುಡೇದ,ದಳಪತಿಗಳಾದ ಶಂಕರಗೌಡ ಪಾಟೀಲ,ಅಶೋಕ ಕೋಳಿಹಾಳ,ಯುವ ಮುಖಂಡರಾದ ಬಸವರಾಜ ಬೊಮ್ಮನಾಳ,ಹಿರೇಹನಮಪ್ಪ ಬೊಮ್ಮನಾಳ ಸೇರಿದಂತೆ ಗ್ರಾಮದ ಗುರು ಹಿರಿಯರು,ಯುವಕ ಮಿತ್ರರು,ವಿವಿಧ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
