Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ನೈಜ ವರದಿಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು  : ಲತಾ ಮಲ್ಲಿಕಾರ್ಜುನ

 

ಹರಪನಹಳ್ಳಿ: ನಗರದ ಎ.ಡಿ.ಬಿ. ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಹರಪನಹಳ್ಳಿ ತಾಲೂಕು. ‘ಕಾರ್ಯನಿರತ ಪತ್ರಕರ್ತರ ‘ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಇಂದು ಮುದ್ರಣ ಮಾಧ್ಯಮ ನೈಜ ವರದಿಗಳನ್ನು ಜನರಿಗೆ ತಲುಪಿಸುವಲ್ಲಿ ಸುದ್ಧಿ ಪತ್ರಿಕೆಗಳ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿವೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ರವರು ಮಾತನಾಡಿದರು.

ಸುದ್ದಿಗಳ ದೃಶ್ಯ ಮಾಧ್ಯಮ ವಿಷಯದಲ್ಲಿ ವಿದ್ಯುನ್ಮಾನ ತಂತ್ರಜ್ಞಾನ ಮಾಧ್ಯಮಗಳಿಗಿಂತ ಮುದ್ರಣ ಮಾಧ್ಯಮಗಳ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ ಹಾಗೂ ವಿಶ್ವಾಸವಿದೆ, ಪತ್ರಿಕೆಗಳು ಯಾವಾಗಲೂ ನೈಜತೆ ಮತ್ತು ಸತ್ಯದ ಕಡೆ ನಿಲ್ಲುತ್ತವೆ. ಪತ್ರಕರ್ತರು ಪ್ರಸ್ತುತ ಸ್ಥಿತಿ, ಗತಿಗಳನ್ನು ನಿಷ್ಠೆಯಿಂದ ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ಹಿರಿಯರು ಪತ್ರಿಕೆಗಳನ್ನು ನಡೆಸುತ್ತಿದ್ದಾಗ ಸತ್ಯ ಮತ್ತು ನ್ಯಾಯಯುತ ವರದಿಗಳನ್ನ ಬಿತ್ತಿಸುತ್ತಿದ್ದರು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಆ ಮಟ್ಟದ ನೈಜತೆ ಕಾಣಿಸಿಕೊಳ್ಳುವುದಿಲ್ಲ, ಪತ್ರಕರ್ತರಿಗೆ ಯಾವುದೇ ಆರ್ಥಿಕ ಭದ್ರತೆ ಇಲ್ಲದಿದ್ದರೂ, ತಮ್ಮ ಜೀವನವನ್ನು ಲೆಕ್ಕಿಸದೇ ಸತ್ಯ,ಸತ್ಯೆ ಸುದ್ದಿಗಳನ್ನು ಜನತೆಗೆ ತಲುಪಿಸುವ ಕಾಯಕದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.

ಉಪವಿಭಾಗಧಿಕಾರಿ ಟಿ.ಸುರೇಶ್ ಕುಮಾರ್ ಮಾತನಾಡಿ ಪತ್ರಿಕೋದ್ಯಮವು ಪ್ರಜಾಪ್ರಭುತ್ವದಲ್ಲಿ ಆಡಳಿತಾತ್ಮಕ ವ್ಯವಸ್ಥೆಗಳು ಸರಿಯಾಗಿ ಕಾರ್ಯ ನಿರ್ವಹಿಸದ ಸಂದರ್ಭಗಳಲ್ಲಿ ಎಚ್ಚರಗೊಳಿಸುವ ಮಹತ್ವದ ಪಾತ್ರವಹಿಸುತ್ತದೆ. ಪತ್ರಿಕೆಗಳ ವರದಿಗಾರರು ಬರವಣಿಗೆಯ ಮೂಲಕ ವರದಿಗಳನ್ನು ತಂದು ವರದಿಗಳನ್ನು ಮುದ್ರಣಾ ಮಾಡಿ ಸಾರ್ವಜನಿಕರಿಗೆ ದಿಕ್ಕು ತೋರಿಸುವುದರ ಜೊತೆಗೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಪ್ರತಿನಿತ್ಯ ಶ್ರಮಿಸುತ್ತಿರುವುದು ಪತ್ರಕರ್ತರ ವೃತ್ತಿಗೆ ಗೌರವ ತರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಆಶಯನುಡಿಗಳನ್ನಾಡಿದ ಟಿವಿ9 ಹಿರಿಯ ಪತ್ರಕರ್ತ ಬಸವರಾಜ್ ದೊಡ್ಮನಿಯವರು ಸತ್ಯ, ನ್ಯಾಯ ಮತ್ತು ನಿಷ್ಠೆಗೆ ಹೆಸರಾಗಿದ್ದ ಪತ್ರಿಕೋದ್ಯಮ ಇತ್ತೀಚಿನ ದಿನಗಳಲ್ಲಿ ಉಳ್ಳವರ ಹಿಂದೆ ಓಡುತ್ತಿರುವುದು ಬೇಸರದ ಸಂಗತಿಯಾಗಿದೆ, ಪತ್ರಿಕೋದ್ಯಮವು ಸಮಾಜದ ಹಿತವನ್ನು ಕಾಪಾಡುವ ಪ್ರಮುಖ ವೃತ್ತಿಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಅದರ ಮೂಲ ಮೌಲ್ಯಗಳಿಂದ ದೂರ ಸರಿಯುತ್ತಿರುವುದು ಕಾಣುತ್ತಿದೆ ಎಂದು ಹೇಳಿದರು.

ಇತ್ತೀಚೆಗೆ ನಾಗರಿಕ ಪತ್ರಿಕೋದ್ಯಮ ಹೆಚ್ಚಾಗಿ ಬೆಳೆಯುತ್ತಿದ್ದು, ಇದರ ಪರಿಣಾಮವಾಗಿ ಸಂಪ್ರದಾಯಬದ್ಧ ಪತ್ರಿಕೋದ್ಯಮದ ಮೂಲ ಲಕ್ಷಣಗಳು ನಿಧಾನವಾಗಿ ಕಳೆದುಹೋಗುತ್ತಿವೆ, ಕೃತಕ ಬುದ್ಧಿಮತ್ತೆ ಮತ್ತು ನಾಗರೀಕ ಪತ್ರಿಕೋದ್ಯಮದಿಂದ ಇಂದಿನ ನೈಜ ಪತ್ರಿಕೋದ್ಯಮದ ಮೇಲೆ ಪ್ರಭಾವ ಬೀರುತ್ತಿದ್ದು, ಸರಿಯಾದ ಮಾರ್ಗದರ್ಶನವಿಲ್ಲದೆ ಬಳಸಿದರೆ ಮಾಹಿತಿ ತಪ್ಪಾಗುವ ಸಾಧ್ಯತೆ ಇದೆ, ಆದ್ದರಿಂದ ಪತ್ರಕರ್ತರು ನಿಷ್ಠೆ, ಸತ್ಯ ಹಾಗೂ ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು ಕೆಲಸ ಮಾಡುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.

ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯಪ್ಪ ಮಾತನಾಡಿ ಪತ್ರಕರ್ತರ ಕಷ್ಟ–ಕಾರ್ಪಣ್ಯಗಳಿಗೆ ವಾರ್ತಾ ಇಲಾಖೆ ಸದಾ ಧ್ವನಿಯಾಗಿದ್ದು, ಅವರಿಗೆ ಮಾಸಿಕ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಗ್ರಾಮೀಣ ಪತ್ರಕರ್ತರ ಕಲ್ಯಾಣಕ್ಕಾಗಿ ಸರ್ಕಾರ ಪತ್ರಕರ್ತರ ಉಚಿತ ಬಸ್ ಪಾಸ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಪತ್ರಕರ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಜಾಲತಾಣಗಳ ಪ್ರಭಾವ ದಿನೇದಿನೇ ಹೆಚ್ಚುತ್ತಿದ್ದು, ಸುಳ್ಳು ಸುದ್ದಿಗಳ ಹರಡುವಿಕೆಯೂ ಹೆಚ್ಚಾಗಿದೆ. ಆದ್ದರಿಂದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಸುದ್ದಿಗಳನ್ನು ಪರಿಶೀಲನೆ ಇಲ್ಲದೆ ನಂಬಬಾರದು ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ ಸುದ್ದಿ ಸಂಗ್ರಹಣೆಯ ಸಂದರ್ಭದಲ್ಲಿ ಹಲವಾರು ಬಾರಿ ಜೀವದ ಹಂಗನ್ನೂ ಲೆಕ್ಕಿಸದೆ ಕಾರ್ಯನಿರ್ವಹಿಸುವ ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿಯಾಗಿದ್ದಾರೆ, ಆದ್ದರಿಂದ ಅವರ ಭದ್ರತೆ ಹಾಗೂ ಕಲ್ಯಾಣಕ್ಕಾಗಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ ಎಂದರು.

ಸಿಪಿಐ ಮಹಾಂತೇಶ್ ಜಿ.ಸಜ್ಜನ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಕಾನಿಪ ಜಿಲ್ಲಾಧ್ಯಕ್ಷರಾದ ಪಿ.ಸತ್ಯ ನಾರಾಯಣ್

ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯ ಕಾರ್ಯ ನಿರತರ ಪತ್ರಕರ್ತ ತಾಲೂಕು ಘಟಕದ ಅಧ್ಯಕ್ಷ ತಳವಾರ ಚಂದ್ರಪ್ಪ ರವರು ವಹಿಸಿದ್ದರು, ಪಿ.ಕರಿಬಸಪ್ಪ ಸ್ವಾಗತಿಸಿದರು, ಕಾರ್ಯ ನಿರತರ ಪತ್ರಕರ್ತ ಕಾರ್ಯದರ್ಶಿ ಹೆಚ್.ದೇವೇಂದ್ರಪ್ಪ ನಿರೂಪಕರಾಗಿ ಕಾರ್ಯ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಕಾನಿಪ ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ, ಜಿಲ್ಲಾ ಕಾರ್ಯದರ್ಶಿ ಕೆ.ಲಕ್ಷ್ಮಣ್, ಜಿಲ್ಲಾ ಉಪಾಧ್ಯಕ್ಷ ಸಿ.ಕೆ.ನಾಗರಾಜ್, ಟಿ.ಬಿ.ರಾಜ, ಜಿಲ್ಲಾ ಸಮಿತಿ ಸದಸ್ಯ ಬಿ.ರಾಮ್ ಪ್ರಸಾದ್ ಗಾಂಧಿ, ಪತ್ರಕರ್ತರಾದ ನಾಗರಾಜ್ ನಾಯ್ಕ್, ಬಿ.ಮಾಧರರಾವ್, ಗುಡಿಹಳ್ಳಿ ಮಂಜುನಾಥ್, ಕೆ.ಕುಬೇರಪ್ಪ, ಎಂ.ಮಂಜುನಾಥ್, ಎಡಿಬಿ ಪ್ರಥಮ ದರ್ಜೆ ಕಾಲೇಜಿನ ಪ್ರಚಾರ್ಯ ಡಾ.ಸಿದ್ದಲಿಂಗ ಮೂರ್ತಿ, ಮುಖಂಡರಾದ ಹೆಚ್.ವಸಂತಪ್ಪ, ಪಿಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಲಾಟಿ ದಾದಪೀರ, ವಕೀಲ ಬಸವರಾಜ್ ಸಂಗಪ್ಪನವರ, ಇಸ್ಮಾಯಿಲ್ ಯಲಿಗಾರ, ಮೈದೂರು ರಾಮಣ್ಣ, ದೇವೇಂದ್ರಗೌಡ, ಗುಡಿ ನಾಗರಾಜ್, ಉದ್ದಾರ ಗಣೇಶ್, ಶಶಿಕುಮಾರ ನಾಯ್ಕ್, ವಿರೇಶ್ ನಾಯ್ಕ್, ಪ್ರಸಾದ ಕಾವಡಿ, ಹರಿಯಮ್ಮನಹಳ್ಳಿ ಶಿವರಾಜ್, ಮಲ್ಲಿಕಾರ್ಜುನ ಸೇರಿದಂತೆ ಎ ಡಿ ಬಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಜನರ ಕೈಗೆ ಸಿಗದ ಯಲಬುರ್ಗಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ !

satyadarshana

ಮತಾಂತರ ನಿಷೇಧ ಕಾಯ್ದೆಯನ್ನು ಬಲವಾಗಿ ಖಂಡಿಸಲು ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ.ಸಿದ್ದರಾಮಯ್ಯ  

satyadarshana

ರಾಜ್ಯದಲ್ಲಿ ಉಪಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದೆ.

satyadarshana

Leave a Comment